ಮೀಸಲಾತಿಗೆ ಆಗ್ರಹ: ನಿಪ್ಪಾಣಿಗೆ ಬಂದ್ ಸಂಪೂರ್ಣ ಯಶಸ್ವಿ

0
35

ಕನ್ನಡಮ್ಮ ಸುದ್ದಿ
ನಿಪ್ಪಾಣಿ 28: ಮಹಾರಾಷ್ಟ್ರದಲ್ಲಿ ಮೀಸಲಾತಿಗೆ ಆಗ್ರಹಿಸಿ ಸ್ಥಳೀಯ ಸಕಲ ಮರಾಠಾ ಸಮಾಜದ ವತಿಯಿಂದ ಶನಿವಾರದಂದು ಕರೆ ನೀಡಲಾಗಿದ್ದ ನಿಪ್ಪಾಣಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಎಲ್ಲ ಅಂಗಡಿ ಮುಂಗಟ್ಟುಗಳು,ಹೋಟೇಲ್‍ಗಳು ಬಂದ್ ಇದ್ದವು. ಬಸ್, ಆಟೋ ಸಂಚಾರ ಸ್ಥಗಿತಗೊಂಡಿತ್ತು.ಸರಕಾರಿ ಕಚೇರಿಗಳು,ಲೈಬ್ರರಿ ಎಂದಿನಂತೆ ಕಾರ್ಯನಿರ್ವಹಿಸಿದವು. ಶಾಲಾ ಕಾಲೇಜುಗಳು ಎಂದಿನಂತೆ ಶುರುವಿದ್ದುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಪರದಾಡುವಂತಾಯಿತು.ಆಟೋಗಳಿಲ್ಲದೇ ಮ್ಕಕಳನ್ನು ಶಾಲೆಗೆ ಕರೆದೊಯ್ಯಲು ಮಳೆಯಲ್ಲಿ ಪಾಲಕರು ಹರಸಾಹಸಪಟ್ಟರು.ಇಡೀ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಗಲಭೆ,ಹಿಂಸಾಚಾರದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ ಆಯೋಜಿಸಲಾಗಿತ್ತು.ಮಧ್ಯಾಹ್ನದ ಬಳಿಕ ಎಂದಿನಂತೆ ಬಸ್ ಸಂಚಾರ ಆರಂಭಗೊಂಡಿತು.ಬಸ್ ನಿಲ್ದಾಣ ಬಳಿ ಸಂಭಾಜಿ ವೃತ್ತದಲ್ಲಿ ಜಮಾಯಿಸಿದ ಸಕಲ ಮರಾಠಾ ಸಮಾಜದವರು ಮತ್ತು ಕಾಲೇಜು ವಿದ್ಯಾರ್ಥಿಗಳು ಮೀಸಲಾತಿಗೆ ಆಗ್ರಹಿಸಿ ಘೋಷಣೆ ಹಾಕಿದರು.ಬಳಿಕ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಚೆನ್ನಮ್ಮಾ ವೃತ,ಕೋಠಿವಾಲೆ ಕಾರ್ನರ್, ತಾನಾಜಿ ಚೌಕ, ಶಿವಾಜಿ ಚೌಕ, ಬೆಳಗಾವಿ ನಾಕಾ ಮಾರ್ಗವಾಗಿ ತಹಶೀಲ್ದಾರ ಕಚೇರಿ ತಲುಪಿತು. ಶ್ರದ್ಧಾ ಸಂಕಪಾಳ, ಬಾಳಾಸಾಹೇಬ ಸೂರ್ಯವಂಶಿ ಮಾತನಾಡಿದರು. ತಹಶೀಲ್ದಾರ ಚಿದಂಬರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ಸುಭಾಷ ಜೋಶಿ, ಕಾಕಾಸಾಹೇಬ ಪಾಟೀಲ, ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ, ರವೀಂದ್ರ ಶಿಂಧೆ ಮತ್ತಿತರರು ಪಾಲ್ಗೊಂಡಿದ್ದರು.

..

loading...