ಔಷಧಿ ಸಸ್ಯಗಳ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿ: ಕೈವಲ್ಯಾನಂದ ಸ್ವಾಮೀಜಿ

0
24

ಕನ್ನಡಮ್ಮ ಸುದ್ದಿ-ಜಮಖಂಡಿ: ಔಷಧಿ ಸಸ್ಯ ಗಿಡಮರಗಳ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿ ಉಳಿಸಿ ಬೆಳೆಸಬೇಕು ಎಂದು ಗದಗ ಶಿವಾನಂದ ಮಠದ ಉತ್ತರಾಧಿಕಾರಿ ಕೈವಲ್ಯಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಮೈಗೂರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ಭೆಟ್ಟಿ ನೀಡಿ ದೇವಸ್ಥಾನದ ಆವರಣದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಪರಿಸರದಲ್ಲಿ ಗಿಡಮರಗಳು ಹೆಚ್ಚೆಚ್ಚು ಬೆಳೆಯುವದರ ಜೋತೆಗೆ ಪ್ರತಿಯೊಬ್ಬರು ಔಷಧಿಸಸ್ಯಗಳನ್ನು ಬೆಳೆಸಲು ಮುಂದಾಗಬೇಕು ಎಂದರು. ಘೋಡಗೇರಿ ಮೈಗೂರ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಾತನಾಡಿದರು. ಗೋಕಾಕ ದಯಾನಂದ ಸ್ವಾಮೀಜಿ, ಶ್ರೀಕಾಂತ ಹಲಕಿ, ಪುರುಷೋತ್ತಮ ಮೀಶಿ, ಎಸ್‌.ಎಸ್‌.ಪಾಟೀಲ, ಗುರಪ್ಪ ಅಂಬಿ, ತಿಪ್ಪಣ್ಣ ತೇಲಿ, ಪರುಶುರಾಮ ಮೀಶಿ, ಸದಾಶಿವ ತುಂಗಳ, ಕಲ್ಲಪ್ಪ ಕೋಳಿ, ಮಹಾದೇವ ಕೋಳಿ ಇತರರು ಇದ್ದರು.

loading...