ವಚನ ಸಿಂಚನ-56

0
106

ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು

ಲಿಂಗಘನವೆಂಬೆನೆ? ಕಲುಕುಟಿಗರ ಕೈಯೆ ಮಾಡಿಸಿಕೊಂಡು ಕಿರಿದಾಯಿತ್ತು

ಭಕ್ತ ಘನವೆಂಬೆನೆ? ತನುಮನಧನ ವಂಚನೆಯಿಂದ ಕಿರಿದಾಯಿತ್ತು

ಇಂತೀ ತ್ರಿವಿಧ ನಿಷ್ಪತ್ತಿಯಾಗದನ್ನಕ್ಕರ,

ಕೂಡಲಚನ್ನಸಂಗಮದೇವ ಎಂತೊಲಿವನೊ?

ಲಿಂಗಾಯತಧರ್ಮದ ತತ್ತ-್ವಜ್ಞಾನದಲ್ಲಿ ಜಂಗಮ, ಲಿಂಗ ಮತ್ತು ಭಕ್ತ ಈ ಮೂರನ್ನೂ ಪರಶಿವಸ್ವರೂಪವೆಂದೇ ಭಾವಿಸಲಾಗಿದೆ. ಪ್ರತಿಯೊಂದರಲ್ಲಿ ಇರುವ ವಿಶಿಷ್ಟ ಲಕ್ಷಣಗಳಿಂದಾಗಿ ಪರಶಿವ ಸ್ವರೂಪ ಪ್ರಾಪ್ತವಾಗಿದ್ದರೂ, ತಮ್ಮ ತಮ್ಮ ಕರ್ತವ್ಯ ಗಳಿಂದ ವಿಮುಖವಾದಾಗ ಅಥವಾ ಅವುಗಳ ಲಕ್ಷಣಗಳಲ್ಲಿ ಕುಂದುಂಟಾದಾಗ ಅವು ತಮ್ಮ ಘನತೆಯನ್ನು ಮತ್ತು ಸ್ವರೂಪವನ್ನು ಕಳೆದುಕೊಳ್ಳುತ್ತವೆ ಎಂಬುದನ್ನು ಸೂಚಿಸುತ್ತ, ಅವಿರಳ ಜ್ಞಾನಿ ಚನ್ನಬಸವಣ್ಣನ ವರು ಪರಶಿವ ಸ್ವರೂಪನಾಗುವ ಪರಿಯನ್ನು ಈ ವಚನದಲ್ಲಿ ವಿವರಿಸಿದ್ದಾರೆ.

