ವಿಶ್ವಸ್ತನ್ಯಪಾನ ಜಾಗೃತಿ ಕಾರ್ಯಕ್ರಮ

0
37

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ತಾಯಿ ಎದೆಹಾಲಿನಿಂದಲೇ ಮಾತ್ರ ಮಗು ಆರೋಗ್ಯವಾಗಿ ಬೆಳವಣಿಗೆಯಾಗುವುದಲ್ಲದೇ ತಾಯಿಯ ಹಾಲು ಮಗುವಿಗೆ ಅಮೃತವಾಗಿರುತ್ತದೆ. ತಾಯಂದಿರು ತಮ್ಮ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿವಹಿಸಲು ಮುಂದಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿದರು.
ಪಟ್ಟಣದ ಭಗವಾನ ಮಹಾವೀರ ಜೈನ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಪಿ.ಜಿ. ಸೆಂಟರ್‍ನಲ್ಲಿ ನಡೆದ ವಿಶ್ವಸ್ತನ್ಯಪಾನ ಜಾಗೃತಿ ಕುರಿತು ಮಹಿಳೆಯರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ಪಟ್ಟಣಗಳಲ್ಲಿ ಚಿಕ್ಕಮಕ್ಕಳಲ್ಲಿ ಕುಪೋಷಣಜನ್ಯ ಖಾಯಿಲೆಗಳು ಬರಲು ತಾಯಂದಿರು ಸರಿಯಾಗಿ
ಸ್ತನ್ಯಪಾನ ಮಾಡಿಸದೇ ಇರುವುದೇ ಮೂಲ ಕಾರಣ. ಹೀಗಾಗಿ ತಾಯಂದಿರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಡಾ. ಪೂರ್ಣಿಮಾ ಬೆಲ್ಲದ ಮಾತನಾಡಿ, ಸ್ತನ್ಯಪಾನ ಒಂದು ಪ್ರಾಕೃತಿಕ ಕ್ರಿಯೆಯಾಗಿದ್ದು, ಮಗುವಿನ ಆರೋಗ್ಯಕ್ಕೆ ಬೇಕಾದ ಎಲ್ಲ ಜೀವಸತ್ವಗಳನ್ನು ನೀಡುತ್ತದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ಕೆ.ಎ.ಹಾದಿಮನಿ ಮಾತನಾಡಿ, ಸರ್ಕಾರ ಸಾಕಷ್ಟು ಈ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಹಿಳೆಯರು ಸದುಪಯೋಗಪಡಿಸಿಕೊಂಡು ಮಕ್ಕಳ ಉತ್ತಮ ಆರೋಗ್ಯಯುತ ಬದುಕು ಸಾಗಿಸಲು ಮುಂದಾಗಬೇಕು ಎಂದರು.
ಡಾ. ಸುನಿತಾ ಬೇರಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಎಸ್.ಎಂ.ಕುದರಿ ಅಧ್ಯಕ್ಷತೆ ವಹಿಸಿದ್ದರು.
ಡಾ.ಕೆ.ಎಸ್.ಬೆಲ್ಲದ, ಡಾ.ಎಂ.ಬಿ ಗುಗ್ಗರಿ, ಡಾ. ವ್ಹಿ.ಎಸ್.ಕಂಠಿ, ಡಾ.ಎಂ.ಎಂ.ಮಾಡಲಗೇರಿ, ಡಾ. ರತ್ನಾ ಇದ್ದರು.

loading...