ಪಿಎಲ್ ಡಿ ಬ್ಯಾಂಕ್ ‌ ಚುನಾವಣೆ ಮುಂದುಡುವಂತೆ ಸತೀಶ ಬೆಂಬಲಿಗರಿಂದ ಪ್ರತಿಭಟನೆ

0
71

ಕನ್ನಡಮ್ಮ ಸುದ್ದಿ- ಬೆಳಗಾವಿ: ಪಿಎಲ್ ಡಿ ಬ್ಯಾಂಕಿನ ಎಲ್ಲ ಸದಸ್ಯರು ಹಾಜರಾಗುವವರೆಗೂ ಚುನಾವಣೆ ಮುಂದುಡಬೇಕೆಂದು ಆಗ್ರಹಿಸಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿಕೊಂಡು ಟಮಟೆ ಬಾರಿಸುವ ಮೂಲಕ ಪ್ರತಿಭಟನೆ ಆರಂಭಿಸಿ ಮೊದಲು ಜಿಲ್ಲಾಧಿಕಾರಿಯವರಿಗೆ ಮನವಿ‌ ಸಲ್ಲಿಸಿ ನಂತರ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ಕಟ್ಟಿ ಪ್ರತಿಭಟನೆ ನಡೆಸಿದರು.

ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗುವಂತೆ ಅಧ್ಯಕ್ಷ – ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಸಂಪ್ರದಾಯ ಮುಂದುವರಿಯಬೇಕು. ಈ ಸಂಸ್ಥೆಯನ್ನು ರಾಜಕೀಯ ರಹಿತವಾಗಿ ಬೆಳೆಸಬೇಕು. ಆದರೆ ಲಕ್ಷ್ಮೀ ಹೆಬ್ಬಾಳಕರ‌ ಅವರು ರಾಜಕೀಯ ಬೆಳೆ ಬೆಯಿಸಿಕೊಳ್ಳುತ್ತಿದ್ದಾರೆ .ಕಾನೂನು ಬಾಹಿರವಾಗಿ ಪ್ರತಿಭಟನೆ ಮಾಡಿದ್ದಾರೆ. ಆದ್ದರಿಂದ ಎಲ್ಲ ಸದಸ್ಯರು ಹಾಜರಾಗುವವರೆಗೂ ಚುನಾವಣೆ ಮುಂದುಡಬೇಕೆಂದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಸ್ತಾಫ ಜಮೀದಾರ, ರವೀಂದ್ರ ನಾಯ್ಕರ್, ಸುರೇಶ ಗೋವನ್ನವರ್, ಸಿದ್ರಾಯಿ , ಜಯಶ್ರೀ ಮಾಳಗಿ, ಆಯೇಶಾ ಸನದಿ, ರೇಣುಕಾ ಹುಂಡೇದ್, ಯುವರಾಜ ತಳವಾರ, ಚಿದು ಬೆಟಸೂರು, ಪ್ರಶಾಂತ ಪೂಜಾರಿ, ಮಿಲಿಂದ ಕಾಂಬಳೆ, ಸಿದ್ದು ಚಹ್ವಾನ್, ನಿಂಗರಾಜ ಗುಂಡ್ಯಾಗೋಳ, ಕುಶಪ್ಪಾ ನಾಯಕಸೇರಿದಂತೆ ನೂರಾರು ಜನರು ಭಾಗಿಯಾಗಿದ್ದರು.

loading...