ಉತ್ತಮ ಶಿಕ್ಷಣಕ್ಕೆ ಪಾಲಕರ ಸಹಕಾರ ಅಗತ್ಯ: ಹೂಲಗೇರಿ

0
19

ಕನ್ನಡಮ್ಮ ಸುದ್ದಿ-ನರೇಗಲ್ಲ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಪಾಲಕರ ಸಹಕಾರ ಅಗತ್ಯವಿದೆ. ಪಾಲಕರ ಸಭೆ ನಡೆಸುವ ಉದ್ದೇಶ ಮಕ್ಕಳಿಗೆ ಗುಣಮಟ್ಟದ ವಿಷಯ ಕುರಿತು ಚರ್ಚೆ ನಡೆಸಲಾಗುವುದು. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಎಸ್‌.ಎನ್‌. ಹೂಲಗೇರಿ ಹೇಳಿದರು.
ಸಮೀದಪ ಅಬ್ಬಿಗೇರಿ ಗ್ರಾಮದ ಅನ್ನದಾನ ವಿಜಯ ಪ್ರೌಢ ಶಾಲೆಯಲ್ಲಿ ಜರುಗಿದ 8ನೇ ತರಗತಿ ಹಾಗೂ 10ನೇ ತರಗತಿ ಮಕ್ಕಳ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಾಲೆಯ ಪಾತ್ರ ಮತ್ತು ಗುಣಮಟ್ಟಣದ ಶಿಕ್ಷಣಕ್ಕಾಗಿ ಕೇವಲ ಶಿಕ್ಷಕರೊಂದೆ ಶ್ರಮಿಸಿದರೆ ಸಾಲದು, ಜತೆಗೆ ಪಾಲಕರು, ಮಕ್ಕಳ ಮತ್ತು ಶಿಕ್ಷಕರು ಮೂವರು ಒಟ್ಟಿಗೆ ಸೇರಿ ಕೆಲಸ ನಿರ್ವಹಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಈಗಿನಿಂದಲೇ ಕಠಿಣ ಶ್ರಮವಹಿಸಿ ಅಭ್ಯಸಿಸುವ ರೂಢಿಯನ್ನು ಮಾಡಿಕೊಂಡರೆ ಯಾವುದೇ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿಲು ಸಾಧ್ಯ. ಈ ದಿಶೆಯಲ್ಲಿ ಬದಲಾಗುತ್ತಿರುವ ಶಿಕ್ಷಣ ಪಜಜಿಆತಿಗೆ ತಕ್ಕಂತೆ ಪಾಲಕರು ಹಾಗೂ ಶಿಕ್ಷಕರು ಮಕ್ಕಳನ್ನು ಅಣಿಗೊಳಿಸುವ ಜವಾಬ್ದಾರಿಯುತ ಕೆಲಸವನ್ನು ನಿಷ್ಠೆಯಿಂದ ನಿಭಾಯಿಸಬೇಕು ಎಂದರು.
ಬಸವರಾಜ ಶಿವಶಿಂಪರ, ರತ್ನಾ ವೀರಾಪೂರ, ಐ. ಜ್ಞಾನೇಶ್ವರಿ, ಶಿಕ್ಷಕ ಎಮ್‌.ಬಿ ಸಜ್ಜನರ, ಎಚ್‌.ಎಂ, ರತ್ನಮ್ಮ, ಎಂ.ಎಂ. ಗುಗ್ಗರಿ, ಶ್ರೀದೇವಿ ಗದಗಿನ, ಎಸ್‌.ವಿ.ಸೊಬರದ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

loading...