ಜನಪ್ರತಿನಿಧಿಗಳ, ಅಧಿಕಾರಿಗಳ ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ: ಶಾಸಕ ಬಂಡಿ

0
23

ಕನ್ನಡಮ್ಮ ಸುದ್ದಿ-ನರೇಗಲ್ಲ: ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮಧ್ಯೆ ಉತ್ತಮ ಸಮನ್ವಯತೆ ಇದ್ದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ಜಾರಿಗೆ ಬರಲು ಸಾಧ್ಯ. ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡದೇ ಪಟ್ಟಣದ ಸರ್ವತೋಮುಖ ಅಭಿವೃದ್ಧಿಯೊಂದೆ ಎಲ್ಲರ ಧ್ಯೇಯವಾಗಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ನಡೆದ ಪೌರ ಸನ್ಮಾನವನ್ನು ಸ್ವಿಕರಿಸಿ ಮಾತನಾಡಿದರು. ಜನರು ಬಹಳಷ್ಟು ನಿರೀಕ್ಷೆಗಳನ್ನಿಟ್ಟು ನಮಗೆ ಮತ ನೀಡಿರುತ್ತಾರೆ. ಅವರ ಆಶೋತ್ತರಗಳಿಗೆ ಸಕರಾತ್ಮಕವಾದಿ ಸ್ಪಂದಿಸುವುದು ನಮ್ಮ ಜವಬ್ದಾರಿಯಾಗಿದೆ. ಅದನ್ನು ಅರಿತುಕೊಂಡು ಅಧಿಕಾರಿಗಳು ಸ್ಪಂದಿಸಬೇಕು. ನರೇಗಲ್ಲ ಪಟ್ಟಣವು ರೋಣ ಮತಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣಗಳಲ್ಲೊಂದಾಗಿದ್ದು, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಬಹುತೇಕ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿರುವ ಪಟ್ಟಣವಾಗಿದೆ. ಉಳಿದಿರುವ ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಸಹಾಯ ಮಾಡಲಾಗುವುದು ಎಂದರು.
ಪಟ್ಟಣದ 17 ವಾರ್ಡುಗಳಲ್ಲಿ ತಲಾ ಒಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಖಾಸಗಿಯವರ ಸಹ ಭಾಗಿತ್ವದಲ್ಲಿ ಪ್ರಾರಂಭಿಸಬೇಕು. ನೆನೆಗುದಿಗೆ ಬಿದ್ದಿರುವ 1249 ಆಶ್ರಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ರೈತರ ಸಂಪರ್ಕ ಕೇಂದ್ರದ ಉಗ್ರಾಣ ನಿರ್ಮಾಣಕ್ಕೆ ಸ್ಥಳವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಷ ಮಾಡದೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಮಾಡಿಕೊಡಬೇಕು. ಪಟ್ಟಣದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ತರಲಾಗುವುದು ಎಂದರು. ನರೇಗಲ್ಲ ಪ.ಪಂ ವತಿಯಿಂದ ಶಾಸಕರಿಗೆ ಪೌರ ಸನ್ಮಾನ ಜರುಗಿತು. ಪ.ಪಂ ಅಧ್ಯಕ್ಷ ಕಲ್ಮೇಶ ತೊಂಡಿಹಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಿವಮ್ಮ ಬಾದನಟ್ಟಿ, ಸದಸ್ಯರಾದ ಶಶಿಧರ ಸಂಕನಗೌಡ್ರ, ಯಲ್ಲಪ್ಪ ಮಣ್ಣವಡ್ಡರ, ಸುನೀಲ ಬಸವರಡ್ಡೇರ, ಶರಣಪ್ಪ ಜುಟ್ಲದ, ಅಂದಪ್ಪ ಮಡಿವಾಳರ, ಷಣ್ಮುಖಪ್ಪ ಮಡಿವಾಳರ, ಖಾದರಬಾಷಾ ಹೂಲಗೇರಿ, ಯಲ್ಲವ್ವ ಗಿಂಡಿ, ಬಸಮ್ಮ ಲಕ್ಕನಗೌಡ್ರ, ಜಯಶ್ರೀ ನಾಶಿಪೂಡಿ, ಅನ್ನಪೂರ್ಣ ಗಿಂಡಿ, ಮಂಜವ್ವ ಚಳ್ಳಮರದ, ನಿರ್ಮಲಾ ಒಳಕೋಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಎಸ್‌.ಎ. ಜಕ್ಕಲಿ ನಿರ್ವಹಿಸಿದರು.

loading...