ಹಳ್ಳ ಹಿಡಿಯುವತ್ತ ಸ್ಮಾರ್ಟಸಿಟಿ ಯೋಜನೆ !

0
766

ಪಿಎಂಸಿ ಕಂಪನಿ ಕೈಗೊಳ್ಳುವ ಕ್ರಿಯಾ ಯೋಜನೆಗಳಿಂದಾಗಿ ಸಮಸ್ಯೆ ಶೃಷ್ಠಿ

ಮಾಲತೇಶ ಮಟಿಗೇರ ಬೆಳಗಾವಿ: ಬೆಳಗಾವಿ ಸ್ಮಾರ್ಟಸಿಟಿ ಯೋಜನೆಗಳು ಟಿಎಂಸಿ ಕಂಪನಿ ಸಿಬ್ಬಂದಿಗಳ ಕೊರತೆ ಹಾಗೂ ಸರಿಯಾದ ಕ್ರಿಯಾ ಯೋಜನೆಗಳನ್ನು ರೂಪಿಸದೆ ಇರುವ ಕಾರಣ ಸ್ಮಾರ್ಟಸಿಟಿ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳು ಮೇಲ್ನೊಟಕ್ಕೆ ಗೋಚರಿಸುತ್ತಿವೆ. ಕೇಂದ್ರ ಸರ್ಕಾರದ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಆಯ್ಕೆಯಾದ ಬೇರೆ ನಗರಗಳಂತೆ ಬೆಳಗಾವಿ ನಗರದಲ್ಲಿ ಕಾರ್ಯಗಳು ನಡೆಯದೆ ಕುಂಟಿತವಾಗುತ್ತಿವೆ. ಇದಕ್ಕೆಲ್ಲಾ ಕಾರಣ ಪಿಎಂಸಿ ಕಂಪನಿಯು ಒಂದು ಬೋಗಸ್ ಕಂಪನಿಯಾಗಿದ್ದು, ಇವರು ಕೈಗೊಳ್ಳುವ ಕ್ರಿಯಾ ಯೋಜನೆಗಳಿಂದಾಗಿ ಸಮಸ್ಯೆಗಳೆ ಹೆಚ್ಚು ಶೃಷ್ಠಿ ಯಾಗುತ್ತಿವೆ. ಅವೈಜ್ಞಾನಿಕ ಕ್ರಿಯಾ ಯೋಜನೆಗಳ: ಬೆಳಗಾವಿ ಸ್ಮಾರ್ಟ್ಸಿಟಿ ಕನ್ಸಲ್ಟನ್ಸಿ ಕಂಪನಿಯು ನಿರ್ಮಿಸುತ್ತಿರುವ ಕ್ರಿಯಾ ಯೋಜನೆಗಳ ಬೆಳಗಾವಿ ಜನತೆಗೆ ಯೋಗ್ಯವಲ್ಲದ ಯೋಜನೆಗಳನ್ನೇ ರೂಪಿಸಲಾಗಿದೆ ಎನ್ನಬಹುದು. ಸೈಕಲ್ ಟ್ರ್ಯಾಕ್, ಹೇರಿಟೆಜ್ ಪಾರ್ಕ ಹಲವಾರು ಯೋಜನೆಗಳು ಯೋಗ್ಯವಲ್ಲದಾಗಿವೆ. ಅಲ್ಲದೆ ಈಗ ನಿರ್ಮಾಣ ಮಾಡುತ್ತಿರುವ ಪಾರ್ಕ್ ನಿರ್ವಹಣೆ ಯಾಗಬಲ್ಲದೆ ಎಂಬ ಪ್ರಶ್ನೆ ಕಾಡುತ್ತಿದೆ. ಸಿಬ್ಬಂದಿಗಳ ಕೊರತೆ: ಸ್ಮಾರ್ಟಸಿಟಿ ಯೋಜನೆಗಳನ್ನು ರೂಪಿಸಲು ಟ್ರ್ಯಾಕ್ಟ್ ಬಲ್ ಇಂಡಿಯಾ ಕಂಪನಿಗೆ ನೀಡಲಾಗಿದೆ. ಆದರೆ ೧೮ ರಿಂದ ೨೦ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕಾದ ಕಚೇರಿಯಲ್ಲಿ ೭ ರಿಂದ ೮ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಅದಲ್ಲದೇ ಟ್ರ್ಯಾಕ್ಟ್ ಬಲ್ ಇಂಡಿಯಾ ಕಂಪನಿಯ ಮುಖ್ಯ ಅಧಿಕಾರಿಯೇ ಎರಡು ಬಾರಿ ಬದಲಾವಣೆಗೊಂಡಿರುವುದು ಸಮಸ್ಯೆಗಳು ಶೃಷ್ಠಿಯಾಗಿದೆ ಎನ್ನಬಹುದು. ಇನ್ನೂ ಬೆಳಗಾವಿ ಸ್ಮಾರ್ಟಸಿಟಿ ಯೋಜನೆ ಅಧಿಕಾರಿಗಳ ನಿಯಂತ್ರಣಕ್ಕೆಂದೆ ಇರುವ ಮೇಲಾಧಿಕಾರಿಗಳಿಗೂ ಸಹ ಸ್ಮಾರ್ಟ್ಸಿಟಿ ಯೋಜನೆಗಳ ತಾಂತ್ರಿಕತೆ ಬಗ್ಗೆ ಮಾಹಿತಿ ಇಲ್ಲವೆಂದು ಮೇಲ್ನೊಟಕ್ಕೆ ತಿಳಿಯುತ್ತಿದೆ. ಕಾರಣ ಈ ಹಿಂದೆ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಸಾರ್ವಜನಿಕರು