ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಿ: ಮುರುಘೇಂದ್ರ ಶ್ರಿÃ

0
23

ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಿ: ಮುರುಘೇಂದ್ರ ಶ್ರಿÃ

ಕನ್ನಡಮ್ಮ ಸುದ್ದಿ-ಮುನವಳ್ಳಿ : ಪಟ್ಟಣದ ಶ್ರಿÃ ಮುರುಘರಾಜೇಂದ್ರ ಯೋಗವಿದ್ಯಾ ಕೇಂದ್ರ ಸಂಚಾಲಿತ ಶ್ರಿÃ ಅನ್ನದಾನೇಶ್ವರ ಪಿ.ಯು. ಕಾಲೇಜಿನಲ್ಲಿ ಪಾಲಕರ ಸಮ್ಮೆÃಳನ ಸಂಸ್ಥೆಯ ಗೌರವಾಧ್ಯಕ್ಷರಾದ ಪೂಜ್ಯಶ್ರಿÃ ಮುರುಘೇಂದ್ರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಜರುಗಿತು.
ಪೂಜ್ಯಶ್ರಿÃ ಮುರುಘೇಂದ್ರ ಸ್ವಾಮಿಗಳು ಮಾತನಾಡುತ್ತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಚಲನವಲನದ ಮೇಲೆ ಸದಾ ನಿಗಾವಹಿಸಬೇಕು. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯ ಅರಿತುಕೊಂಡ ಕುರಿತು ವಿಚಾರಿಸುತ್ತಿರಬೇಕು. ಜಾಣ ಹುಡುಗರನ್ನು ಜಾಣರನ್ನಾಗಿ ಮಾಡುವುದಕ್ಕಿಂತ ಕಡಿಮೆ ಅಂಕ ಗಳಿಸಿದವರನ್ನು ತರಬೇತುಗೊಳಿಸಬೇಕಾಗಿದೆ. ನಮ್ಮ ಯೋಗಕೇಂದ್ರದಲ್ಲಿ ಕಲಿತವರು ಹೊರದೇಶದಲ್ಲಿ ಯೋಗ ಕಲಿಸಲು ಹೋಗಿದ್ದು ಹೆಮ್ಮೆಯ ಸಂಗತಿ ಎಂದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಂಡು ವಿಶೇಷ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಈರಣ್ಣ ಸಂಕಣ್ಣವರ, ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್.ಪಾಟೀಲ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಬಿ.ನಲವಡೆ, ಸುಭಾಸ ಕಾಮಣ್ಣವರ, ಎಂ.ಗಿರೀಶ, ಪಾಲಕರ ಪ್ರತಿನಿಧಿ ಆರ್.ಬಿ.ಸಾಲಿ, ವಸತಿ ನಿಲಯದ ಮೇಲ್ವಿಚಾರಕಿ ಸಾವಿತ್ರಿ ಮರಲಿಂಗಣ್ಣವರ, ಎಂ.ಸಿ.ಭಾಂಡೇಕರ, ಸಿ.ಬಿ.ಕಾರಬಾರಿ, ಐ.ಕೆ.ಮಠಪತಿ, ಶೇಖರ ಮುಪ್ಪೆöÊನವರಮಠ, ಎನ್.ಎಸ್.ಕಬ್ಬೂರ, ಎಸ್.ಎಸ್.ಹಿರೇಮಠ ಇದ್ದರು.

loading...