ರೈತರ ಸಾಲ ಮನ್ನಾ :ಜೆಡಿಎಸ್‌ ಕಾರ್ಯಕರ್ತರ ಸಂಭ್ರಮ

0
40

ಕನ್ನಡಮ್ಮ ಸುದ್ದಿ- ಬೈಲಹೊಂಗಲ: ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ರೂ. 2 ಲಕ್ಷ ಸಾಲ ಮನ್ನಾ ಮಾಡಿದ ಹಿನ್ನಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಪಟ್ಟಣದ ರಾಯಣ್ಣ ವೃತ್ತದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಶಂಕರ ಮಾಡಲಗಿ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ರೈತರ ಸಮಸ್ಯೆಗಳನ್ನು ಅರಿತುಕೊಂಡು ರೂ. 2 ಲಕ್ಷಗಳವರೆಗೆ ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದ್ದು ಸಂತಸ ನೀಡಿದೆ. ರೈತ ಇಂದು ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿದ್ದು ಸಿಲುಕಿದ್ದು ಸಾಲ ಮನ್ನಾದಿಂದ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದಲ್ಲಿ ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ ರೈತರ ಶ್ರೇಯೋಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತಿದೆ ಎಂದರು. ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಿದ್ದು ಮುಂಬರುವ ದಿನಗಳಲ್ಲಿ ರೈತರಿಗಾಗಿ ಇನ್ನೂ ಹತ್ತು ಹಲವಾರು ನೂತನ ಯೋಜನೆಗಳನ್ನು ಜಾರಿಗೆ ತರುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ನಿಂಗಯ್ಯ ದಾಬಿಮಠ, ಸೋಮಪ್ಪ ಹಳ್ಳೂರ, ಎಸ್‌.ಎಸ್‌.ಬಾಗೇವಾಡಿ, ಚಂದನ ಭಟ, ಶ್ರೀಶೈಲ ಪೂಜೇರಿ, ಅಜಿತ ಕೋಟಗಿ, ಅನಿಲ ದೊಡವಾಡ, ಕುಶಾಲ ತಾಂಜೇಕರ, ಅರುಣ ದೊಡವಾಡ, ರಾಮು ರಜಪೂತ, ಪ್ರಸಾದ ದೇಶಪಾಂಡೆ ಹಾಗೂ ಕಾರ್ಯಕರ್ತರು ಇದ್ದರು.

loading...