ಮಹಿಳೆಯ ಶಿಕ್ಷಣಕ್ಕೆ ಹೋರಾಡಿದ‌ ಮೊದಲ‌ ಮಹಿಳೆ ಸಾವಿತ್ರಿಬಾಯಿ ಪುಲೆ: ಸಂಸದ

0
30

ಕನ್ನಡಮ್ಮ ಸುದ್ದಿ- ಬೆಳಗಾವಿ:ಮಹಿಳೆಯರ ಶಿಕ್ಷಣ ಕ್ಕೆ‌ ಹೋರಾಡಿದ ಮೊಟ್ಟ ಮೊದಲ ಮಹಿಳೆ ಸಾವಿತ್ರಿಬಾಯಿ ಪುಲೆಯವರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಪರಿವರ್ತನೆ ಮಾಡುವಂತಹ‌ ಚಿತ್ರಗಳ ರಚಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಯುವಕರ ಇತಂಹ ಚಿತ್ರಗಳನ್ನು ನೋಡಿ ಬೆಳೆಸಬೇಕೆಂದು ಸಂಸದ ಸುರೇಶ ಅಂಗಡಿ ಹೇಳಿದರು.

ಅವರು ರವಿವಾರ ನಿರ್ಮಲ ಚಿತ್ರ ಮಂದಿರದಲ್ಲಿ ಸಾತ್ರಿಬಾಯಿ‌ಪುಲೆ ಚಿತ್ರದ ವಿಶೇಷ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಮಾತನಾಡಿದರು.

1830 ರ ಮಹಿಳೆಯ ಸ್ಥಿಯ ಚಿತ್ರಣವನ್ನು ಸಾವಿತ್ರಿಭಾಯಿ ಪುಲೆಯವರು ಚಿತ್ರದಲ್ಲಿ ತೊರಿಸಲಾಗುತ್ತದೆ. ಒಂದು ಒಳ್ಳೆ ಕಥೆಯನ್ನು ಸಂಜು‌ ಕಾಟ್ಕರ ಅವರು ಬರೆದಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ‌ ಪ್ರೋತ್ಸಾಹಿಸಿ ಎಂದು  ಹೇಳಿದರು. ಈ ಚಿತ್ರವನ್ನು ಪ್ರದಾನ‌ಮಂತ್ರಿ ನರೇಂದ್ರ‌ಮೋದಿಯವರಿಗೂ ಸಹ ಈ ಚಿತ್ರವನ್ನು ತೊರಿಸುವ‌ ಕೆಲಸ‌ ಮಾಡುತ್ತೆವೆ ಎಂದು ಹೇಳಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ, ಶೈಕ್ಷಣಿಕ ಹಾಗೂ ಮಹಿಳೆ ಅಂದಿನ‌ ಚಿತ್ರಣವನ್ನು ಸಾವಿತ್ರಿ ಬಾಯಿ ಪುಲೆ ಚಿತ್ರ ಬಿಚ್ಚಿ ಇಡುತ್ತಿದೆ.
ನನ್ನ ಕ್ಷೇತ್ರದ ಮಕ್ಕಳಿಗೆ ಲಕ್ಷ್ಮೀ ಪೌಂಡೇಶನ ವತಿಯಿಂದ‌ ಈ ಚಿತ್ರವನ್ನು ತೋರಿಸುತ್ತೆನೆ. ಡಾಕ್ಟರ್ ಆಗಬೇಕು ಎಂಬ‌ ಆಸೆ ಉಳ್ಳವಳಾಗಿದ್ದೆ ಆದರೆ ಕೆಲವು ಕಾರಾಣಾಂತರಗಳಿಂದ ಶಿಕ್ಷಣ‌ಕಲಿಯಲು ಆಗಲಿಲ್ಲ ಆದರೆ ಡಾಕ್ಟರ್ ಕಾಲೇಜ್ ಕಟ್ಟುವ‌ ಮೂಲಕ ಹೆಚ್ಚು ಶಿಕ್ಷಣ ದೊರಕಿಸುವ ಕೆಲಸ‌ಮಾಡುತ್ತೆನೆ ಎಂದು ಭರವಸೆ ಮಾತುಗಳನ್ನು‌ ಆಡಿದರುು.

ಈ ಸಂದರ್ಭದಲ್ಲಿ ಶಾಸಕ‌ಅಭಯ ಪಾಟೀಲ, ಅನಿಲ ಬೆನಕೆ, ಸಂಜು ಕಾಟ್ಕರ,ಸೂಚಿಂದ್ರ ಪ್ರಸಾದ‌ ಸೇರಿದಂತೆ‌ ಚಿತ್ರ‌ತಂಡ ಉಪಸ್ಥಿತರಿದ್ದರು.

loading...