ಕೊಂಕಣದಲ್ಲಿ ತಗ್ಗಿದ ವರುಣನ ಪ್ರತಾಪ

0
81

ಕೊಂಕಣದಲ್ಲಿ ತಗ್ಗಿದ ವರುಣನ ಪ್ರತಾಪ
ಚಿಕ್ಕೋಡಿ ತಾಲೂಕಿನ ಇನ್ನೂ 3 ಸೇತುವೆ ಜಲಾವೃತ

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 26: ಮಹಾರಾಷ್ಟ್ರದಲ್ಲಿ ಸುರಿಯುತ್ತಿದ್ದ ಕುಂಭದ್ರೋಣ ಮಳೆ ಪ್ರಮಾಣ ತಗ್ಗಿದ್ದು, ಗುರುವಾರ ಮುಂಜಾನೆ ಹೊತ್ತಿಗೆ ಸೇತುವೆ ಸಂಚಾರ ಮುಕ್ತವಾಗಿದ್ದು, ಇನ್ನೂ 3 ಸೇತುವೆ ಜಲಾವೃತವಾಗಿದೆ.
ಕೊಂಕಣ ಪ್ರದೇಶ ಮತ್ತು ಗಡಿ ಭಾಗದಲ್ಲಿ ಸುರಿಯುತ್ತಿರುವ ಮಳೆ ನೀರಿನಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿತ್ತು. ಆದರೆ ಮಳೆಯ ಪ್ರಮಾಣ ಕ್ಷೀಣಿಸಿದ್ದರಿಂದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಿದ್ದರೂ ಸಹ ಕೃಷ್ಣಾ ನದಿಗೆ 1.85 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 87751 ಕ್ಯುಸೆಕ್ ನೀರು ಹರಿದು ಬಂದರೆ ದೂಧಗಂಗಾ ಮತ್ತು ವೇಧಗಂಗಾ ನದಿಗಳ ಮೂಲಕ 20768 ಕ್ಯುಸೆಕ್ ನೀರು ಹರಿದು ಬರುತ್ತದೆ. ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 108519 ಕ್ಯುಸೆಕ ನೀರು ಹರಿದು ಬರಲಾರಂಭಿಸಿದೆ. ಅದರಂತೆ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 112000 ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ 113226 ಕ್ಯುಸೆಕ್ ನೀರನ್ನು ನಾರಾಯನಪೂರ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ.
ಮಳೆ ಪ್ರಮಾಣ ಕಡಿಮೆಯಾಗಿದ್ದು, ನದಿಗಳ ನೀರಿನ ಹರಿವಿನಲ್ಲಿ ಅಲ್ಪಸ್ವಲ್ಪ ಕಡಿಮೆಯಾಗಿದೆ. ಇದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ 3 ಸೇತುವೆಗಳ ಮೇಲೆ ನೀರು ಇರುವದರಿಂದ ಸಂಚಾರ ಕಡಿತಗೊಂಡಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ಸೇತುವೆಗಳು ಮುಳುಗಡೆಗೊಂಡಿವೆ. ಇದೇ ರೀತಿ ಇನ್ನೇರೆಡು ದಿನ ಮಳೆಯ ಪ್ರಮಾಣ ಕ್ಷೀಣಿಸಿದರೆ ಎಲ್ಲ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿ ಜನ ಜೀವನ ಸುಗಮವಾಗಲಿದೆ.
..

loading...