ಮಹದಾಯಿ ಹೋರಾಟ: ರೈತರ ತ್ಯಾಗ ಅವಿಸ್ಮರಣೀಯ

0
56

ಮಾಬುಸಾಬ.ಎಮ್.ಯರಗುಪ್ಪಿ
ನವಲಗುಂದ: ಈ ದೇಶದ ಭೂಪುಟದಲ್ಲಿ ರೈತರ ಚಳುವಳಿಗೆ ಪ್ರೇರಣೆಯಾಗಿ ನಿಲ್ಲುವಂತಹ ಹೋರಾಟದ ಸ್ಥಳವೆಂದರೆ ನವಲಗುಂದ-ನರಗುಂದ. ಇಲ್ಲಿ ನಡೆದ ರೈತರ ಚಳುವಳಿಗಳು ರಾಜ್ಯಾದ್ಯಂತ ರೈತ ಸಂಘ ಕಟ್ಟಲು ಪ್ರೇರಣೆಯಾಗಿದ್ದು ಮಾತ್ರ ಸುಳ್ಳಲ್ಲ. ಸದ್ಯ ಈ ಭಾಗದಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ ಹಾಗೂ ಮಹದಾಯಿ ಕಿಚ್ಚು ರಾಷ್ಟ್ರ ರಾಜಧಾನಿಯವರೆಗೆ ಹಬ್ಬಿದೆ. ಈ ಹೋರಾಟ ನಿತ್ಯ ನಿರಂತವೆನ್ನುವಂತೆ ಮೂರು ವರ್ಷದಿಂದಲೂ ನಡೆದುಕೂಂಡು ಬೂದಿ ಮುಚ್ಚಿದ ಕೆಂಡವಾಗಿ ಉಳಿದಿದೆ. ಇದನ್ನೇಲ್ಲಾ ನೋಡಿದಾಗ ಮತ್ತೂಂದು ಬಂಡಾಯವಾದರೂ ಸರಿ ನೀರು ಪಡದೇ ತೀರುತ್ತೇವೆ ಎನ್ನುವ ರೈತರ ಛಲ ಮಾತ್ರ ಅಚಲವಾಗಿ ಉಳಿದಿದೆ.
ಕೃಷಿಯನ್ನೇ ನಂಬಿ ಬದುಕುತ್ತಿರುವಂತಹ ಇವೆರಡು ತಾಲೂಕುಗಳ ಇತಿಹಾಸವನ್ನು ಕೆದಕಿ ನೋಡಿದಾಗ ನಮಗೆ ಕಂಡು ಬರುವುದು ರೈತರ ಹೋರಾಟ, ರಕ್ತಪಾತ, ಗೋಲಿಬಾರ್‍ನಂತಹ ಘಟನೆಗಳೆ ತುಂಬಿ ತುಳಕುತ್ತಿವೆ. ಕಳಸಾ-ಬಂಡೂರಿಯ ಹೋರಾಟದ ಸಮಯವಂತು ಮತ್ತೇ 1980 ರ ಬಂಡಾಯವನ್ನು ನೆನಪಿಸುವಂತೆ ಮಾಡಿದೆ. 1979ರಲ್ಲಿ ಬರಗಾಲ ಬಿದ್ದಾಗ ಕಾಲುವೆಗಳಿಂದ ರೈತರ ಹೋಲಗಳಿಗೆ ನೀರು ಬರುವುದು ನಿಂತು ಹೋಯಿತು. ಈ ಸಂದರ್ಭದಲ್ಲಿ ಬೆಳೆಯುತ್ತಿದ್ದ ಹತ್ತಿ ಮತ್ತು ಗೋವಿನಜೋಳದ ಬೆಲೆಯೂ ಸಂಪೂರ್ಣವಾಗಿ ಇಳಿಕೆಯಾಯಿತು. ಇದರಿಂದ ರೈತರು ಕಂಗಾಲಾಗಿ ಹೋಗಿದ್ದರು. ಬ್ಯಾಂಕ್‍ಗಳಿಂದ ಮಾಡಿದ ಸಾಲ ತೀರಿಸಲಾಗದೇ ದಿವಾಳಿಯಾಗುವಂತಹ ಪರಿಸ್ಥಿತಿಗೆ ಬಂದು ನಿಂತರು. ವಾಡಿಕೆಯಂತೆ ಮುಂದಿನ ಬೆಳೆಯನ್ನಾದರು ತೆಗೆಯೋನವೆಂದರು ಬೀಜ, ಗೂಬ್ಬರಕ್ಕೇ ಹಣವಿಲ್ಲದಂತಹ ಸಂದಿಗ್ದ ಪರಿಸ್ಥಿತಿ ಅವರದ್ದಾಗಿತ್ತು. ಇಷ್ಟೇಲ್ಲಾ ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದರು ಸಹ ನೀರಿನ ಕರ ಮತ್ತು ಬೆಟರ್‍ಮೆಂಟ್ ಲೇವಿ ಅಲ್ಲಿ ಜಾರಿಯಲ್ಲಿತ್ತು ಇದಕ್ಕೇ ಕಂಗೆಟ್ಟ ನವಲಗುಂದ, ನರಗುಂದ ಮತ್ತು ಸವದತ್ತಿಯ ರೈತರು ಹೋರಾಟಕ್ಕೇ ತಯಾರಾಗುವಂತಹ ಲಕ್ಷಣಗಳು ಗೋಚರಿಸತೂಡಗಿದವು. 1979ರ ಡಿಸೆಂಬರ ತಿಂಗಳಲ್ಲಿ ಈ ಹೋರಾಟ ಬಯಲಿಗೆ ಬಂದಿತು. ಇದರ ನೇತೃತ್ವವನ್ನು ಮಲಪ್ರಭಾ ರೈತ ಹೋರಾಟ ಸಮನ್ವಯ ಸಮೀತಿಯು ವಹಿಸಿಕೂಂಡಿತು. ಇವರು ನೀರಿನ ಕರ ಮತ್ತು ಬೆಟರ್‍ಮೆಂಟ್ ಲೇವಿ ರದ್ದು ಮಾಡಬೇಕು, ಮತ್ತು ರೈತರು ಬೆಳೆದಂತಹ ಬೆಳೆಗಳಿಗೆ ಉತ್ತಮವಾದಂತಹ ಬೆಲೆಯನ್ನು ನೀಡಬೇಕೆಂಬ ಬೇಡಿಕೆಗಳೂಂದಿಗೆ ಹೋರಾಟವನ್ನು ಆರಂಭಿಸಿದರು, ಹೋರಾಟ ತೀವ್ರವಾಯಿತು ಸುಮಾರು ಆರು ತಿಂಗಳುಗಳ ಕಾಲ ನಡೆದಂತಹ ಹೋರಾಟಕ್ಕೇ ಸರ್ಕಾರ ಬಗ್ಗಲಿಲ್ಲಾ. ಯಾವ ಪ್ರತಿಭಟನೆಗೂ ಸರ್ಕಾರ ಜಗ್ಗದೆಯಿದ್ದಾಗ 1980 ಜುಲೈ 21 ರಂದು ನರಗುಂದ-ನವಲಗುಂದ ಹಾಗೂ ಸವದತ್ತಿ ತಾಲೂಕ ಬಂದ್‍ಗೆ ಕರೆ ನೀಡಿದ್ದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನರು ಹೋರಾಟದ ಕೇಂದ್ರಗಳಿಗೆ ಬಂದಿದ್ದರು. ಆವತ್ತು ರೈತರು ಬೃಹತ್ ಪ್ರತಿಭಟನೆಯ ಮೂಲಕ ಬ್ಯಾಂಕ್ ಮತ್ತು ಅಂಚೆ ಕಚೇರಿಗಳನ್ನು ಬಂದು ಮಾಡಿಸುತ್ತಾ ಬರುತ್ತಿದ್ದರು.
