ಜಾನಪದ ಕಲಾ ರತ್ನ ಪ್ರಶಸ್ರಿ ಪ್ರದಾನ

0
52

ಕನ್ನಡಮ್ಮ ಸುದ್ದಿ- ಹಳ್ಳೂರ : ಜಾನಪದ ಕಲಾ ರತ್ನ ಪ್ರಶಸ್ತಿ ಪಡೆಯುವುದರಿಂದ ಜವಾಬ್ದಾರಿ ಹೆಚ್ಚಳ ಎಂದು ಬೆಳಗಾವಿ ಜಿಲ್ಲಾ ಕಲಾವಿಧರ ಪರಿಷತ್‌ ಜಿಲ್ಲಾಧ್ಯಕ್ಷ ರಾಮಚಂದ್ರ ಕಾಂಬಳೆ ಹೇಳಿದರು.
ಸ್ಥಳೀಯ ಮಹಾಲಕ್ಷ್ಮೀದೇವಿ ಆವರಣದಲ್ಲಿ ಮಳೆ, ಬೆಳೆ, ಸುಖ, ಶಾಂತಿಗಾಗಿ ಕೊನೆಯ ವಾರದ ನಿಮಿತ್ಯವಾಗಿ ವಿವಿಧ ಜನಪದ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದಕ್ಕೆ ಜಾನಪದ ಕಲಾ ರತ್ನ ಪ್ರಶಸ್ರಿ ಪ್ರದಾನ ಮಾಡಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಸ್ಥಳೀಯ ಸರಕಾರಿ ಕಾಲೇಜಿನ ಪ್ರಾಚಾರ್ಯ ಎಸ್‌.ಆರ್‌. ಕಳ್ಳಿಗುದ್ದಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂತಹ ವೇದಿಕೆ ಅತಿ ಅವಶ್ಯಕ. ಯುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದರು. ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ ದುರದುಂಡಿ ಗ್ರಾಮೀಣ ಮಟ್ಟದ ಕಲೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೋಗುವಂತೆ ಆಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಯಲ್ಲಪ್ಪ ಕದ್ದಿ, ಪರಯ್ಯ ಮಠಪತಿ, ಸಾಬವ್ವಾ ಹರಿಜನ ಲಕ್ಕಪ್ಪ ನಡಗಡ್ಡಿ, ಲಕ್ಕಪ್ಪ ಬಿಳಿಕುರಿ, ಬಸಪ್ಪ ದುರದುಂಡಿ ಪರಮಾನಂದ ಕುಲಿಗೋಡ, ಸತ್ಯಪ್ಪ ಕದ್ದಿ, ಸಿದ್ದಪ್ಪ ದುರದುಂಡಿ ಲಕ್ಷ್ಮಣ ಘಂಟಿ, ಬಸಪ್ಪ ಪಾಲಭಾಂವಿ, ಬಸವರಾಜ ಪಾಲಭಾಂವಿ ಅವರಿಗೆ ಜಾನಪದ ಕಲಾ ರತ್ನ ಪ್ರಶಸ್ರಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಯಲ್ಲಪ್ಪ ಪೂಜೇರಿ, ನಿಂಗಪ್ಪ ಸುಣದೋಳಿ, ಬಸವಣೇಪ್ಪ ಡಬ್ಬನ್ನವರ, ಲಕ್ಕಪ್ಪ ದುರದುಂಡಿ, ಬಾಳಗೌಡ ಪಾಟೀಲ, ಸಿದ್ದಪ್ಪ ಕುಲಿಗೋಡ, ಭೀಮಪ್ಪ ಸಪ್ತಸಾರ, ಲಕ್ಷ್ಮಣ ಛಬ್ಬಿ, ಮಂಜುನಾಥ ಕೋಹಳ್ಳಿ, ಕೆಂಪಣ್ಣ ಅಂಗಡಿ, ಶಂಕರ ಲೋಕನ್ನವರ, ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಎಂ.ಡಿ.ಸಂತಿ ನಿರೂಪಿಸಿದರು. ಸತ್ಯಪ್ಪ ಕದ್ದಿ ಸ್ವಾಗತಿಸಿದರು. ಮಹಾದೇವ ದುರದುಂಡಿ ವಂದಿಸಿದರು.

loading...