ಕೊಡಗು ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

0
17

ಕನ್ನಡಮ್ಮ ಸುದ್ದಿ-ಬಂಕಾಪುರ: ಕೊಡಗು, ಕೇರಳದ ಜನತೆ ನೇರೆ ಹಾವಳಿಯಿಂದ ಮನೆ ಕಳೆದುಕೊಂಡು ನಿರ್ಗತಿಕರಾದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಆರ್ಥಿಕ ಸಹಾಯ ವದಗಿಸಲು ಪಟ್ಟಣದ ಸರಕಾರಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಸಂತೆ ಮೈದಾನದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.
ಪ್ರಕೃತಿ ವಿಕೋಪಕ್ಕೆ ಸಾವಿರಾರು ಜನ ಸಾವನ್ನಪ್ಪಿ ಲಕ್ಷಾಂತರ ಜನ ನೆಲೆ ಕಳೆದುಕೊಳ್ಳುವಮೂಲಕ ಹೆಂಡತಿ, ಮಕ್ಕಳು, ತಂದೆ, ತಾಯಿ, ಬಂಧು ಬಳಗದವರಿಂದ ದೂರವಾಗಿ ವೇಧನೆ ಅನುಬವಿಸುತ್ತಿದ್ದಾರೆ. ಇಂತವರಿಗೆ ಆತ್ಮ ಸ್ಥೈರ್ಯ ತುಂಬಲು ನಿಮ್ಮೋಂದಿಗೆ ನಾವಿದ್ದೇವೆ ಎಂಬ ಘೋಷವಾಕ್ಯಗಳೊಂದಿಗೆ ಪಟ್ಟಣದ ಎಲ್ಲ ಶಾಲಾ ಕಾಲೇಜ ವಿದ್ಯಾರ್ಥಿ ಹಾಗು ಸಿಂಬಂದಿಗಳಿಂದ ವ್ಯಾಪಾರಸ್ತರು, ಸಾರ್ವಜನಿಕರಿಂದ 21 ಸಾವಿರ ರೂಗಳನ್ನು ದೇಣಿಗೆ ಸಂಗ್ರಹಿಸಿ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ಡಿ.ಡಿ.ಮೂಲಕ ರವಾನಿಸಿದರು.ದೇಣಿಗೆ ಸಂಗ್ರಹಕಾರ್ಯದಲ್ಲಿ ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ಸೊಗಲದ, ಡಾ. ಸಂತೋಷಕುಮಾರ ಕಟಕೆ, ಪ್ರೋ.ವಿಜಯ್ ಗುಡಗೇರಿ, ಉಮೇಶ ಕರ್ಜಗಿ, ಮಹೇಶ ಡಮನಾಳ, ಮಂಜುನಾಥ ನಾಯಕ, ರಘುಪತಿ ನಾಯಕ, ಆನಂದ ಇಂಧೂರ, ಸುಜಾತಾ ಕಡ್ಲಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.

loading...