ಸ್ವಚ್ಚತೆಗೆ ಆಧ್ಯತೆ ನೀಡಿ : ಡಾ.ಹನಮಗೌಡ

0
27

ಕನ್ನಡಮ್ಮ ಸುದ್ದಿ-ಹುನಗುಂದ: ನಮ್ಮ ಮನೆಯ ಸುತ್ತಮುತ್ತಲು ಸ್ವಚ್ಚತೆ ಇಲ್ಲದೇ ಮಾಲನ್ಯದಿಂದ ಕೂಡಿದ್ದರೆ ಆ ಸ್ಥಳದಲ್ಲಿ ಸೊಳ್ಳೆಗಳು ಸೃಷ್ಠಿಯಾಗಿ ಅವುಗಳು ಮನುಷ್ಯರಿಗೆ ಕಚ್ಚಿದರಿಂದ ಮಲೇರಿಯಾ ಹರಡುತ್ತೆ ಅದಕ್ಕೆ ಮುಜಾಗೃತವಾಗಿ ಮನೆಯ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಡಾ.ಹನಮಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಇದ್ದಲಗಿ ಗ್ರಾಮದ ಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಧನ್ನೂರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶರಣಬಸವೇಶ್ವರ ಪ್ರೌಢ ಶಾಲೆ ಸಹಯೋಗದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದವರು ಚರಂಡಿ ಸ್ವಚ್ಚಗೊಳಿಸುವುದು, ಟಾಯರ್‌, ತಂಗಿನ ಕಾಯಿಯ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಇದರಿಂದ ಮಲೇರಿಯಾ ರೋಗವನ್ನು ದೂರ ಮಾಡಲು ಸಾಧ್ಯ. ಪರಿಸರ ಶುದ್ಧಿಯಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ. ಅತೀಯಾದ ಮಾಲಿನ್ಯ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತೆದೆ. ಆನಾಫೀಲ್ಸ್‌ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತೆದೆ. ಅದಕ್ಕೆ ಸೊಳ್ಳೆಗಳ ಸೃಷ್ಠಿಯಾಗದಂತೆ ನಮ್ಮ ಸುತ್ತಲಿನ ಪರಿಸರವನ್ನು ಶುಚ್ಚಿಯಾಗಿಟ್ಟಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಕುಮಾರ ವಡ್ಡರ ಅಧ್ಯಕ್ಷತೆವಹಿಸಿ ಮಾತನಾಡಿ ಆರೋಗ್ಯವೇ ಭಾಗ್ಯ ಎನ್ನುವ ಮಾತು ನಿಜಕ್ಕೂ ಸತ್ಯವಾದುದು ಹಣವನ್ನು ಕೊಟ್ಟರೆ ಎಲ್ಲ ವಸ್ತುಗಳು ಸಿಗುತ್ತವೆ ಆದರೆ ಆರೋಗ್ಯವನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಲವಾರು ಮಹಾಮಾರಿ ರೋಗಗಳು ಸೊಳ್ಳೆಗಳಿಂದಲೇ ಹುಟ್ಟುತ್ತಿದ್ದು ಅದಕ್ಕೆ ಆ ಸೊಳ್ಳೆಗಳು ಸೃಷ್ಠಿಯಾಗದಂತೆ ನಮ್ಮ ಮನೆ ಹಾಗೂ ನೆರೆಹೊರೆಯ ಸ್ಥಳಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಲೇರಿಯಾ ರೋಗ ಹರಡದಂತೆ ಜಾಗೃತಿ ಮೂಡಿಸಲು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಯಲ್ಲಿ ಮಲೇರಿಯಾ ರೋಗವನ್ನು ತಡೆಯಲು ಅನುಸರಿಸುವ ಕ್ರಮದ ಬಗ್ಗೆ ಘೋಷಣೆ ಕೂಗಿ ಜನ ಜಾಗೃತಗೊಳ್ಳಿಸಿದರು.
ಈ ವೇಳೆ ಗ್ರಾ.ಪಂ ಸದಸ್ಯ ನೀಲಮ್ಮ ಚಲವಾದಿ, ಅನುಸೂಯಾ ಬಡ್ಡಿ, ಸಹ ಶಿಕ್ಷಕ ಎಸ್‌.ಮಾಣಿಕಪ್ಪ, ಎಚ್‌.ಎಂ.ಗೌಡರ, ಟಿ.ಕೆ.ತಾರಿವಾಳ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಎನ್‌.ಎಂ.ಮುದೂರ ನಿರೂಪಿಸಿದರು. ಶಿಕ್ಷಕ ಜೆ.ಆರ್‌.ಉಪನಾಳ ವಂದಿಸಿದರು.

loading...