10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣ

0
90

ಕನ್ನಡಮ್ಮ ಸುದ್ದಿ-ಕುಷ್ಟಗಿ: ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ 2017-18ನೇ ಸಾಲಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಈ ಭಾರೀ ಜು. 26 ರಂದು ಜರುಗಲಿದ್ದು, ಈ ಸಮ್ಮೇಳನಕ್ಕೆ ಎಲ್ಲ ಕನ್ನಡಪರ ಸಂಘಟನೆಗಳು ಕನ್ನಡ ಮನಸ್ಸುಗಳು ಒಗ್ಗಟಾಗಿ ಸಮ್ಮೇಳನ ಯಶಸ್ವಿಗೊಳಿಸಲು ಸಹಕಾರ ನೀಡಬೇಕೆಂದು ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪೂರು ಹೇಳಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ10ನೇ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜರುಗುವ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನವೆಂದರೆ, ಎಲ್ಲರು ಸಹಕಾರ ನೀಡಿದಾಗ ಮಾತ್ರ ಸಮ್ಮೇಳನ ಯಶಸ್ವಿ ಹಾದಿಯಲ್ಲಿ ಸಾಗುತ್ತದೆ. ಹೀಗಾಗಿ ನಮ್ಮ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕ ಘಟಕವು ಸಮ್ಮೇಳನವನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದು, ಕನ್ನಡಾಂಬೆ ಥೇರನ್ನು ಎಳೆಯಲು ತಾಲೂಕಿನ ಜನತೆ ಟೊಂಕ ಕಟ್ಟಿ ನಿಂತುಕೊಂಡಿದ್ದಾರೆ ಎಂದರು.
10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಕಸಾಪ ಎಲ್ಲಾ ಅಜೀವ ಸದಸ್ಯರು ಸಮ್ಮೇಳನಕ್ಕೆ ಸಹಕಾರ ನೀಡಬೇಕು, ಕುಷ್ಟಗಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ರೈತರಿಗೆ ಉಪಯುಕ್ತವಾಗುವಂತಹ ಕವಿಗೋಷ್ಠಿಗಳನು ಹಮ್ಮಿಕೊಳ್ಳಲಾಗುವುದು ಎಂದರು. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಂಘ-ಸಂಸ್ಥೆ ಪ್ರತಿನಿಧಿ ರವೀಂದ್ರ ಬಾಕಳೆ ಮಾತನಾಡಿ ಎಲೆಮರೆ ಕಾಯಿಯಂತಿರುವ ಸಾಹಿತಿಗಳು, ಕವಿಗಳು, ಸಾಕಷ್ಟು ಇದ್ದು, ಅಂತವರನ್ನು ಇಲ್ಲಿಯವರೆಗೂ ಕೂಡಾ ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಸಮ್ಮೇಳನದ ಕೋಶಾಧ್ಯಕ್ಷರಾದ ಪುರಸಭೆ ಅಧ್ಯಕ್ಷ ಸಯ್ಯದ ಮೈನುದ್ದೀನ್‌ ಮುಲ್ಲಾ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಜಿಲ್ಲಾ ಕ.ಸಾ.ಪ. ಸಂಘ ಸಂಸ್ಥೆಗಳ ಪ್ರತಿನಿಧಿ ರವೀಂದ್ರ ಬಾಕಳೆ, ತಾಲೂಕಾ ಕ.ಸಾ.ಪ. ಅಧ್ಯಕ್ಷ ನಟರಾಜ ಸೋನಾರ, ಕಾರ್ಯದರ್ಶಿ ಪ್ರಕಾಶ ಬೆದವಟಗಿ, ಕ.ಸಾ.ಪ. ಕಾರ್ಯಕಾರಿ ಮಂಡಳಿ ಸದಸ್ಯರಾದ ಶ್ರೀಕಾಂತ ಸರಗಣಾಚಾರಿ, ತಾಜುದ್ದೀನ ದಳಪತಿ, ಭಾರತಿ ನೀರಗೇರಿ, ವೀರೇಶ ಬಂಗಾರಶೆಟ್ಟರ, ಶಿವರಾಜ ಪೂಜಾರ, ನಾಗರಾಜ ಶೆಟ್ಟರ್‌, ಪರಶುರಾಮ ನಾಗರಾಳ, ವಸಂತ ಮೇಲಿನಮನಿ, ಶರಣಪ್ಪ ಹೂಗಾರ, ಮಂಜುನಾಥ ಮಹಾಲಿಂಗಪೂರ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

loading...