ನೀಡಿದಂತ ಸಲಹೆ ಪ್ರಕಾರವಾಗಿ ಯೋಜನೆ ತಯಾರಿಸಲಾಗಿತ್ತು. ಆದರೆ ಟ್ರ್ಯಾಕ್ಟ್ ಬಲ್ ಇಂಡಿಯಾ ಕಂಪನಿಯವರು ಮತ್ತು ಅಧಿಕಾರಿಗಳು ಅವೆಲ್ಲವನ್ನು ಬಿಟ್ಟು ತಮ್ಮದೆಯಾದ ಜ್ಞಾನವನ್ನು ಬಳಕೆ ಮಾಡಿ ಯೋಜನೆಗಳನ್ನು ರೂಪಿಸಿದ್ದಾರೆ. ಉದಾಹರಣೆ ಎಂಬಂತೆ ನಗರದ ಕೆಪಿಟಿಸಿ ಭವನ ರಸ್ತೆ ಹಾಗೂ ಮಾಂಡೋಳಿ ಸ್ಮಾರ್ಟ್ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಜನತೆಗೆ ಯಾವ ರೀತಿಯ ಬಳಕೆಯಾಗಲಿದೆ ಎಂಬುದು ಹಾಶ್ಯಾಸ್ಪದವಾಗಿದೆ. ನಿವೃತ್ತ ಅಧಿಕಾರಿಗಳ ವಸತಿ ಕೇಂದ್ರ: ಬೆಳಗಾವಿ ಸ್ಮಾರ್ಟಸಿಟಿ ಅಧಿಕಾರಿಗಳ ನೇಮಕ ವಿಷಯದಲ್ಲಿ ಇದರ ಬಗ್ಗೆ ಅರ್ಹತೆ ಇಲ್ಲದ ಅಧಿಕಾರಿಗಳ ನೇಮಕ ಮಾಡಲಾಗಿದೆ. ಸರ್ಕಾರಿ ನಿವೃತ್ತ ಅಧಿಕಾರಿಗಳನ್ನು ಇಲ್ಲಿ ನೇಮಕ ಮಾಡಲಾಗಿದ್ದು, ಸ್ಮಾರ್ಟಸಿಟಿ ಕಚೇರಿಯು ನಿವೃತ್ತ ಅಧಿಕಾರಿಗಳ ವಸತಿ ಕೇಂದ್ರವಾಗಿ ನಿರ್ಮಾಣವಾಗಿ ಎಂದರೆ ತಪ್ಪಾಗಲಾರದು. ಇನ್ನೂ ಸ್ಮಾರ್ಟಸಿಟಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೂ ಸಹ ಸ್ಮಾರ್ಟಸಿಟಿ ಯೋಜನೆಗಳ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದೆ ಇರುವ ಕಾರಣವಾಗಿ ಅಧಿಕಾರಿಗಳು ಹೇಳಿದ ಯೋಜನೆಗಳಿಗೆ ತಲೆಯಾಡಿಸುತ್ತಿದ್ದಾರೆ ಎನ್ನಬಹುದು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆಎಎಸ್ ಅಧಿಕಾರಿಯೇ ಆಗಬೇಕು ಎಂಬ ಕಾನೂನು ಏನು ಇಲ್ಲ. ತಂತ್ರಜ್ಞಾನ ಬಗ್ಗೆ ಹೆಚ್ಚಿಗೆ ಜ್ಞಾನವಿರುವ ಖಾಸಗಿ ವ್ಯಕ್ತಿಯನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿಯೂ ಸಹ ನೇಮಕ ಮಾಡಬಹುದು. ಆದ್ದರಿಂದ ಅಂತಹ ಜ್ಞಾನವಂತವರನ್ನು ನೇಮಕ ಮಾಡಿದರೆ ಉತ್ತಮ ಎಂಬುದು ಜನರ ಅಭಿಪ್ರಾಯವಾಗಿದೆ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಒತ್ತಡ:  ಮಹಾನಗರ ಪಾಲಿಕೆ ಆಯುಕ್ತರನ್ನೇ ಸ್ಮಾರ್ಟಸಿಟಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕ ಮಾಡಿರುವುದು ಯೋಜನೆಗಳಿಗೆ ಕುಂಟಿತವಾಗಿದೆ ಎನ್ನಬಹುದು. ಒಂದಡೇ ಮಹಾನಗರ ಪಾಲಿಕೆ ಆಯುಕ್ತರಾಗಿ ನಗರದ ಕುಡಿಯುವ ನೀರು, ಆರೋಗ್ಯ, ರಸ್ತೆ , ಸೇರಿದಂತೆ ಹಲವಾರು ಕೆಲಸಗಳ ಮೇಲೆ ನಿಗಾ ವಹಿಸಬೇಕಾಗದ ಆಯುಕ್ತರನೇ ಸ್ಮಾರ್ಟಸಿಟಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿರುವುದು, ಆಯುಕ್ತರ ಮೇಲೆ ಒತ್ತಡವಾಗಿದೆ. ಆದ್ದರಿಂದ ಸ್ಮಾರ್ಟಸಿಟಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಿದರೆ ಉತ್ತಮವಾಗಿರುತ್ತದೆ ಎಂಬುದು ಜನಾಪ್ರಿಯವಾಗಿದೆ. ಹಿಂದೆ ಉಳಿದ ವೆಬ್‌ಸೈಟ್: ಆಧುನಿಕತೆ ಬೆಳೆದಂತೆ ಜಗತ್ತು ತಂತ್ರಜ್ಞಾನದ ಹೆಮ್ಮರವಾಗಿ ಬೆಳೆದಿದೆ. ಕೆಲವೊಂದು ಸರ್ಕಾರಕ್ಕೆ ಸಂಬಂಧ ಪಟ್ಟ ಯೋಜನೆಗಳು ಮಾಧ್ಯಮಕ್ಕಿಂತಲೂ ಹೆಚ್ಚು ವೇಗವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆದರೆ ಇಷ್ಟೇಲ್ಲಾ ಸೌಲಭ್ಯವಿದ್ದರು. ಸಹ, ಬೆಳಗಾವಿಯ ಸ್ಮಾರ್ಟಸಿಟಿಯ ಯೋಜನೆಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ದೊರೆಯದೆ ಜನರು ಗೊಂದಲಕ್ಕೆ ಇಡಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳ ಕ್ರಿಯಾ ಯೋಜನೆಗಳು ಸ್ಮಾರ್ಟಸಿಟಿ ವೆಬ್ ಸೈಟ್‌ನಲ್ಲಿ ಸರಿಯಾಗಿ ಅಪ್‌ಡೇಟ್ ಮಾಡದೆ ಇರುವ ಕಾರಣದಿಂದ ಜನರಲ್ಲಿ ಇನ್ನೂ ಸಹ ಸ್ಮಾರ್ಟಸಿಟಿವೆಂದರೆನು ಎಂಬುವುದರ ಬಗ್ಗೆ ಗೊಂದಲದಲ್ಲಿದ್ದಾರೆ. ಒಟ್ಟಾರೆಯಾಗಿ ಬೆಳಗಾವಿ ಸ್ಮಾರ್ಟಸಿಟಿ ಯೋಜನೆ ಅಧಿಕಾರಿಗಳ ಕೊರತೆ , ಅರ್ಹತೆ ಇಲ್ಲದೆ ನಿವೃತ್ತ ಅಧಿಕಾರಿಗಳು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಸ್ಮಾರ್ಟಸಿಟಿ ಹಳ್ಳ ಹಿಡಿಯುವ ಲಕ್ಷಣಗಳು ಮೇಲ್ನೊಟಕ್ಕೆ ಗೊಚರಿಸುತ್ತಿವೆ.
ಶಾಸಕರಿಂದ ಅಧಿಕಾರಿಗಳಿಗೆ ತರಾಟೆ :ಕಳೆದ ಕೆಲವು ದಿನಗಳ ಹಿಂದೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಲಹಾ ಸಮಿತಿಯಲ್ಲಿ ಶಾಸಕರು ಸ್ಮಾರ್ಟ್ಸಿಟಿ ಯೋಜನೆಗಳ ಬಗ್ಗೆ ಆಕ್ಷೇಪ ವ್ಯಕ್ತ ಪಡೆಸಿದ್ದಾರೆ. ಬೆಳಗಾವಿ ಸ್ಮಾರ್ಟ್ಸಿಟಿ ಕನ್ಸಲ್ಟನ್ಸಿ ಕಂಪನಿಯು ಸಹ ಸರಿಯಾಗಿಲ್ಲ. ಸ್ಮಾರ್ಟ್ಸಿಟಿಯಡಿ ರೂಪಿಸಿದ ಕ್ರಿಯಾ ಯೋಜನೆಗಳು ಸಂಪೂರ್ಣ ಅವೈಜ್ಞಾನಿಕವಾಗಿವೆ. ಅಲ್ಲದೆ ಕಂಪನಿ ಕೆಲಸವನ್ನು ವಿಳಂಬ ಮಾಡಿರುವುದಕ್ಕೆ ಲಕ್ಷಾಂತರ ದಂಡ ವಿಧಿಸಲಾಗಿದೆ. ಹಾಗೇ ಮುಂದುವರೆಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಅನುಪಯುಕ್ತ ಯೋಜನೆಗಳನ್ನು ಕೈಬಿಟ್ಟು ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ತರಾಟೆಗೆ ತೆಗೆದುಕೊಂಡಿದ್ದರು.
loading...