ಸಾಹಿತಿಗಳು ಯವ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯವಾಗಬೇಕು: ಶಿವಾನಂದ

0
39

ವಿಜಯಪುರ: ಸಾಹಿತಿಗಳು ಯವ ಪೀಳಿಗೆಗೆ ಉತ್ತಮ ಸಂಸ್ಕಾರ ಕಾರ್ಯ ಮಾಡಬೇಕು ಎಂದು ಎಕ್ಸಲಂಟ್‌ ಸಮೂಹ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶಿವಾನಂದ ಕೇಲೂರ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಶನಿವಾರ ನಡೆದ ವಿಜಯಪುರ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿನಂದನಾ ಹಾಗೂ ಲೆಕ್ಕಪತ್ರ ಮಂಡನೆ ಸಮಾರಂಭದಲ್ಲಿ ಮಾತನಾಡಿದರು.
ಆಧುನಿಕ ಜೀವನದ ಭರಾಟೆಯಲ್ಲಿಯೂ ಸಾಹಿತ್ಯ ಮನಸ್ಸಿಗೆ ಮುದನೀಡುತ್ತದೆ. ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುತ್ತ ಆನಂದಮಯವಾದ ಜೀವನ ನಡೆಸಲು ಸಾಹಿತ್ತಿಕ ಓದು ಪೂರಕವಾಗಿದೆ. ಸಾಹಿತಿಗಳು ಸಮಾಜದ ಅಂಕುಡೊಂಕು ಸರಿ ಪಡೆಸಿವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ. ಮುಂದಿನ ಪೀಳಿಗೆಗೆ ಸಾಹಿತ್ಯದಿಂದ ಸರಿಯಾದ ಮಾರ್ಗ ನೀಡಬೇಕು ಎಂದು ಹೇಳಿದರು.
ಉದ್ಯಮಿ ಡಿ.ಎಸ್‌. ಗುಡ್ಡೋಡಗಿ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಹ ಕಾರ್ಯ ಪರಿಷತ್ತು ಮಾಡುತ್ತಿದೆ. ಸಾಹಿತ್ಯ ಸಮ್ಮೇಳನಗಳು ವಿಜೃಂಭಣೆಯಿಂದ ನಡೆದಿರುವುದು ಅದರಲ್ಲಿ ಉತ್ತಮ ಚಿಂತನಾಗೋಷ್ಠಿಗಳು, ಉತ್ಕೃಷ್ಠ ವಿಚಾರಗಳಿಂದ ಕೂಡಿದ ಸಮ್ಮೇಳನವು ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ನಗರದ ಸಬಲಾ ಸಂಸ್ಥೆಯ ಮುಖ್ಯಸ್ಥೆ ಡಾ. ಮಲ್ಲಮ್ಮ ಯಾಳವಾರ ಮಾತನಾಡಿ, ಕನ್ನಡದ ನಾಡು, ನುಡಿ, ಬೆಳೆಸಿ ಉಳಿಸುವಂತಹ ಗುರುತರವಾದ ಜವಾಬ್ದಾರಿ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿಗಳ ಚಿಂತಕರ ಮೇಲಿದೆ ಎಂದರು.
ಜಿಲ್ಲಾ ಕರವೇ ಅಧ್ಯಕ್ಷ ಎಂ.ಸಿ. ಮುಲ್ಲಾ, ಕ.ಸಾ.ಪ. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಲೂಕ ಕ.ಸಾ.ಪ. ಅಧ್ಯಕ್ಷ ಪ್ರೊ. ಯು.ಎನ್‌. ಕುಂಟೋಜಿ ಮಾತನಾಡಿದರು.
ವಿಜಯಪುರ ತಾಲೂಕ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆಯನ್ನು ಗೌರವ ಕಾರ್ಯದರ್ಶಿ ಪ್ರೊ. ಬಸವರಾಜ ಕುಂಬಾರ ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ ಬಿ.ಆರ್‌. ಬನಸೋಡೆ, ಎಸ್‌.ಎಸ್‌. ಖಾದ್ರಿ ಇನಾಮದಾರ, ಪ್ರೊ.ಎ.ಎಚ್‌. ಕೊಳಮಲಿ, ಎಸ್‌.ಡಿ. ಮಾದನಶೆಟ್ಟಿ, ರಂಗನಾಥ ಅಕ್ಕಲಕೋಟ, ಶರಣು ಸಬರದ, ಎಸ್‌.ವಾಯ್‌. ನಡುವಿನಕೇರಿ, ಪ್ರೊ. ಬಸವರಾಜ ಕುಂಬಾರ, ಮಹಾದೇವಿ ತೆಲಗಿ, ಲಕ್ಷ್ಮೀ ದೇಸಾಯಿ, ಪ್ರಕಾಶ ಕುಂಬಾರ, ಭಾರತಿ ಬುಯ್ಯಾರ, ಸುಭಾಸಚಂದ್ರ ಕನ್ನೂರ, ಫಯಾಜ ಕಲಾದಗಿ, ಶಾಂತಾಬಾಯಿ ಜೊಗೆನ್ನವರ, ದಾಕ್ಷಾಯಣಿ ಬಿರಾದಾರ, ಶಾಂತಾ ಉತ್ಲಾಸರ, ಸದಾಶಿವ ಪೂಜಾರಿ, ರವಿ ಕಿತ್ತೂರ, ಪ್ರೊ. ರಾಜೇಂದ್ರಕುಮಾರ ಬಿರಾದಾರ, ಸೋಮಶೇಖರ ಸುಮಂಗಲಾ ಪೂಜಾರಿ ಮುಂತಾದವರು ಇದ್ದರು.
ಸುಭಾಸಚಂದ್ರ ಕನ್ನೂರ ನಿರೂಪಿಸಿದರು. ರಾಜೇಂದ್ರಕುಮಾರ ಬಿರಾದಾರ ಸ್ವಾಗತಿಸಿದರು. ಬಸವರಾಜ ಕುಂಬಾರ ವಂದಿಸಿದರು.

loading...