ಕ್ವಿಟ್ ಇಂಡಿಯಾ ಚಳುವಳಿ ಸ್ಮರಣೆ ಕಾರ್ಯಕ್ರಮ

0
24

ಕನ್ನಡಮ್ಮ ಸುದ್ದಿ-ಗದಗ: ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕ್ವಿಟ್ ಇಂಡಿಯಾ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಚಳುವಳಿ ಅ.9ರ 1942ರಂದು ಮಹಾತ್ಮಾ ಗಾಂಧೀಜಿಯವರು ಮಾಡು ಇಲ್ಲವೇ ಮಡಿ ಎಂಬ ಕರೆಯನ್ನು ನೀಡಿದ ಈ ದಿನಾಚರಣೆ ಸ್ಮರಣೆಯನ್ನು ಸಾರ್ವಜನಿಕರಿಗೆ ಜನಜಾಗ್ರತಿ ಬಿಂಬಿಸಲು ಗುರುವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗದಗ-ಬೆಟಗೇರಿ ನಗರಾಧ್ಯಕ್ಷ ಪ್ರಕಾಶ ಬಾಕಳೆ ಅವರು ನಗರದ ಗಾಂಧಿ ವೃತ್ತದಲ್ಲಿರುವ ಮಹಾತ್ಮಾಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಿಶಾನೆಯನ್ನು ತೋರಿಸಿ ಚಾಲನೆ ನೀಡಿ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಈ ಜನಜಾಗ್ರತಿ ಅಂದೋಲನ ನಡೆಯಬೇಕೆಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಮಾತನಾಡಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಅತೀ ಅವಶ್ಯವಿದೆ. ಅದಕ್ಕೆ ಇಂತಹ ಕಾರ್ಯಕ್ರಮಗಳು ಪ್ರೇರಕ ಶಕ್ತಿ ಆಗುತ್ತವೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಎಂ.ಕುಂಟೋಜಿ, ಹಾಗೂ ಪ್ರೌಢಶಾಲಾ ಶಿಕ್ಷಣ ಸಂಯೋಜಕ ಪಾಣಿಶೆಟ್ಟರ ಸಂದರ್ಭೋಚಿತವಾಗಿ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ವಿದ್ಯಾರ್ಥಿಗಳು ಬೃಹತ್ ಗಾತ್ರದ ರಾಷ್ಟ್ರಧ್ವಜ ಹಾಗೂ ಅಂದಿನ ಹೋರಾಟದ ಸ£್ನವೇಶಗಳ ಚಿತ್ರಗಳನ್ನು ಹಿಡಿದು “ಬೋಲೋ ಭಾರತ ಮಾತಾಕಿ ಜೈ”, “ವಂದೇ ಮಾತರಂ”, “ಮಹಾತ್ಮಾ ಗಾಂಧೀಜಿಯವರಿಗೆ ಜಯವಾಗಲಿ”, ಎಂಬ ಘೋಷಣೆ ಕೂಗಿದರು. ಮಹಾತ್ಮಾಗಾಂಧಿ ವೃತ್ತದಿಂದ ಪ್ರಾರಂಭಗೊಂಡ ಈ ರ್ಯಾಲಿ ಝಂಡಾ ಸರ್ಕಲ್, ಅಂಡರಬ್ರಿಡ್ಜ, ಪಿ.ಬಿ.ರಸ್ತೆ, ಬಾಲಾಜಿ ರಸ್ತೆ ಮೂಲಕ ಸಂಸ್ಥೆಗೆ ತಲುಪಿತು. ನೇತೃತ್ವವನ್ನು ಮುಖ್ಯಾಧ್ಯಾಪಕ ಕೆ.ಎಂ.ಮೂಲಿಮನಿ, ಸಹಪ್ರಾಚಾರ್ಯರಾದ ಎ.ಎ.ಹದ್ಲಿ ವಹಿಸಿದ್ದರು.

loading...