ಇನ್ನು ತಹಸೀಲ್ದಾರ್ ಕಾರ್ಯಾಲಯವನ್ನು ಬಂದ್ ಮಾಡಿಸಲು ರೈತರು ಬಂದಾಗ ರೈತರು ತಹಶೀಲ್ದಾರರನ್ನು ಕಾರ್ಯಾಲಯದ ಒಳಗಡೆ ಬಿಡಲಿಲ್ಲಾ ಆವಾಗಿನ ಜಿಲ್ಲಾಧಿಕಾರಿಗಳು ತಹಶೀಲ್ದಾರರನ್ನು ಕಾರ್ಯಾಲಯದ ಒಳಗಡೆ ಕರೆದುಕೂಂಡು ಹೊಗಬೇಕೆಂದು ಪೋಲಿಸರಿಗೆ ನಿರ್ದೇಶನ ನೀಡಿದರು. ಆಗ ಪೋಲಿಸರು ತಹಶೀಲ್ದಾರರನ್ನು ಕರೆದುಕೂಂಡು ಬರುತ್ತಿದ್ದಾಗ ರೈತರು ರಸ್ತೆಯಲ್ಲಿಯೇ ಮಲಗಿ ಬಿಟ್ಟರು ಆಗ ತಹಶೀಲ್ದಾರರು ರೈತರನ್ನು ತುಳಿದುಕುಂಡೆ ಕಚೇರಿಯೋಳಗೆ ಹೋದರು ಈ ಸುದ್ದಿ ತಾಲೂಕಿನಾದ್ಯಂತ ಹಬ್ಬಿ ಹೋರಾಟ ಮತ್ತೇ ತೀವ್ರವಾಯಿತು ಸಿಟ್ಟಿಗೆದ್ದ ರೈತರು ತಹಶೀಲ್ದಾರರ ಕಚೇರಿಗೆ ಬೆಂಕಿ ಇಟ್ಟರು ಇದರಿಂದ ಅಲ್ಲಿದ್ದಂತಹ ಎಲ್ಲ ದಾಖಲೆಗಳು ಸುಟ್ಟು ಕರಕಲಾಗಿ ಹೋದವು. ಮತ್ತು ಡಿವೈಎಸ್ಪಿಯ ತಲೆಗೆ ಪೆಟ್ಟಾಯಿತು, ತಹಶೀಲ್ದಾರರ ಕಿವಿಗೆ ಗಾಯವಾಯಿತು. ಈ ಮಧ್ಯ ಸಬ್ ಇನ್ಸಪೆಕ್ಟರ್ ಹಾರಿಸಿದಂತಹ ಗುಂಡು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಸಪ್ಪ ಲಕ್ಕುಂಡಿ ಹಾಗೂ ನರಗುಂದ ತಾಲೂಕಿನ ಈರಪ್ಪ ಕಡ್ಲಿಕೂಪ್ಪರಿಗೆ ಬಿದ್ದು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಆಗ ಪ್ರತಿಭಟನಾಕಾರರು ಅದೇ ಪೋಲಿಸ್ ಅಧಿಕಾರಿಯನ್ನು ಕೂಂದು ಹಾಕಿದರು ಇದರಿಂದ ಬೆಚ್ಚಿಬಿದ್ದ ಇನ್ನುಳಿದಂತಹ ಪೋಲಿಸರು ತಮ್ಮ ಯೂನಿಪಾರಂಗಳನ್ನು ಕಳೆದು ಕೈಯಲ್ಲಿ ಹಿಡಿದುಕೂಂಡು ಹೋಲವರಿ ಓಡಿ ಹೋಗಿ ಪ್ರಾಣ ಉಳಿಸಿಕೂಂಡರು.
ರೈತರ ಮೇಲೆÀ ಪ್ರಕರಣ ದಾಖಲು:
ನೀರನ್ನು ಕೇಳಿ ಹೋರಾಟ ಮಾಡಿದ್ದಕ್ಕೇ 2016 ಅಕ್ಟೋಬರನಲ್ಲಿ ರೈತರಿಗೆ ಸಿಕ್ಕ ಬಹುಮಾನ ಅವರ ಮೇಲೆ ಮನಬಂದಂತೆ ಲಾಠಿಯಿಂದ ಹಲ್ಲೇ ಮಾಡಿದ್ದು. ಸಿಕ್ಕ-ಸಿಕ್ಕವರನ್ನು ಮನೆಹೂಕ್ಕು ಕರೆದುಕೂಂಡು ಬಂದು ಬಳ್ಳಾರಿ ಜೈಲಿಗೆ ಹಾಕಿದ್ದು ಮತ್ತು ಅವರ ಮೇಲೆ ಕೂಲೆಯತ್ನದಂತಹ ಕೇಸನ್ನು ದಾಖಲಿಸಿ ನ್ಯಾಯಾಲಯದಲ್ಲಿ ಜಾಮೀನು ಸಿಗದಂತೆ ಮಾಡಿದ್ದೆಲ್ಲಾ ಪೊಲೀಸರು ಹೋರಾಟಕ್ಕೇ ನೀಡಿದಂತಹ ಬಹುಮಾನಗಳು. ಇವರು ರೈತರ ಮೇಲೆ ಗೂಂಡಾ ಕಾಯ್ದೆ, ಕೂಲೆ ಯತ್ನದಂತಹ ಪ್ರಕರಣಗಳನ್ನು ದಾಖಲಿಸಿದ್ದರು.

loading...