ಮಹಾಮಳೆ ಕಡಿಮೆಯಾದರೂ ನೆರೆ ತಗ್ಗಲಿಲ್ಲ

0
26
ಮಹಾಮಳೆ ಕಡಿಮೆಯಾದರೂ ನೆರೆ ತಗ್ಗಲಿಲ್ಲ

ಮಹಾಮಳೆ ಕಡಿಮೆಯಾದರೂ ನೆರೆ ತಗ್ಗಲಿಲ್ಲ
ಕನ್ನಡಮ್ಮ ಸುದ್ದಿ
ಚಿಕ್ಕೋಡಿ 19: ಪಶ್ಚಿಮ ಘಟ್ಟಗಳಲ್ಲಿ ವರುಣನ ಅಬ್ಬರ ಕಡಿಮೆಯಾಗಿದ್ದರೂ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಿರುವದರಿಂದ ಆಲಮಟ್ಟಿ, ರಾಜಾಪೂರ ಹಾಗೂ ಹಿಪ್ಪರಗಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವದರಿಂದ ನೀರಿನಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ತಾಲೂಕು ಹಾಗೂ ನೆರೆಯ ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿಯೂ ಬುಧವಾರ ಸಂಜೆಯಿಂದ ಮಳೆ ಕ್ಷೀಣಿಸಿದರೂ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 7 ಸೇತುವೆಗಳು ಜಲಾವೃತಗೊಂಡಿದ್ದು, ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜಾಪೂರ ಬ್ಯಾರೇಜ್ ಮುಖಾಂತರ ಕೃಷ್ಣಾ ನದಿಗೆ 1,80,522 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಬ್ಯಾರೇಜ್‍ದಿಂದ 1.85 ಲಕ್ಷ ಕ್ಯೂಸೆಕ್ ಮತ್ತು ಆಲಮಟ್ಟಿ ಜಲಾಶಯದಿಂದ 1,73,718 ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಸಲಾಗುತ್ತಿದೆ. ತಾಲೂಕಿನಲ್ಲಿ ನದಿ ತೀರದ ಎಲ್ಲ ಹಳ್ಳಿಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲದೇ ಕಂದಾಯ ಇಲಾಖೆ ಮತ್ತು ಪೊಲೀಸ ಇಲಾಖೆಯ ಅಧಿಕಾರಿಗಳು ಸಹ ನದಿ ತೀರದಲ್ಲಿಯೇ ಸಂಚರಿಸುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಾಗೃತಿ ವಹಿಸಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಮಳೆ ವಿವರ
ಕೋಯ್ನಾ-66 ಮಿ.ಮೀ,ನವಜಾ-86 ಮಿ.ಮೀ,ಮಹಾಬಳೇಶ್ವರ-75 ಮಿ.ಮೀ,ಕಾಳಮ್ಮಾವಾಡಿ-43ಮಿ.ಮೀ, ವಾರಣಾ-37ಮಿ.ಮೀ,ರಾಧಾನಗರಿ-40 ಮಿ.ಮೀ,ಕೊಲ್ಲಾಪೂರ-10 ಮಿ.ಮೀ,ಸಾಂಗಲಿ-3 ಮಿ.ಮೀ, ಪಾಟಗಾಂವ-30 ಮಿ.ಮೀಟರ್‍ನಷ್ಟು ಮಳೆಯಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ಬುಧುವಾರ ಸಂಜೆಯಿಂದ ಮಳೆ ಇಲ್ಲ ಎಂದು ತಹಸೀಲ್ದಾರ ಸಿ.ಎಸ್.ಕುಲಕರ್ಣಿ ತಿಳಿಸಿದ್ದಾರೆ.

ಬಾಕ್ಸ:
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ನದಿ ತೀರದ ಜನರಿಗೆ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ.
ಸಿ.ಎಸ್.ಕುಲಕರ್ಣಿ
ತಹಶೀಲ್ದಾರ, ಚಿಕ್ಕೋಡಿ

loading...