ಮಕ್ಕಳ ಪ್ರತಭೆ ಗುರುತಿಸುವ ಚಿಣ್ಣರ ಚಿಲುಮೆಯ ರಂಗಯಾತ್ರೆ

0
29

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ನಶಿಸಿ ಹೋಗುತ್ತಿರುವ ನಾಟಕ ಕಲೆಯನ್ನು ಪುನಶ್ಚೇತನಗೊಳಿಸುವ ಚಿಣ್ಣರ ಚಿಲುಮೆಯ ರಂಗಯಾತ್ರೆ ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗೆಳಿಗೆ ಅವಕಾಶ ನೀಡಿ ಅವರನ್ನು ಶಿಸ್ತುಬದ್ದವಾಗಿ ಸಿದ್ಧಪಡಿಸಿ ಶಾಲೆಗಳಲ್ಲಿ ಪ್ರದರ್ಶನ ಮಾಡುತ್ತ ರಂಗಕಲೆಯ ಮಹತ್ವ ಮತ್ತು ಮಕ್ಕಳಲ್ಲಿ ವಿಶೇಷ ಆಸಕ್ತಿ ಬೆಳೆಸುತ್ತಾ ರಂಗಕಲೆ ಬೆಳವಣಿಗೆಗೆ ಒಂದು ಹೊಸ ಮುನ್ನುಡಿ ಬರೆಯುತ್ತಿದೆ. ಚಿಣ್ಣರ ಚಿಲುಮೆ ರಂಗಯಾತ್ರೆಯಂತಹ ಹವ್ಯಾಸವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಶಿಕ್ಷಣ ಸಮಿತಿ ಹೆಬ್ಬಾಳದ ಚೇರಮನ್‌ ಸಿ. ಟಿ ಮುಂಡವಾಡ ಹೇಳಿದರು.
ಶಿರಹಟ್ಟಿ ತಾಲೂಕು ಹೆಬ್ಬಾಳ ಶಿವಯೋಗಿಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆ ಹಾಗೂ ಬನಶಂಕರಿ ಪ.ಪೂ ಕಾಲೇಜ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ, ಜನರಂಗ ರಂಗ ಸಂಪನ್ಮೂಲ ಕೇಂದ್ರ ಕೊಂಚಿಗೇರಿ ಸಹಯೋಗದಲ್ಲಿ ಹಮ್ಮಿಕೊಂಡ ಚಿಣ್ಣರ ಚಿಲುಮೆ ರಂಗ ಅಭಿಯಾನದ ಪೂರ್ಣತಾರೆ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ವಿಕಾಸ ಎಂದರೆ ಮನಸ್ಸನ್ನು ಬೆಳೆಸುವುದು. ಅವರನ್ನು ಸಮಾಜದಲ್ಲಿ ಸದೃಢರನ್ನಾಗಿ ಮಾಡುವುದು. ಆತ್ಮಸ್ಥೈರ್ಯವನ್ನು ತಂಬುವದು ಅಂತಹ ಮನಸ್ಸನ್ನು ಬೆಳಸುವ ಕಟ್ಟುವ ಕೆಲಸವನ್ನು ಸಂಸ್ಕೃತಿ ಇಲಾಖೆ ಮಾಡುತ್ತಿದೆ. ಇಂತಹ ಯೋಜನೆಯನ್ನು ಜನರಂಗ ರಂಗಸಂಸ್ಥೆ ಅರ್ಥಪೂರ್ಣವಾಗಿ ನಿರ್ವಹಿಸುತ್ತಿದೆ. ಕಲೆಯನ್ನು ಬೆಳೆಸಿಕೊಂಡÀ ಮಕ್ಕಳು ಜೀವನದುದ್ದಕ್ಕೂ ವಿಶೇಷ ವ್ಯಕ್ತಿಗಳಾಗಿ ಸಮಾಜದಲ್ಲಿ ಯಶಸ್ಸು ಕಾಣುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಎಂ. ಎಸ್‌ ಮರಿಗೌಡರ ಮಾತನಾಡಿ, ಕೊಂಚಿಗೇರಿ ಗ್ರಾಮದ ಮಕ್ಕಳಲ್ಲಿ ರಂಗಕಲೆಯ ಅರಿವು ಇರದ ಮಕ್ಕಳಲ್ಲಿ ಶಿಸ್ತುಬದ್ಧವಾಗಿ ತರಬೇತಿಗೊಳಿಸಿ ಅಭಿನಯದÀ ಸಾರವನ್ನು ಕಲಿಸಿ ಅಭಿನಯದಲ್ಲಿ ಪ್ರಬುದ್ಧರನ್ನಾಗಿ ಮಾಡಿದ ನಿರ್ದೇಶಕ ಬಸವರಾಜ ನೆಲಜೇರಿ ಹಾಗೂ ರಂಗಕರ್ಮಿ ಅಶೋಕ ಬಡಿಗೇರ ಶ್ರಮ ಅಪಾರವಾಗಿದೆ ಎಂಬುವುದು ಇಂದು ಮಕ್ಕಳು ಪದರ್ಶಿಸಿದÀ ಅಭಿನಯದಿಂದ ನಮಗೆ ಗೋಚರಿಸುತ್ತದೆ. ಪೂರ್ಣ’ ತಾರೆಯಾಗುವವÀರೆಗೂ ಅವಳ ಶ್ರಮ, ಶ್ರದ್ಧೆ, ಅಪಾರ ಅಪ್ಪನ ನಿಷ್ಕಾಳಜಿ, ಮನೆಯ ಸಮಸ್ಯ ಯಾವುದನ್ನು ಲೆಕ್ಕಿಸದೆ ಸಾಧಿಸುವ ಛಲ ಹೊಂದಿದ ಮಗುವಿನ ಧೈರ್ಯ ನಮಗೆಲ್ಲ ಮಾದರಿ ಮತ್ತು ಈ ನಾಟಕ ರಚಿಸಿದ ವಿದ್ಯಾರ್ಥಿ ಸಹನಾ ಪೂಜಾರ ಕೂಡಾ ಮಾದರಿಯಾಗಿದ್ದಾಳೆ. ಇಂತಹ ನಾಟಕದಿಂದ ಮಕ್ಕಳಿಗೆ ಸಾಧಿಸಲು ಪ್ರೇರಕ ಶಕ್ತಿಯಾಗುತ್ತದೆ ಎಂದರು.
ಬಿ.ಎಸ್‌ ಮುಂಡವಾಡ, ಆರ್‌.ಸಿ ಪಾಟೀಲ, ವಿ.ಪಿ. ಮನ್ಸೂರ, ಟಿ.ಎನ್‌ ದೊಡ್ಡಮನಿ ಎಫ್‌.ವಾಯ್‌ ಪಾಟೀಲ, ಬಸವರಾಜ ಸಿರಿ, ತಾರಿಕೊಪ್ಪದ ಮಲ್ಲರಡ್ಡಿ, ದುರ್ಗದ ನೀಲಪ್ಪ ಬಡಿಗೇರ, ರಾಮರಡ್ಡಿ ಕರೆಯತ್ತಿನ, ಕೆ.ಡಿ ಕಗ್ಗಲ್ಲಗೌಡರ ಹಾಗೂ ಊರಿನ ಗಣ್ಯರು ಇದ್ದರು. ಅಶೋಕ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಸುನಂದಾ ಬಡಿಗೇರ, ಜಯಮಂತ ಸವಡಿ, ಬಡಿಗೇರ ಕೃಷ,್ಣ ಬಡಿಗೇರ ಶಿವು ಮೇಗÀಲಮನಿ ಸಂಗೀತ ನೀಡಿದರು. ಪೂರ್ಣತಾರೆ ನಾಟಕ ಜನಮನ ಸೆಳೆಯಿತು.

loading...