ತೋವಿವಿಗೆ ಸಚಿವ ಮನಗೂಳಿ ಭೆಟಿ ಪರಿಶೀಲನೆ

0
54

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಇತ್ತಿÃಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೋವಿವಿಯ ವಿವಿಧ ವಿಭಾಗಗಳಾದ ಮಣ್ಣು-ನೀರು, ಗಿಡಗಳ್ನು ಪರೀಕ್ಷಿಸುವ ವಿಭಾಗ, ಜೈವಿಕ ತಂತ್ರಜ್ಞಾನ ವಿಭಾಗ, ಕೊಯ್ಲೊÃತ್ತರ ತಂತ್ರಜ್ಞಾನ ನಿರ್ವಹಣೆ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ತೋಟಗಾರಿಕೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾಳಿಂಬೆ ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ಮಾದರಿಗಳಲ್ಲಿ ಬೆಳೆದ ದಾಳಿಂಬೆ ಕ್ಷೆÃತ್ರವನ್ನು ಪರಿಶೀಲಿಸಿ ಸಲಹೆ ನೀಡಿದರು. ತೋಟಗಾರಿಕೆ ವಿವಿಯ ಕುಲಪತಿ ಡಾ.ಎಚ್.ಬಿ.ಲಿಂಗಯ್ಯ ಅವರು ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ತೋವಿವಿ ಅಡಿಯಲ್ಲಿ ಒಟ್ಟು ೧೧ ತೋಟಗಾರಿಕೆ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ತೋಟಗಾರಿಕೆ ವಿಷಯದಲ್ಲಿ ಬಿ.ಎಸ್.ಸ್ಸಿ, ಎಂ.ಎಸ್.ಸ್ಸಿ ಹಾಗೂ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದ್ದು, ರೋಗ ಮತ್ತು ಕೀಟ ನಿಯಂತ್ರಣಕ್ಕಾಗಿ ವಿವಿಧ ಜೈವಿಕ ಪೀಡೆನಾಶಕಗಳನ್ನು ಅಭಿವೃದಿ ಪಡಿಸಲಾಗುತ್ತಿದೆ. ಅಲ್ಲದೇ ತೋವಿವಿಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಂಶೋಧನೆಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ, ತೋವಿವಿಯ ಆಡಳಿತ ಮಂಡಳಿಯ ಸದಸ್ಯ ವಾಯ್.ಬಿ.ಪಾಟೀಲ, ಅಧಿಕಾರಿಗಳಾದ ಡಾ.ಕೆ.ಎಮ್.ಇಂದಿರೇಶ, ಡಾ.ಕೆ.ಎನ್.ಕಟ್ಟಿಮನಿ, ಡಾ.ವಾಯ್.ಕೆ.ಕೋಟಿಕಲ್, ಡಾ.ಎನ್.ಬಸವರಾಜ, ಡಾ.ಎಚ್.ಬಿ.ಪಾಟೀಲ, ಡಾ.ಎಮ್.ಎಸ್.ಕುಲಕರ್ಣಿ, ಎನ್.ಮುರಳಿ, ವಿಜಯಕುಮಾರ ಜ್ಯೊÃತೇನ್ನವರ ಹಾಗೂ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ ಮತ್ತು ದಾಳಿಂಬೆ ಉತ್ಕೃಷ್ಟ ಕೇಂದ್ರದ ಯೋಜನಾಧಿಕಾರಿ ಎಸ್.ಎಂ.ಬರಗಿಮಠ ಉಪಸ್ಥಿತರಿದ್ದರು.

loading...