ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಕನ್ನಡತಿ ಲಲಿತಾ ಲಮಾಣಿ

0
75

ಕನ್ನಡಮ್ಮ ಸುದ್ದಿ-ಲಕ್ಷ್ಮೇಶ್ವರ: ಶಿಕ್ಷಣ, ಕ್ರೀಡೆ, ಉದ್ಯೋಗ ಸೇರಿದಂತೆ ಬಹುತೇಕ ಎಲ್ಲ ಸವಲತ್ತುಗಳಿಂದ ವಂಚಿತರಾಗಿರುವ ಲಮಾಣಿ ಸಮುದಾಯದ ಹೆಣ್ಣು ಮಗಳೊಬ್ಬಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾಳೆ.
ಲಮಾಣಿ ಸಮುದಾಯ ಅಲ್ಲದೇ ಇತರೇ ಜನಾಂಗದ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ. ಸಮೀಪದ ಹರದಗಟ್ಟಿ ಗ್ರಾಮದ ಲಲಿತಾ ತಿಪ್ಪಣ್ಣ ಲಮಾಣಿ ಬಡ ಕುಟುಂಬದಲ್ಲಿ ಜನಿಸಿ ಬಡತನವನ್ನೆ ಮೆಟ್ಟಿನಿಂತು ಮಲೇಶಿಯಾದಲ್ಲಿ ನಡೆಯುತ್ತಿರುವ 3ನೇ ಅಂತಾರಾಷ್ಟ್ರಿಯ ಓಪನ್ ಟೈಕೊಂಡೊ ಚಾಂಪಿಯನ್‍ಶಿಪ್ ಕ್ರೀಡೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟು ಅಪ್ರತಿಮ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ.ಲಕ್ಷೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಲಲಿತಾ ತಿಪ್ಪಣ್ಣ ಲಮಾಣಿ ಅಪ್ಪಟ ಗ್ರಾಮಿಣ ಪ್ರತಿಭೆ. ಮೊದಲಿನಿಂದಲು ಕ್ರೀಡೆಯಲ್ಲಿ ಅಪಾರ ಆಸಕ್ತಿ. ಛಲ ಬಿಡದ ಹೋರಾಟ ಮತ್ತು ಸತತ ಅಭ್ಯಾಸದಿಂದ ಹತ್ತು ಹಲವು ಟೂರ್ನಿಗಳಲ್ಲಿ ಗೆದ್ದು ಮಿಂಚಿದ್ದಾರೆ.
ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡ ಲಲಿತಾ ಕೂಲಿ ಕೆಲಸ ಮಾಡುವ ತಂದೆಯ ಆಶ್ರಯದಲ್ಲಿ ಬೆಳೆದಳು. ನಂತರ ಧಾರವಾಡದ ಶಾಲೆಯೊಂದರಲ್ಲಿ ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಪೂರೈಸಿದ್ದಾರೆ. ಇದೇ ವೇಳೆ ಸ್ನೇಹಿತರ ಸಹಾಯದಿಂದ ಕ್ರೀಡಾ ಪ್ರಾಧಿಕಾರ(ಸಾಯ್)ಕ್ಕೆ ಸೇರ್ಪಡೆಗೆ ಸಹಕಾರಿಯಾಯಿತು. ಕಡುಬಡತನ ಎದುರಿಸಿದ ಲಲಿತಾ ಲಮಾಣಿ ಶಿಕ್ಷಣದೊಂದಿಗೆ ತನಗೆ ಪ್ರೀಯವಾದ ಟೈಕೊಂಡೋದಲ್ಲಿ ಏನಾದರು ಸಾಧಿಸಬೇಕೆಂಬ ಕನಸು ಕಂಡರು. ಅದಕ್ಕಾಗಿ ಹಗಳಿರಲು ಶ್ರಮಿಸಿದರು. ಅದರಯೊಂದು ಫಲವೇ ಅವರ ಸಾಧನೆ ಮೆಚ್ಚಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನಿಡಿದ್ದು ಇದಕ್ಕೆ ಸಾಕ್ಷಿ.30ಕ್ಕೂ ಹೆಚ್ಚು ಪದಕ ವಿಜೇತೆ: ಊರಿನ ಲಮಾಣಿ ತಾಂಡಾಕ್ಕೆ ಲಲಿತಾ ಅವರ ಬೆಳವಣಿಗೆ ಸ್ಪೂರ್ತಿಯ ಸೆಲೆಯಾಗಿದೆ. ಲಲಿತಾ ಲಮಾಣಿ ಹಲವು ಭಾರಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡು 30ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದಾರೆ. ರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸಿ ಕಂಚಿನ ಪದಕ ಜಯಿಸಿದ ಅವರು 2011 ಜಾರ್ಖಂಡ್‍ನಲ್ಲಿ ನಡೆದ ಗೇಮ್ಸ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅಲ್ಲದೇ ಮೊದಲಭಾರಿ ಧಾರವಾಡದಲ್ಲಿ ನಡೆದ ರಾಜಯ ಒಲಿಂಪಿಕ್ ಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಲಲಿತಾ ಲಮಾಣಿ ಜಯಿಸಿದ ಪ್ರಶಸ್ತಿಗಳು: ಇವರು ಟೈಕೊಂಡೊ ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಪಟುವಾಗಿದ್ದು, ಜೂನಿಯರ್, ಸಿನಿಯರ್ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿ ಚಿನ್ನದ ಪದಕ, 35ನೇ ಸ್ಟೇಟ್ ಟೈಕೊಂಡೊ ಕ್ರೀಡೆಯಲ್ಲಿ ಬೆಳ್ಳಿ ಪದಕ, ದೆಹಲಿಯಲ್ಲಿ ನಡೆದ ಓಪನ ಚಾಂಪಿಯನ್‍ಷಿಪ್‍ನಲ್ಲಿ ಕಂಚಿನ ಪದಕ, ಮತ್ತು ನ್ಯಾಷನಲ್ ಟೈಕೊಂಡೊ ಚಾಂಪಿಯನ್‍ಷಿಪ್ 2018ರಲ್ಲಿ ಬೆಳ್ಳೆಯ ಪದಕ ಹಾಗೂ ಹಲವಾರೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ ಮಟ್ಟದಲ್ಲಿ ತನ್ನ ಹೆಸರನ್ನು ಗಳಿಸಿಕೊಂಡಿದ್ದಾರೆ ಲಲಿತಾ ಲಮಾಣಿ.
ಮಲೇಶಿಯಾ ದೇಶದಲ್ಲಿ ನಮ್ಮ ಭಾರತ ದೇಶದ ಪ್ರೀತಿಪತಾಕೆ ಹಾರಿಸಲು ಅವಕಾಶ ಸಿಕ್ಕಿತ್ತು. ಆ ಅವಕಾಶವನ್ನು ಬಳಿಸಿಕೊಂಡು ನಾನು 3ನೇ ಅಂತಾರಾಷ್ಟ್ರಿಯ ಚಾಂಪಿಯನ್‍ಶಿಪ್‍ನಲ್ಲಿ ಸ್ವರ್ಣಪದಕ ಜಯಿಸಿದ್ದು ತುಂಬಾ ಖುಷಿತಂದಿದೆ. ನಾನು ಮಾಡಬೆಕಾದ ಸಾಧನೆ ತುಂಬಾನೆ ಇದೇ. ಇನ್ನಷ್ಟು ಎತ್ತರದ ಸಾಧನೆ ಮಾಡಿ ಸಮುದಾಯದಲ್ಲಿ ಇರುವ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದ್ದೇನೆ.
ಲಲಿತಾ ಲಮಾಣಿ.

loading...