ಡಾ.ಪ್ರಭಾಕರ ಕೋರೆ 71ನೇ ಜನ್ಮದಿನಾಚರಣೆ ನಿಮಿತ್ಯ ಜು.30 ರಿಂದ ಅ.1ರವರೆಗೆ ವಿವಿಧ ಕಾರ್ಯಕ್ರಮ

0
41


ಕನ್ನಡಮ್ಮ ಸುದ್ದಿ
ಚಿಕ್ಕೋಡಿ 28: ರಾಜ್ಯಸಭೆ ಸದಸ್ಯ ಮತ್ತು ಕೆಎಲ್‍ಇ ಸಂಸ್ಥೆಯ ಕಾಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ 71ನೇ ಹುಟ್ಟು ಹಬ್ಬದ ನಿಮಿತ್ಯ ಜು.30 ರಿಂದ ಆ. 1 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪ್ರಭಾಕರ ಕೋರೆ ಹುಟ್ಟು ಹಬ್ಬ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಭರತೇಶ ಬನವಣೆ ಹೇಳಿದರು. ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ, ಶಿವಶಕ್ತಿ ಶುಗರ್ಸ್, ಹರ್ಮಸ್ ಡಿಸ್ಟಲರಿ ಯಡ್ರಾವ, ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಅಂಕಲಿ, ಜನಶಕ್ತಿ ಫೌಂಡೇಶನ್ ಹಾಗೂ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ,ಚಿಕ್ಕೋಡಿ ಇವರ ಸಹಯೋಗದಲ್ಲಿ ಅಂಕಲಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಜು.30 ರಂದು ಬೆಳಗ್ಗೆ 8-30ಕ್ಕೆ ಕೆಎಲ್‍ಇ ಸಂಸ್ಥೆಯ ಶಿಕ್ಷಣ ಸಂಸ್ಥೆ, ವೈದ್ಯಕೀಯ ಸಂಸ್ಥೆ, ಔದ್ಯೋಗಿಕ ಸಂಸ್ಥೆಗಳಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗೂ ಗ್ರಾಮ ಪಂಚಾಯತ ಅಂಕಲಿ ವತಿಯಿಂದಲೂ ಸ್ವಚ್ಛತಾ ಅಭೀಯಾನ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ಸಿಬ್ಬಂದಿಯವರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜು.31 ರಂದು ಬೆಳಗ್ಗೆ 10-30ಕ್ಕೆ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2-30ಕ್ಕೆ ರೈತರಿಗಾಗಿ ಕಬ್ಬು, ಗೋವಿನ ಜೋಳ ಹಾಗೂ ಸೋಯಾ ಬೆಳೆಯ ಸುಧಾರಿತ ಕೃಷಿ ಪದ್ದತಿ ಕುರಿತು ರೈತರ ಹಾಗೂ ವಿಜ್ಞಾನಿಗಳ ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗಿದೆ. ಕೆಎಲ್‍ಇ ನಿರ್ದೇಶಕ ಬಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಆಗಮಿಸುವರು. ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮಿತ ಕೋರೆ ಕಾರ್ಯಕ್ರಮ ಉದ್ಗಾಟಿಸುವರು. ಕೃಷಿ ತಜ್ಞರಾದ ಡಾ. ವಿ.ಎಸ್.ಕೋರಿಕಂಥಿಮಠ, ಡಾ. ಸಂಜಯ ಪಾಟೀಲ, ಡಾ. ಆರ್.ಬಿ.ಖಂಡಗಾಂವೆ, ಡಾ. ಮಂಜುನಾಥ ಚೌರಡ್ಡಿ, ಜಿ.ಬಿ.ವಿಶ್ವನಾಥ, ಡಾ. ಎಸ್.ಎಸ್.ಹಿರೇಮಠ, ಎಸ್.ಎಂ.ವಾರದ ಉಪನ್ಯಾಸ ನೀಡುವರು. ಆ. 1 ರಂದು ಬೆಳಗ್ಗೆ 10-30 ಗಂಟೆಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕೃಷಿ ಪ್ರಶಸ್ತಿ ವಿತರಣೆ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ನಿಡಸೋಶಿಯ ಸಿದ್ದಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಮಾಜಿ ಸಚಿವ ಉಮೇಶ ಕತ್ತಿ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಕೃಷಿ ಪ್ರಶಸ್ತಿ ವಿತರಿಸುವರು. ಡಿಕೆಎಸ್‍ಎಸ್‍ಕೆ ಅಧ್ಯಕ್ಷ ಅಮಿತ ಕೋರೆ ಬಹುಮಾನ ವಿತರಣೆ ಮಾಡುವರು.
ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥಾಪಕ ಅನ್ನಾಸಾಹೇಬ ಜೊಲ್ಲೆ, ಶಾಸಕ ಡಿ.ಎಂ.ಐಹೋಳೆ, ಪಿ.ರಾಜೀವ, ಮಾಜಿ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಮಾರುತಿ ಅಷ್ಟಗಿ, ಡಾ. ವಿ.ಡಿ.ಪಾಟೀಲ, ಡಾ. ಎಂ.ವಿ.ಜಾಲಿ, ಡಾ. ಎನ್.ಎಸ್.ಮಹಾಂತಶೆಟ್ಟಿ, ಡಾ. ವಿ.ಎ.ಸಾವೋಜಿ
ಆಗಮಿಸುವರು. ಕೆಎಲ್‍ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕಿ ಗುರುದೇವಿ ಹಲ್ಲೇಪನವರಮಠ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಡಾ. ಪ್ರಭಾಕರ ಕೋರೆ ಹುಟ್ಟು ಹಬ್ಬ ಆಚರಣಾ ಸಮಿತಿ ಸದಸ್ಯರಾದ ಮಹಾಂತೇಶ ಪಾಟೀಲ, ಡಿ.ಎಸ್.ಕರೋಶಿ, ಅಜಿತ ದೇಸಾಯಿ, ಬಿ.ಎ.ಪಾಟೀಲ, ಪರಸಗೌಡ ಪಾಟೀಲ, ಮಲ್ಲಪ್ಪ ಮೈಶಾಳೆ, ಸುರೇಶ ಪಾಟೀಲ, ಡಿಕೆಎಸ್‍ಎಸ್‍ಕೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಟ್ಟಣಶೆಟ್ಟಿ, ಆನಂದ ಕೊಟಬಾಗಿ, ಬಿ.ಎಸ್.ಮುದೋಳ, ರಾಘವೇಂದ್ರ ಪತ್ತಾರ, ತುಕಾರಾಮ ಪಾಟೀಲ, ಪಿಂಟು ಹಿರೇಕುರುಬರ, ಶಿವಾನಂದ ಹಕಾರೆ, ಎನ್.ಎಂ.ಮುಜುಗರ, ಪ್ರಸಾದ ಮೇದಾರ, ಕೆ.ಬಿ.ಶಿಂಧೆ, ಬಿ.ಎಸ್.ಅಂಬಿ,
ಡಾ. ಎಂ.ಟಿ.ಕುರಣಿ, ಡಾ. ಸಿದ್ರಾಮಪ್ಪ ಇಟ್ಟಿ ಮುಂತಾದವರು ಉಪಸ್ಥಿತರಿದ್ದರು.
..

loading...