ಫಲಾನುಭವಿಗಳಿಗೆ ತಲುಪದ ಸಿಲಿಂಡರ್ : ತಪ್ಪದ ಸಾರ್ವಜನಿಕರ ಅಲೆದಾಟ

0
16

ಕನ್ನಡಮ್ಮ ಸುದ್ದಿ- ಬೆಳಗಾವಿ: ಮಹಾನಗರ ಪಾಲಿಕೆ ನೀಡುತ್ತಿರುವ ಸಿಲಿಂಡರ್ ಗಳು ಸರಿಯಾಗಿ ಫಲಾನುಭವಿಗಳಿಗೆ ದೊರೆಯದೆ ವರ್ಷಾನುಗಟ್ಟಲೆ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಸುಧಾ ಮನೋಹರ ಭಾತಕಾಂಡೆ ಅಸಮಾಧಾನ ವ್ಯಕ್ತ ಪಡಿಸಿದರು.
ಅವರು ಗುರುವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ಎರಡು ವರ್ಷಗಳ ಹಿಂದೆಯೇ ಸಿಲಿಂಡರಗಳಿಗೆ ಅರ್ಜಿ ಸಲ್ಲಿಸಿದರು ಇನ್ನೂ ಸಹ ಸರಿಯಾಗಿ ಸಿಲಿಂಡರ್ ಗಳು ಫಲಾನುಭವಿಗಳಿಗೆ ದೊರೆತಿಲ್ಲ. ದಿನಪ್ರತಿ ಪಾಲಿಕೆಗೆ ಅಲೆದಾಡುವ ಪರಿಸ್ಥಿತಿ ತಪ್ಪಿಲ್ಲವೆಂದು ಅಸಮಾಧಾನ ವ್ಯಕ್ತ ಪಡಿಸಿದರು. ನಂತರ ಅಧಿಕಾರಿಗಳಿಗೆ ಸಿಲಿಂಡರ್ ಸರಿಯಾಗಿ ಫಲಾನುಭವಿಗಳಿಗೆ ದೊರೆಯುವಂತೆ ಸೂಚನೆ ನೀಡಿದರು.
ಹಲವು ನಗರಗಳಲ್ಲಿ ಇಗಾಗಲೇ ಮಲೇರಿಯಾ ಸೇರಿದಂತೆ ಇತರ ರೋಗಗಳು ಸೇರಿಕೊಂಡಿವೆ. ಇದರಿಂದ ನಗರವಾಸಿಗಳಿಗೆ ತೊಂದರೆಯಾಗುತ್ತಿದ್ದು, ಶೀಘ್ರದಲ್ಲೇ ಪಾಗಿಂಗ್ ಮಾಡಬೇಕೆಂದು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ನಗರ ಸೇವಕ ರವಿ ದೋತ್ರೆ ತರಾಟೆ ತೆಗೆದುಕೊಂಡರು. ಎರಡು ದಿನಕ್ಕೊಂದು ಬಾರಿ ಪಾಗಿಂಗ್ ಮಾಡಿ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಯಬೇಕೆಂದು ತಿಳಸಿದರು. ಅಲ್ಲದೆ ಪಾಲಿಕೆಯ ಅನುಮತಿ ಇಲ್ಲದೇ ರಸ್ತೆ ಪಕ್ಕದಲ್ಲಿ ಸಾಕಷ್ಟು ಅಂಗಡಿ ಹೊಟೇಲ್ಗಳನ್ನು ತೆರೆದುಗೊಂಡಿದ್ದು, ಇದರಿಂದ ಪಾದಚಾರಿ , ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಹಾಗೂ ನಗರದಲ್ಲಿ ಟ್ರಾಪೀಕ್ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಅಂತಹ ಅಂಗಡಿಗಳನ್ನು ತೆರವುಗೊಳಿಸಲು ಹೇಳಿದರು.ಅದೇ ರೀತಿ ತಿಲಕವಾಡಿ ರಸ್ತೆ ಪಕ್ಕದಲ್ಲಿ ಪರೋಟಾ ಅಂಗಡಿ ಇಟ್ಟುಕೊಂಡಿದ್ದು,ಡೇಬಲ್ ಗಳನ್ನು ರಸ್ತೆಯಲ್ಲಿ ಹಾಕುವುದರಿಂದ ಜನರಿಗೆ ತೊಂದರೆಯಾಗುತ್ತಿದ್ದು,ಅವರಿಗೆ ಪಾಲಿಕೆಯಿಂದ ನೋಟಿಸ್ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ,ನಗರ ಸೇವಕರು,ಅಧಿಕಾರಿಗಳು ಹಾಜರಿದ್ದರು.

loading...