ಪ್ರಧಾನಿ ರೇಸ್-೨೦೧೯

0
118

ಲೋಕಸಭೆ ಚುನಾವಣಾ ಪ್ರಕ್ರಿಯೆ ಈಗಿನಿಂದಲೇ ಆರಂಭವಾಗಿದ್ದು, ೨೦೧೯ರಲ್ಲಿ ಶತಾಯಗತಾಯ ಸದ್ಯ ಆಡಳಿತದ ಭದ್ರ ಬುನಾದಿಯಲ್ಲಿರುವ ಭಾರತೀಯ ಜನತಾ ಪಾರ್ಟಿಯನ್ನು ಬುಡ ಸಮೇತ ಕಿತ್ತು ಹಾಕಲು ಕಾಂಗ್ರೆಸ್ ಸೇರಿ ಇತರೆ ಪಕ್ಷಗಳು ಒಂದಾಗಿ ಏಕತೆಯ ಮಂತ್ರ ಜಪಿಸುತ್ತಿವೆ. ಈ ಏಕತೆಗೆ ಭವಿಷ್ಯದಲ್ಲಿ ಅಡ್ಡಿಯಾಗುವ ಅಂಶ ಎಂದರೆ ಅದು ಪ್ರಧಾನಿ ಕುರ್ಚಿ. ಇದಕ್ಕಾಗಿ ಮೈತ್ರಿ ರಂಗದಲ್ಲಿ ಒಮ್ಮತ ಕಂಡು ಬರುತ್ತಿಲ್ಲ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಅಧÀ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು. ಆದರೆ ಕೈ ಪಾಳಯದ ಹಿರಿಯ ನಾಯಕಿ ಸೋನಿಯಾ ಗಾಂಧಿ ಪ್ರಧಾನಿ ಅಭ್ಯರ್ಥಿ ಯಾರೆಂದು ಚುನಾವಣೆಯ ಬಳಿಕ ನಿರ್ಧಾರ ಮಾಡಲಾಗುತ್ತೆ ಎಂದು ಹೇಳುವ ಮೂಲಕ ರಾಹುಲ್ ಪ್ರಧಾನಿ ಆಗುವ ಕನಸಿಗೆ ತಣ್ಣೀರು ಎರೆಚಿದ್ದಾರೆ. ಮತ್ತೊಂದು ಕಡೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೂಡಾ ಪ್ರಧಾನಿ ರೇಸ್‌ನಲ್ಲಿದ್ದಾರೆ. ಆ ಬೆನ್ನಲ್ಲೆ ಲಾಲು ಪುತ್ರ ಕೂಡಾ ಪ್ರಧಾನಿ ಆಕಾಂಕ್ಷಿಯಲ್ಲಿ ನಾನು ಕೂಡಾ ಒಬ್ಬ ಎಂದು ಕೆಲ ದಿನಗಳ ಹಿಂದೆಯಷ್ಟೆ ಹೇಳಿದರು. ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಾ ಮುಂದಿನ ಚುನಾವಣೆ ರೂಪರೇಷೆವನ್ನು ಭಾಜಪದವರು ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಭಾಜಪದಿಂದ ಪ್ರಧಾನಿ ಅಭ್ಯರ್ಥಿ ಸದ್ಯಕ್ಕಿರುವ ಪ್ರಧಾನಿಯೇ ಮುಂದಿನ ಚುನಾವಣೆಯಲ್ಲೂ ಪ್ರಧಾನಿ ಅಭ್ಯರ್ಥಿಯಾಗಿರುವುದರಲ್ಲಿ ದುಸರಾ ಮಾತೆ ಇಲ್ಲ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನ ಮಂತ್ರಿ ದೇವೆಗೌಡ ಅವರು ಕರ್ನಾಟಕದಲ್ಲಿ ಕಾಂಗ್ರೆಸ್‌ನೊಂದಿಗೆ ಸೇರಿ ಸರಕಾರ ರಚನೆ ಮಾಡಿದ್ದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡದೆ ಇರುವುದು ಮೈತ್ರಿಯಲ್ಲಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ್ದಾರೆ. ರಾಷ್ಟಿçÃಯ ಸುದ್ದಿ ಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೌಡ್ರು, ಮುಂದಿನ ಲೋಕಸಭಾ ಚುನಾವಣೆಗೆ ಮಮತಾ ಪ್ರಧಾನಿ ಅಭ್ಯರ್ಥಿ ಸೂಕ್ತ ಎಂದು ಹೇಳಿದ್ದಾರೆ. ಈ ಮೂಲಕ ದೀದಿ ಮನದಲ್ಲೂ ಈಗ ಪ್ರಧಾನಿಯಾಗುವ ಕನಸು ಚಿಗುರೊಡೆದಿದೆ. ದೀದಿ ಬೆಂಬಲಕ್ಕೆ ಮತ್ತಷ್ಟು ಶಕ್ತಿ ಸಿಕ್ಕರೆ ರಾಹುಲ್ ಪ್ರಧಾನಿ ರೇಸ್‌ನಿಂದ ಹಿಂದುಳಿಯಬಹುದು. ರಾಷ್ಟç ರಾಜಕಾರಣದಲ್ಲಿ ಎಲ್ಲ ಪಕ್ಷದವರು ಸೇರಿ ಪ್ರಧಾನಿ ಮೋದಿಯವರನ್ನು ಸೋಲಿಸುವ ಮಂತ್ರ ಜಪಿಸುತ್ತಿದ್ದಾರೆ. ಮತ್ತೊಂದು ಕಡೆ ದಕ್ಷಿಣ ಭಾರತದ ಪಕ್ಷದ ಪ್ರಮುಖ ನಾಯಕರ ಮನವೊಲಿಸಲು ಮೋದಿ ಆ್ಯಂಡ್ ಷಾ ತಂಡ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಒಟ್ಟಿನಲ್ಲಿ ೨೦೧೯ಲೋಕಸಭೆ ಚುನಾವಣೆ ರೋಚಕವಾಗಲಿದ್ದು ಯಾರು ಯಾರಿಗೆ ಮಣೆ ಹಾಕ್ತಾರೆ ಯಾರು ಪ್ರಧಾನಿಯಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಕಾಲಕೋಶದಲ್ಲಿ ಅಡಗಿದೆ. ಇದನ್ನು ನಿರ್ಧರಿಸುವ ಮತದಾರ ಪ್ರಭು ಇವರೆಲ್ಲ ರಾಜಕೀಯ ಭವಿಷ್ಯ ಬರೆಯಲು ಸಿದ್ಧನಾಗಿದ್ದು, ಕಳೆದ ಕೆಲ ವರ್ಷಗಳಿಂದ ಆಗಿರುವ ದೇಶದ ಪ್ರಗತಿ ಲೆಕ್ಕಾಚಾರ ಮಾಡಿ ಮತದಾರ ತಮ್ಮ ಮತ ಖರ್ಚು ಮಾಡಲಿದ್ದಾನೆ ಎನ್ನುವುದರಲ್ಲಿ ಎರಡು ಮಾತೆ ಇಲ್ಲ. ಏಕೆಂದರೆ ಇದು ಡಿಜಿಟಲ್ ಜಮಾನಾ.. ರಾಜಕೀಯ ಡ್ರಾಮಾ ನೋಡಿ ಮತದಾರ ಯಾರಿಗೆ ಎಷ್ಟು ಅಂಕ ನೀಡಲಿದ್ದಾನೆ ಎಂದು ಕಾದು ನೋಡಬೇಕು.

loading...