ಲಿಜಂಗಮಳಿ ತತ್ವವಾಚಕವಾದುದು. ಆದರೆ ಇತ್ತೀಚೆಗೆ ಅದು ಜಾತಿವಾಚಕವಾಗಿ ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವುದು ದುರದೃಷ್ಟಕರ. ಜಂಗಮದ ನಿಜಸ್ವರೂಪ ವನ್ನು ಬಸವಾದಿ ಶಿವಶರಣರು ತಮ್ಮ ವಚನಗಳ ಮೂಲಕ ಹಲವಾರು ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಅವರ ದೃಷ್ಟಿಯಲ್ಲಿ ಜಂಗಮನು ಪರಶಿವನಿಂದ ಭಿನ್ನನಲ್ಲ. ಲಿಂಗಾಂಗ ಸಾಮರಸ್ಯವನ್ನು ಸಾಧಿಸಿಕೊಂಡಿರುವ ಅವನು ಸಾಕ್ಷಾತ್ ಪರಶಿವ ಸ್ವರೂಪಿಯೆ. ಲಿಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ| ಚರತ್ಯ ತಿಥಿ ರೂಪೇಣ ನಮಸ್ತೇ ಜಂಗಮಾತ್ಮನೇ|| ಎಂದು ಒಂದೆಡೆ ವಿವರಣೆ ನೀಡಲಾಗಿದೆ. ಸಾಕ್ಷಾತ್ ಪರಶಿವನೇ ಜನಕಲ್ಯಾಣಕ್ಕಾಗಿ, ಭಕ್ತೌದ್ದಾರಕ್ಕಾಗಿ ಜಂಗಮರೂಪದಲ್ಲಿ ಸಂಚರಿಸುತ್ತಾನೆ ಎಂಬ ಈ ಮಾತು ಕೂಡ ಜಂಗಮನು ಪರಶಿವ ಸ್ವರೂಪಿ ಎಂಬ ಶರಣವಾಣಿಗೆ ಪೂರಕವಾಗಿದೆ. ನಿತ್ಯತೃಪ್ತನಾಗಿರುವ ಜಂಗಮನು ಅಂತರಂಗದಲ್ಲಿ ಅರಿವನ್ನೂ, ಬಹಿರಂಗದಲ್ಲಿ ಆಚಾರವನ್ನೂ ಹೊಂದಿದವನು. ಹಾಗೆಯೇ ಅರಿವು ಆಚಾರಗಳನ್ನು ಒಂದಾಗಿಸಿಕೊಂಡು ಅನುಭಾವಿಯಾದವನು. ಆದ್ದರಿಂದಲೇ ಧರ್ಮಗುರು ಬಸವಣ್ಣನವರು ಜಂಗಮಕ್ಕೆ ಗುರುವಿಗಿಂತಲೂ ಮಿಗಿಲಾದ ಗೌರವ ಕೊಟ್ಟಿದ್ದಾರೆ. ಜಂಗಮನಾ ದವನು ಧಾರ್ಮಿಕ ಕ್ರಿಯಾಚ ರಣೆಗಳ ಸಂದರ್ಭದಲ್ಲಿ ಗುರು ವಿನ ಕರ್ತವ್ಯಗಳನ್ನು ನಿರ್ವಹಿ ಸುವ ಅಧಿಕಾರವುಳ್ಳ ವನಾಗಿ ರುವುದರಿಂದ ಗುರು ವಿನ ಸ್ಥಾನ ಜಂಗಮನಿ ಗಿಂತಲೂ ಗೌಣವಾಗುತ್ತದೆ.

ಹೀಗೆ ಗುರುವಿಗಿಂತ ಲೂ ಉನ್ನತಸ್ಥಾನ ಪಡೆದಿ ರುವ, ಪರಶಿವ ಚೈತನ್ಯದ ಕುರುಹಾಗಿ ರುವ ಇಷ್ಟಲಿಂಗದ ಮುಖವಾಗಿರುವ ಜಂಗಮ ನು ತನ್ನ ಸ್ಥಾನದ ಘನತೆ ಗೌರವಗಳನ್ನು ಸಂರಕ್ಷಿಸಿ ಕೊಂಡು ಹೋಗುವ ಜವಾ ಬ್ದಾರಿಯನ್ನು ಹೊಂದಿದ್ದಾನೆ. ಅಂತಹ ಜಂಗಮ ತನ್ನ ಭೌತಿಕ ಜೀವನೋಪಾಯಕ್ಕಾಗಿ ಅದು ಬೇಕು, ಇದು ಬೇಕು ಎಂದು ಭಕ್ತರನ್ನು ಕೇಳಿ ಪಡೆದರೆ ತನ್ನ ಜಂಗಮತ್ವ ವನ್ನು ಕಳೆದುಕೊಂ ಡಂತೆಯೆ. ಬೇಡುವಾತ ಜಂಗ ಮನಲ್ಲ, ಬೇಡಿಸಿ ಕೊಂಬಾತ ಭಕ್ತನಲ್ಲಳಿ ಎಂಬುದು ಲಿಂಗಾ ಯತ ಸಂವಿಧಾನ. ನಿತ್ಯತೃಪ್ತನೇ ಜಂಗಮನೆಂದಾಗ ಅಲ್ಲಿ ಬಯಕೆಗೆ ಅವಕಾಶವೆಲ್ಲಿ? ಬೇಕು ಬೇಡ ಎಂಬ ಬಯಕೆಗಳಿಂದ ಮುಕ್ತನಾಗಿ ಬಯಸದೆ ಬಂದುದನ್ನು ಲಿಂಗರ್ಪಿತವ ಮಾಡಿ ಸ್ವೀಕರಿಸಬೇಕು. ಲಿಂಗಸ್ಥಲದಲ್ಲಿ ನಿಂತು ಭಕ್ತರು ಸಮರ್ಪಿಸಿದ ಪದಾರ್ಥವನ್ನು ಪಡೆವಲ್ಲಿ ತಾನಿಲ್ಲದಿರಬೇಕು. ಅದಬಿಟ್ಟು ಭಾವದ ಬಯಕೆಗೊಳಗಾಗಿ ಭಕ್ತರನ್ನು ಕಾಡಿ ಬೇಡುವುದು, ಪ್ರಸಂಗ ಬಂದರೆ ಜರಿದು, ಹೆದರಿಸಿ ಪಡೆಯುವುದು, ಕೊಡದಿದ್ದರೆ ಕೋಪಿಸಿಕೊಂಡು ಹೋಗುವುದು ಜಂಗಮತ್ವದ ಲಕ್ಷಣವಲ್ಲ. ಅದು ಜಂಗಮನ ಸಣ್ಣತನವನ್ನು ತೋರಿಸುತ್ತದೆ.

