ದೇವೇಗೌಡರಿಂದ ದೇಶದ್ರೊÃಹದ ಕೆಲಸ ಬಿಎಸ್‌ವೈ ಆರೋಪ

0
20

ಬೆಂಗಳೂರು:ಮೈತ್ರಿ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ.ವರ್ಗಾವಣೆ ದಂಧೆಯಲ್ಲಿ ಸಚಿವ ಹೆಚ್.ಡಿ ರೇವಣ್ಣ ಹಸ್ತಕ್ಷೆÃಪ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಿಜೆಪಿ ತನ್ನದೆ ತತ್ವ ಸಿದ್ದಾಂತದ ಮೇಲೆ ನಿಂತಿದ್ದು, ೧೩೫ ಕ್ಷೆÃತ್ರಗಳಲ್ಲಿ ಬಿಜೆಪಿಯನ್ನ ಗೆಲ್ಲಿಸಲು ಜನ ಸಿದ್ಧರಿದ್ದರು. ಆದರೆ ನಮ್ಮ ತಪ್ಪಿನಿಂದ ಹೆಚ್ಚಿನ ಸ್ಥಾನವನ್ನ ಕಳೆದುಕೊಳ್ಳಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಇದೇವೇಳೆ ಮತ್ತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಸಿಎಂ ಹೆಚ್,ಡಿ ಕುಮಾರಸ್ವಾಮಿರನ್ನ ಕುಟುಕಿದ ಬಿಎಸ್‌ವೈ, ದೇವೇಗೌಡ ಮೇಲೆ ನನಗೆ ಗೌರವವಿದೆ.ಆದರೇ ಮಗನ ತಪ್ಪಿಗೆ ಕಿವಿ ಹಿಂಡು ಬುದ್ದಿ ಹೇಳುವುದನ್ನ ಬಿಟ್ಟು ನನ್ನ ವಿರುದ್ದ ಮಾತನಾಡಿದರು.ಹೀಗಾಗಿ ಅವರಿಗೆ ಮೂರು ಪ್ರಶ್ನೆಗಳನ್ನ ಹಾಕಿದ್ದೆÃನೆ.ಆ ಪ್ರಶ್ನೆಗಳಿಗೆ ದೇವೇಗೌಡರು ಮತ್ತು ಸಿಎಂ ಕುಮಾರ ಸ್ವಾಮಿ ಇನ್ನು ಉತ್ತರಿಸಿಲ್ಲ ಎಂದು ಟಾಂಗ್ ಕೊಟ್ಟರು.

loading...