ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ: ರೇವಡಿ

0
19

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿಬೇಕು. ಅದರಲ್ಲೂ ಮಾನವೀಯತೆ ಮತ್ತು ನಾಯಕತ್ವ ಗುಣ ಬೆಳೆಸುವ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಪುರಸಭೆ ಸದಸ್ಯ ಶರಣಪ್ಪ ರೇವಡಿ ಹೇಳಿದರು.
ಪಟ್ಟಣದ ಕನಕದಾಸ ಶಿಕ್ಷಣ ಸಂಸ್ಥೆ ಯಲ್ಲಿ ಕೆ.ಎಸ್‌.ಎಸ್‌ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯ ವತಿಯಿಂದ ಮಂಗಳವಾರ ಜರುಗಿದ 2018-19 ನೇ ಶೈಕ್ಷಣಿಕ ವರ್ಷದ ಸಾಂಘಿಕ, ಸಾಂಸ್ಕ್ರತಿಕ, ಕ್ರೀಡೆ ಹಾಗೂ ಎನ್‌.ಎಸ್‌.ಎಸ್‌ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕ ಅಭ್ಯಾಸದ ಜೊತೆಗೆ ಸೇವಾ ಮನೋಭಾವನೆ ಬೆಳಿಸಿಕೊಳ್ಳುವುದು ಅವಶ್ಯವಾಗಿದೆ. ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಪಾಲ್ಗೊಳುವುದರಿಂದ ಸಮಗ್ರ ಗ್ರಾಮೀಣ ಬದುಕಿನ ಅರಿವು ಉಂಟಾಗುತ್ತದೆ. ಜೊತೆಗೆ ಗ್ರಾಮೀಣ ಪ್ರದೇಶಗಳ ಜ್ವಲಂತ ಸಮಸ್ಯೆಗಳ ಮಾಹಿತಿ ದೊರೆಯುತ್ತದೆ. ವಿದ್ಯಾರ್ಥಿಗಳ ಉಜ್ಜಲ ಭವಿಷ್ಯ ನಿರ್ಮಾಣದಲ್ಲಿ ಸಮಾಜದ ಹೊಣೆಗಾರಿಕೆ ಮಹತ್ವದಾಗಿದೆ ಎಂದರು.
ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿಂರತರ ಓದಿನೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗಿಯಾಗಿ ಕಾಲೇಜಿಗೆ ಉತ್ತಮ ಹೆಸರು ತರಬೇಕು. ಭವಿಷ್ಯದ ಉತ್ತಮ ಜೀವನಕ್ಕೆ ವಿದ್ಯಾರ್ಥಿ ಜೀವನವೇ ತಳಹದಿಯಾಗಿ ಅದು ಭದ್ರವಾದಾಗ ಮಾತ್ರ ಬದುಕಿನ ಸುಂದರಸೌಧ ನಿರ್ಮಿಸಿಕೊಳ್ಳಬಹುದು ಎಂದರು.
ಪುರಸಭೆ ಸದಸ್ಯ ಅಶೋಕ ವನ್ನಾಲ ಮಾತನಾಡಿ, ವಿದ್ಯಾರ್ಥಿಗಳು ಯಾವ ದುಷ್ಚಟಗಳಿಗೂ ಗುರಿಯಾಗದೇ ತುಂಬಾ ಶಿಸ್ತಿನಿಂದ ಅಭ್ಯಸಿಸಿದಾಗ ಮಾತ್ರ ಸಾಧನೆ ಸಾದ್ಯವಾಗುತ್ತದೆ ಎಂದರು.
ಮಲ್ಲಿಕಾರ್ಜುನ ಅವಾರಿ, ಎಸ್‌.ಎಸ್‌. ಕೆಂಚನಗೌಡ್ರ, ಹೆಚ್‌.ಎನ್‌.ಗೌಡರ, ಬಿ.ಕೆ.ಮಾದಿ, ಎನ್‌.ಹೆಚ್‌. ಜೂಚನಿ, ಉಮೇಶ ಮಲ್ಲಾಪೂರ, ಬಿ.ಸಿ.ಗೌರಿಮಠ, ಸುಭಾಸ ಅವಧೂತ, ಪ್ರಕಾಶ ಹುಲ್ಲೂರ, ಪವಿತ್ರಾ ಪುರದ, ಬಿ.ಎಮ್‌.ಸಂಕನೂರ, ವಿರೇಶ ಯಲಿಗಾರ, ಶೃತಿ ಗೋಗಿ ಇದ್ದರು.

loading...