ಇನ್ನು ಇಷ್ಟಲಿಂಗವು ಕೂಡ ಪರಶಿವ ಚೈತನ್ಯವೇ. ಸದ್ಗುರುವು ಆ ಪರಶಿವ ಚೈತನ್ಯವನ್ನು ನಮ್ಮ ಕರಸ್ಥಲಕ್ಕೆ ಚುಳುಕಾಗಿಸಿ ದಯಪಾಲಿಸಿದ್ದಾನೆ. ಒಂದರ್ಥದಲ್ಲಿ ನಮ್ಮ ಅರಿವಿನ ಕುರುಹಾಗಿರುವ ಇಷ್ಟಲಿಂಗವು ಮಹಾಲಿಂಗದ ಸ್ವರೂಪವಾಗಿದೆ. ಆ ಮಹಾಲಿಂಗವನ್ನು ಅರ್ಚಿಸಿ, ಅನುಸಂಧಾನಿಸಿ, ತನ್ನನ್ನು ತಾನು ಸಂಪೂರ್ಣವಾಗಿ ಮಹಾಲಿಂಗಕ್ಕೆ ಸಮರ್ಪಿಸಿಕೊಳ್ಳುವ ಮೂಲಕ ಮಹಾಲಿಂಗವೇ ತಾನಾಗಬೇಕು. ಹೀಗೆ ಮಹಾಲಿಂಗದಲ್ಲಿ ಬೆರೆಸಿ ಬೇರಿಲ್ಲದಂತೆ ಸಾಮರಸ್ಯವನ್ನು ಸಾಧಿಸಿದ ಬಳಿಕ ಮತ್ತೆ ಆ ಲಿಂಗವನ್ನು ಸ್ಥಾವರವೆಂದೋ ಅಥವಾ ಕಲುಕುಟಿಕನ ಕೈಯಲ್ಲಿ ಸಿದ್ಧವಾದ ಲಿಂಗವೆಂದೋ ಭಾವ ಬಂದರೆ ಆ ಮಹಾಘನಲಿಂಗ ಕಿರಿದಾದಂತೆಯೆ. ಲಿಕುರುಹು ನಾಸ್ತಿಯಾದುದೇ ಲಿಂಗಳಿ ಎಂಬುದು ಶರಣ ಸಂಹಿತೆ. ಆದ್ದರಿಂದ ಅರುಹಿನ ಕುರಿಹಿನ ಮೂಲಕ ಲಿಂಗಾಂಗ ಸಾಮರಸ್ಯವನ್ನು ಸಾಧಿಸಿ ಲಿಂಗವೇ ತಾನು, ತಾನೇ ಲಿಂಗ ಎಂಬ ಭಾವವನ್ನು ಅಳವಡಿಸಿಕೊಳ್ಳದಿದ್ದರೆ ಕರಸ್ಥಲದ ಇಷ್ಟಲಿಂಗವು ತನ್ನ ಘನತೆಯನ್ನು ಕಳೆದುಕೊಂಡು ಬರಿ ಕುರುಹಾಗಿ ಕಿರಿದೆನಿಸುತ್ತದೆ.

