ದುಬಾರಿ ಐಪೋನ್ ವಿಚಾರ: ಇಕ್ಕಟ್ಟಿಗೆ ಸಿಲುಕಿದ ಸರ್ಕಾರ

0
20

ಬೆಂಗಳೂರು: ದುಬಾರಿ ಐಪೋನ್ವಿಚಾರದಲ್ಲಿ ರಾಜ್ಯ ಸಮಿಶ್ರ ಸರ್ಕಾರ ಮುಜಗರಕ್ಕೆ ಒಳಗಾಗಿರುವ ಬೆನ್ನೆಲ್ಲೇ ಇದೇ ವಿಷಯ ಇದೀಗ ಬಿಜೆಪಿಯಲ್ಲೀ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಸುತ್ತ ಸುಮಾರು 89 ಸಾವಿರ ರೂಪಾಯಿ ಮೌಲ್ಯದ ಆ್ಯಪಲ್ ಐಪೋನ್ ನನ್ನು ಬಿಜೆಪಿ ಸೇರಿದಂತೆ ಇತರೆ ಸಂಸದರಿಗೆ ನೀಡಲಾಗಿದೆ.ಆದರೆ ಈ ಐಪೋನ್ ನೀಡಿರುವುದರಿಂದ ಈಗ ಸಮಿಶ್ರ ಸರ್ಕಾರ ಭಾರೀ ಮುಜುಗರಕ್ಕೆ ಒಳಗಾಗಿದೆ.
ಒಂದು ಕಡೆ ಸಿಎಂ ಕುಮಾರಸ್ವಾಮಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳುತ್ತಿದ್ದರೇ,ಇನ್ನೊಂದು ಕಡೆ ಅವರದ್ದೆ ಸರ್ಕಾರ ಇಂತಹ ದುಬಾರಿಐಪೋನ್ ನೀಡುವ ಮೂಲಕ ಹಣ ಪೋಲು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಸಮಿಶ್ರ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ದುಬಾರಿ ಐಪೋನ್ ನೀಡಿರುವುದು ತಾವೇ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮ್ಮದೇ ಸ್ವತಃ ಹಣದಿಂದ ದುಬಾರಿಐಪೋನ್ ಕೊಡಿಸಿದ್ದೇನೆ ಎಂದು ಹೇಳಿಕೆ ನೀಡಿ ಈ ವಿವಾದವನ್ನು ತಣ್ಣಾಗಿಸಲು ಮುಂದಾಗಿದ್ದಾರೆ.ಆದರೂ ಬಿಜೆಪಿ ಸಂಸದರು ದುಬಾರಿ ಐಪೋನ್ ಹಿಂದಿರುಗಿಸುವ ಮೂಲಕ ಈ ವಿವಾದವನ್ನು ಜೀವಂತವಾಗಿಡಲು ಮುಂದಾಗಿದ್ದಾರೆ.
ಇದೇ ವೇಳೆ ದುಬಾರಿ ಐಪೋನ್ಹಿಂದಿರುಗಿಸುವ ವಿಷಯದಲ್ಲಿ ಬಿಜೆಪಿ ಸಂಸದರಲ್ಲಿಯೇ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಎನ್ನಲಾಗಿದ್ದು,ಕೆಲವು ಬಿಜೆಪಿ ನಾಯಕರು ಐಪೋನ್ ತಗೊಂಡಿದ್ದರೂ ಅದನ್ನು ಬಡ ವಿದ್ಯಾರ್ಥಿಗೋ ಅಥವಾ ಗನ್‍ಮ್ಯಾನ್ ಗೋ ಕೊಡಬಹುದಿತ್ತು. ಅದನ್ನು ಬಿಟ್ಟು ಸಿಎಂಗೆ ಪತ್ರ ಬರೆದು ದೊಡ್ಡ ವಿಷಯ ಮಾಡೋದು ಏನಿತ್ತು? ಚುನಾವಣೆಗೆ ಕೋಟಿ ಕೋಟಿ ಖರ್ಚು ಮಾಡುತ್ತಾರೆ, ಅದನ್ಯಾರು ಕೇಳುತ್ತಾರೆ? ಕೋಟಿ ಕೋಟಿ ಚುನಾವಣೆ ವೆಚ್ಚದ ಮುಂದೆ 50 ಸಾವಿರದ ಐಪೋನ್ ಯಾವ ಲೆಕ್ಕ. ಈಗ ಐಪೋನ್ ತಿರಸ್ಕರಿಸಿ ನಮ್ಮ ಕೆಲಸಗಳು ಆಗಬೇಕಾದರೆ ಮತ್ತೆ ನಾವು ಸಚಿವರ ಬಳಿಯೇ ಹೋಗಬೇಕು.ರಾಜೀವ್ ಚಂದ್ರಶೇಖರ್, ಅನಂತ್ ಕುಮಾರ್ ನೀವು ದೊಡ್ಡವರು. ನಾವು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಚಿವರ ಬಳಿಯೇ ಹೋಗಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇಂತಹ ವಿಚಾರವನ್ನು ಬಹಿರಂಗಗೊಳಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಸಂಸದರು ಕೂಡ ದುಬಾರಿ ಐಪೋನ್ವಿಚಾರದ ಬಗ್ಗೆ ಬೇಸರಗೊಂಡಿದ್ದು,ಕೇವಲ ನಮ್ಮ ಪಕ್ಷದ ಕೆಲವರಿಗೆ ಮಾತ್ರ ಈ ದುಬಾರಿ ಐಪೋನ್ ನೀಡಲಾಗಿದೆ.ಉಳಿದಂತೆ ನಮಗೆ ನೀಡಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

loading...