ಕಲೆಂ ವೃತ್ತಿಯಾಗಿಸಿಕೊಂಡು ಬದುಕುವದು ಕಷ್ಟ: ನಾಯ್ಕರ

0
45

ಕನ್ನಡಮ್ಮ ಸುದ್ದಿ-ಧಾರವಾಡ: ಜನಪದ ಕಲಾವಿದರು ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕು ನಡೆಸುವುದು ಕಷ್ಟ. ಏಕೆಂದರೆ ತಿಂಗಳಿಗೊಂದು ಕಾರ್ಯಕ್ರಮ ಸಿಗುವುದೇ ಕಷ್ಟ. ಇದರ ಜೊತೆಗೆ ಯಾವುದಾದರೂ ಉದ್ಯೋಗ ಮಾಡುವುದು ಒಳ್ಳೆಯದು ಎಂದು ಡಾ. ಲೋಹಿತ್‌ ಡಿ. ನಾಯ್ಕರ ಹೇಳಿದರು.
ರಾ.ಹಾ. ದೇಶಪಾಂಡೆ ಸಭಾಸಭಾವನದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಜೈ ಹನುಮಾನ ಜಾನಪದ ಮಹಿಳಾ ಸಂಘ (ರಿ) ಸಹಯೋಗದಲ್ಲಿ ಜಾನಪದ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಗ್ರಾಮೀಣ ಕಲಾವಿದರು ಇದನ್ನು ಯಾವುದೇ ಲೆಕ್ಕಿಸದೇ ತಲೆತಲಾಂತರಗಳಿಂದ ಬಂದ ಈ ಕಲೆಯನ್ನು ನಶಿಸಿಹೋಗದಂತೆ ಬೆಳೆಸುತ್ತಾ ಬಂದಿದ್ದಾರೆ. ದುಡ್ಡಿಗಾಗಿ ಅಥವಾ ಅಧಿಕಾರದ ಆಸೆಗಾಗಿ ಕಲೆಯನ್ನು ಬೆಳೆಸುತ್ತಿಲ್ಲ. ನಿಸ್ವಾರ್ಥಿಯಾಗಿ ಕಲೆಯ ಸೇವೆ ಮಾಡುತ್ತಾರೆ. ಸರ್ಕಾರದವರು ಕಲಾವಿದರಿಗೆ ಕೊಡಮಾಡುವ ಮಾಶಾಸನದ ವಯಸ್ಸಿನ ಅವಧಿ 58 ವರ್ಷ ಇದ್ದದ್ದನ್ನು 48 ವರ್ಷಕ್ಕೆ ಇಳಿಸಬೇಕು.
ಈಗ ಕೊಡುವ ಮಾಶಾಸನ ರೂ. 1500/- ಇದ್ದದ್ದನ್ನು ರೂ. 5000/-ಕ್ಕೆ ಏರಿಸಬೇಕು. ನಿಮ್ಮಲ್ಲಿ ಇರುವಂತಹ ಜ್ಞಾನವನ್ನು ಉಪಯೋಗಿಸಿಕೊಂಡು ಹಲವಾರು ಜನಪರ ಕವಿತೆಗಳನ್ನು ಬರೆದು ಪುಸ್ತಕ ರೂಪದಲ್ಲಿ ಹೊರತರಬೇಕು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿ, ಕಲಾವಿದರು ಹಾಗೂ ಕವಿಗಳಿಗೆ ನಮ್ಮ ಇಲಾಖೆ ಯಾವತ್ತೂ ಸಹಾಯ ಸಹಕಾರ ನೀಡುತ್ತದೆ. ಬಡ ಕಲಾವಿದರಿಗೆ ವಾದ್ಯ ಪರಿಕರ ಖರೀದಿಸಲು ಧನ ಸಹಾಯ ಕೊಡುತ್ತದೆ ಮತ್ತು ಸಂಘ ಸಂಸ್ಥೆಗಳಿಗೆ ಮಾಡಲಿಕ್ಕೆ ಧನ ಸಹಾಯ ನೀಡುತ್ತದೆ ಎಂದು ಹೇಳಿದರು.
ಸತೀಶ ತುರುಮರಿ ಅಧ್ಯಕ್ಷತೆವಹಿಸಿದ್ದರು. ಶಂಕರಲಿಂಗ ಶಿವಳ್ಳಿ, ಗಂಗಾದರ ಅಳಗವಾಡಿ, ಬಿ.ಕೆ. ಹೊಂಗಲ, ಗಂಗಾಧರ ಗಡಾದ, ಪ್ರಮೋದ ಜೋಶಿ, ಕುಮಾರಿ ಮಧುಮತಿ ಸಣಕಲ್‌, ಲಾಲಬಿ ಹುಲಕೋಟಿ, ಕುಮಾರಿ ಹೇಮಾವತಿ ಪಾಟೀಲ, ಕಮಲವ್ವ ವಗ್ಗರ, ಶಿಲ್ಪಾ ಹಿರೇಮಠ, ಶಿವರಾಜ ಸಣಕಲ್‌, ಯಕ್ಕೇರಪ್ಪ ನಡುವಿನಮನಿ, ಜಯಶ್ರೀ ಗೌಳಿ ಉಪಸ್ಥಿತರಿದ್ದರು.

loading...