ಕಲಾಸಕ್ತರ ಪ್ರಶಂಸೆಗೆ ಪಾತ್ರರಾದ ಅಂಧರ ಗೀತಗಾಯನ ಕಲಾ ಸಂಘದ ಕಲಾವಿದರು

0
41

ಶಿವಕುಮಾರ ಶಶಿಮಠ
ಗಜೇಂದ್ರಗಡ: ಕಲೆ ಎನ್ನುವುದು ಶ್ರೀಮಂತರ ಸಂಪತ್ತು ನೋಡಿ ಒಲಿಯುವುದಿಲ್ಲ. ಹಾಗಂತ ಬಡವನ ಗುಡಿಸಲು ಮನೆಯಲ್ಲೂ ಸಹ ಕಾಲು ಮರಿದು ಬಿದ್ದಿರುವುದಿಲ್ಲ. ಆದರೆ ಸತತ ಪರಿಶ್ರಮ ಹಾಗೂ ಏನನ್ನಾದರೂ ಸಾಧಿಸಬೇಕು ಎನ್ನುವವರ ಜೊತೆಯಾಗಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಪಟ್ಟಣದಲ್ಲಿ ಅಂಧರ ಗಾಯನದ ತಂಡವೊಂದು ಜನಮನ ಸೂರೆಗೊಂಡಿರುವುದು.
ಚಿಕ್ಕಮಂಗಳೂರಿನ ಶೃಂಗೇರಿಯ ಶಾರದಾ ಅಂಧರ ಗೀತಗಾಯನ ಕಲಾ ಸಂಘದ ಕಲಾವಿದರು ಪಟ್ಟಣದಲ್ಲಿ ಕಳೆದ ಮೂರನಾಲ್ಕು ದಿನಗಳಿಂದ ಬೀದಿ ಬದಿಯಲ್ಲಿ ಜನತೆ ಕೇಳಿದ ಹಾಡುಗಳನ್ನು ಹಾಡುತ್ತಾ ಕಲಾಸಕ್ತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಂದಿನ ದಿನಗಳಲ್ಲಿ ಸರ್ಕಾರಿ ನೌಕರಿಯೇ ಬೇಕು ಎಂದು ದುಡಿಯಲು ಮುಂದಾಗದ ಕೆಲ ನಿರುತ್ಸಾಹಿಗಳ ನಡುವೆ ಅಂಧರು ತಮ್ಮ ಕುಟುಂಬಗಳ ಬಂಡಿ ಸಾಗಿಸಲು ಶ್ರಮಿಸುತ್ತಿರುವುದು ನಿಜಕ್ಕೂ ಅನುಕರಣೀಯ.
ಹೊಟ್ಟೆಪಾಡಿಗಾಗಿ ಚಿಕ್ಕಮಗಳೂರಿನ ಒಂದು ಸಂಗೀತ ಗಾಯನ ತಂಡದಲ್ಲಿ ಈ ಮೊದಲು ಹಬ್ಬ, ಹರಿದಿನದ ಸಂದರ್ಭದಲ್ಲಿ ದಿನಕ್ಕೆ ರೂ. 300-500 ಪಡೆದು ಹಾಡು ಹಾಡುತ್ತಿದ್ದ
2 ದಿವ್ಯಾಂಗರು ಸ್ವತಂತ್ರವಾಗಿ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಒಂದು ವರ್ಷದ ಹಿಂದೆ ಕಲಾ ತಂಡವನ್ನು ಕಟ್ಟಿಕೊಳ್ಳಬೇಕು ಎನ್ನುವ ಕನಸಿಗೆ ಮುನ್ನುಡಿ ಬರೆದ ಪರಿಣಾಮ ಇಂದು ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾನ್ವಿತ ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸುವ ಕನಸು ಹೊತ್ತಿರುವ 15 ಅಂಧ ಸಂಗಾತಿಗಳನ್ನು ಕೂಡಿಕೊಂಡು
ಸಾಹಿತ್ಯ ಶಾರದೆ ಸೇವೆ ಮಾಡುತ್ತಿದ್ದಾರೆ.
ಈ ಕಲಾ ತಂಡವು ಗಾಳಿ, ಮಳೆ ಹಾಗೂ ಚಳಿಯನ್ನು ಲೆಕ್ಕಿಸಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಹಿತ್ಯ ಶಾರಧೆಯನ್ನು ಆರಾಧಿಸುವ ಮೂಲಕ ಜೀವನದಲ್ಲಿ ಅಂದುಕೊಂಡ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಕಲಾ ತಂಡಕ್ಕೆ ಆರ್ಥಿಕ ಭದ್ರತೆ ಇಲ್ಲದಿರುವುದು ಒಂದೆಡೆಯಾದರೆ ಇತ್ತ ಗಾಯನ ಮಾಡಲು ಅವಶ್ಯಕವಾಗಿರುವ ರಿದಮ್ ಪ್ಯಾಡ್ ಖರೀದಿಸಲು ಇನ್ನಿಲ್ಲದ ಸಂಕಷ್ಟವನ್ನು ಈ ದಿವ್ಯಾಂಗರು ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರವು ಇಂತಹ ಕಲಾವಿದರನ್ನು ಗುರುತಿಸಿ ಆರ್ಥಿಕ ಭದ್ರತೆ ನೀಡುವುದರ ಜೊತೆಗೆ ಅಂಧರ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿಸಲು ಮುಂದಾಗಬೆಕು ಎನ್ನುವುದು ಕಲಾರಸಿಕರ ಒತ್ತಾಸೆಯಾಗಿದೆ.
ಪಟ್ಟಣದ ವಿವಿಧ ವೃತ್ತಗಳಲ್ಲಿ ಗಾಯನ ಮೂಲಕ ಜನತೆಯ ಮನಸ್ಸು ಗೆದ್ದಿರುವ ಕಲಾ ತಂಡದ ಅಧ್ಯಕ್ಷರಾಗಿ ಎ.ಎ.ಯೋಗೀಶ, ಕೀ ಬೋರ್ಡ ವಾದಕರಾಗಿ ಮೈಸೂರಿನ ಶಿವುಮಲ್ಲು, ಗಾಯಕರಾಗಿ ಕಾರವಾರದ ಆನಂದರಾಜ, ಶೃಂಗೇರಿಯ ಜ್ಯೋತಿ, ಮೈಸೂರಿನ ಅನೀಲಕುಮಾರ, ತಬಲಾವಾಧಕರಾಗಿ ಗುಲಬುರ್ಗಾದ ವಿಠ್ಠಲ, ವ್ಯವಸ್ಥಾಪಕರಾಗಿ ಗೀರೀಶ ಹಾಗೂ ಉಪಾಧ್ಯಾಕ್ಷರಾಗಿ ಕೃಷ್ಣ ಸೇರಿ ಒಟ್ಟು 15 ಕಲಾವಿದರು ನೆರೆಯ ಕೇರಳ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾಯನದ ಮೂಲಕ ಜನತೆಯ ಗಮನ ಸೆಳೆಯುತ್ತಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಸ್ವಾವಲಂಬಿ ಜೀವನ ನಡೆಸಲು ಬಯಸುವ ಅಂಧ ಕಲಾವಿದರಿಗೆ ಸಂಘದಲ್ಲಿ ಮುಕ್ತ ಅವಕಾಶವಿರುವುದು ಗಮನರ್ಹಾವಾಗಿದೆ

loading...