ಕರಸ್ಥಲದ ಅರುಹಿನ ಕುರುಹಾದ ಇಷ್ಟಲಿಂಗವನ್ನು, ಹಾಗೆಯೇ ಆ ಇಷ್ಟಲಿಂಗದ ಮುಖವಾಗಿರುವ ಜಂಗಮವನ್ನು ಭಕ್ತಿಯಿಂದ ಅರ್ಚಿಸುವ ಮತ್ತು ಸರ್ವಸ್ವವನ್ನು ನಿರ್ವಂಚನೆಯಿಂದ ಸಮರ್ಪಿಸುವ ಭಕ್ತನೂ ಸಾಮಾನ್ಯನಲ್ಲ. ಲಿಂಗಾಯತ ತತ್ತ-್ವದಲ್ಲಿ ಅವನಿಗೂ ವಿಶೇಷ ಮನ್ನಣೆ ಇದೆ. ಲಿಮಮ ಭಕ್ತಃ ಮಮಾಧಿಕಃಳಿ ಲಿಭಕ್ತಕಾಯ ಮಮಕಾಯಳಿ ಮುಂತಾದ ಶರಣವಾಣಿಗಳು ಈ ಮಾತನ್ನು ಶೃತಪಡಿಸುತ್ತವೆ. ಅಂತಹ ಘನತರ ಸ್ಥಾನವನ್ನು ಹೊಂದಿದ ಭಕ್ತನು ನಾನು ನನ್ನದೆಂಬ ಅಹಂಕಾರ ಮಮಕಾರವನ್ನು ಅಳಿದಿರಬೇಕು. ನಡೆ ನುಡಿಯಲ್ಲಿ ಎರಡಿಲ್ಲದೆ ಒಂದಾಗಿರಬೇಕು. ತನು ಮನ ಧನಗಳನ್ನು ಶಿವನ ಸೊತ್ತೆಂದು ಭಾವಿಸಿ, ನದಿಯ ನೀರನ್ನು ನದಿಗೆ ಸಮರ್ಪಿಸಿದಂತೆ ಗುರುಲಿಂಗ ಜಂಗಮಕ್ಕೆ ವಂಚನೆಯಿಲ್ಲದೆ ಸಮರ್ಪಿಸಿ ದಾಸೋಹಂಭಾವದಿಂದ ಇರಬೇಕು. ಒಂದು ವೇಳೆ ತನುಮನಧನವನ್ನು ಗುರುಲಿಂಗ ಜಂಗಮಕ್ಕೆ ಸಮರ್ಪಿಸುವಲ್ಲಿ ವಂಚಿಸಿದರೆ, ಅಥವಾ ಬರೀ ಅಭಿಮಾನಕ್ಕೆ  ಮತ್ತು ಆಡಂಬರಕ್ಕಾಗಿ ಮಾಡಿದರೆ, ಭೌತಿಕ ಭೋಗದ ಬಯಕೆಯಿಂದ, ಸ್ವಹಿತಾಸಕ್ತಿ, ಮಾನಸಮ್ಮಾನ ಮತ್ತು ಮುಕ್ತಿಯ ಬಯಕೆಯಿಂದ ಮಾಡಿದರೆ ಭಕ್ತತ್ವಕ್ಕೆ ಹಾನಿಯುಂಟಾಗಿ ಭಕ್ತನೂ ಕಿರಿಯನಾಗುತ್ತಾನೆ.

ಆದ್ದರಿಂದ ಜಂಗಮವು ಭಕ್ತರನ್ನು ಬೇಡಬಾರದು. ಇಷ್ಟಲಿಂಗವನ್ನು ಬರೀ ಕುರುಹೆಂದು ಭಾವಿಸಬಾರದು. ಹಾಗೆಯೇ ಭಕ್ತನು ಗುರುಲಿಂಗ ಜಂಗಮಕ್ಕೆ ತನು ಮನ ಧನವನ್ನು ಅರ್ಪಿಸುವಲ್ಲಿ ವಂಚಿಸಬಾರದು. ಆಗ ಮಾತ್ರ ಜಂಗಮ ಲಿಂಗ ಮತ್ತು ಭಕ್ತ ತಮ್ಮ ಪರಶಿವ ಸ್ವರೂಪವನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯ ಎಂಬ ಅಭಿಪ್ರಾಯ ಈ ವಚನದ್ದು.

ಶ್ರೀ ಸಿದ್ಧರಾಮ ಮಹಾಸ್ವಾಮಿಗಳು

  ನಾಗನೂರು ರುದ್ರಾಕ್ಷಿಮಠ, ಬೆಳಗಾವಿ.

loading...

LEAVE A REPLY

Please enter your comment!
Please enter your name here