ಸೆ.09ಕ್ಕೆ ಜೆಸಿಐ ಘಟಕ ವತಿಯಿಂದ ಸಪ್ತಾಹ ಕಾರ್ಯಕ್ರಮ

0
50

ಕನ್ನಡಮ್ಮ ಸುದ್ದಿ-ಭಟ್ಕಳ: ಸೆ.09ಕ್ಕೆ ಜೆಸಿಐ ಭಟ್ಕಳ ಘಟಕದ ವತಿಯಿಂದ ಜೆಸಿಐ ಸಪ್ತಾಹ ಕಾರ್ಯಕ್ರಮವನ್ನು ಭಟ್ಕಳ ನ್ಯೂ ಇಂಗ್ಲೀಷ್ ಸ್ಕೂಲ್ ಶಾಲೆ ಕಮಲಾವತಿ ಸಭಾಭವನದಲ್ಲಿ ಅಯೋಜಿಸಲಾಗಿದೆ ಎಂದು ಜೆಸಿಐ ಭಟ್ಕಳ ಘಟಕದ ಅಧ್ಯಕ್ಷ ಕೆ ಜಬ್ಬರ ಸಾಹೇರ ಸಾಹೇಬ್ ತಿಳಿಸಿದರು.
ಅವರು ಬುಧವಾರ ಸನಾ ಆಫ್ಟೀಕ್ಸ್ ಕಛೇರಿಯಲ್ಲಿ ಕರೇದ ಸುದ್ದಿಗೋಷ್ಠಿಯನ್ನುದ್ದೇದಿಸಿ ಮಾತನಾಡಿದರು. ಕಳೇದ 2017-18 ನೇ ಸಾಲಿಗೆ ಅಧ್ಯಕ್ಷನಾದ ನಾನು ಮತ್ತು ನನ್ನ ತಂಡ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದೆವೆ. ಹೆದ್ದಾರಿ ಮಾರ್ಗ ತೋರಿಸುವ ಫಲಕಗಳು, ರಸ್ತೆನಿಯಮಗಳ ಫಲಕಗಳನ್ನು ನಗರ ಪ್ರಮುಖ ಭಾಗದಲ್ಲಿ ಆಯಾ ಇಲಾಖೆಯ ಸಹಭಾಗಿತ್ವದಲ್ಲಿ ಅಳವಡಿಸಿದ್ದೇವೆ. ವಿದ್ಯಾರ್ಥಿಗಳಿಗಾಗಿ ಅನೇಕ ಸ್ಪರ್ಧಾ ಕಾರ್ಯಕ್ರಮಗಳನ್ನು ಎರ್ಪಡಿಸಿ ಹುರಿದುಂಬಿಸಿದಲ್ಲದೇ ವಕ್ತಿತ್ವ ವಿಕಸನವಾಗುವ ತರಭೇತಿಗಳನ್ನು ನುರಿತ ತರಬೇತುದಾರರಿಂದ ನೀಡಲಾಗಿದೆ ಎಂದು ತಿಳಿಸಿದರು. ಇದಲ್ಲದೇ ಜೆಸಿಐ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಷಣಾ ಶಿಬಿರ, ತಿಳುವಳಿಕೆ ಶಿಬಿರಗಳನ್ನು ಎರ್ಪಡಿಸಿ ಉಚಿತ ಶಸ್ತ್ರ ಚಿಕಿತ್ಸೆಗೂ ಕೂಡ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು. ಜೆಸಿಐಯಿಂದ ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳಿಗೂ ಯಾವುದೇ ರೀತಿಯ ದೇಣಿಗೆಯನ್ನು ಸಾರ್ವಜನಿಕರಿಂದ ಸಂಗ್ರಹಿಸದೇ ಸದಸ್ಯರ ವಂತಿಗೆಯ ಮೂಲಕ ಮಾಡಿರುವುದು ನಮಗೆ ಹೆಮ್ಮೆ ಎನ್ನಿಸುತ್ತದೆ ಎಂದು ತಿಳಿಸಿದರು.

ವರ್ಷದ ಕೊನೆಯ ಕಾರ್ಯಕ್ರವಾದ ಜೆಸಿಐ ಸಪ್ತಾಹ ಕಾರ್ಯಕ್ರಮವನ್ನು ನಗರದ ನ್ಯೂ ಇಂಗ್ಲೀಷ ಸ್ಕೂಲ್ ಶಾಲೆಯ ಕಮಲಾವತಿ ಸಭಾಭವನದಲ್ಲಿ ಸೆ.9 ರವಿವಾರ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ 1 ಸಾವಿರಕ್ಕೂ ಹೆಚ್ಚೂ ಜನರು ಆಗಮಿಸಿರುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಸಂಜೆ 4 ಘಂಟೆಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಮೊದಲಿಗೆ ಡ್ಯಾನ್ಸ ಸ್ಫರ್ದೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಮೂರು ಮುತ್ತು ಖ್ಯಾತಿಯ ನಾಟಕ ತಂಡದಿಂದ ನಾಟಕ ನಡೆಯಲಿದೆ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಜೆಸಿಐ ಭಟ್ಕಳ ಘಟಕದ ಕಾರ್ಯದರ್ಶೀ ರಮೇಶ ಖಾರ್ವಿ, ಸದಸ್ಯರಾದ ಈಶ್ವರ ನಾಯ್ಕ, ಮೋಹನ ನಾಯ್ಕ, ಸುರೇಶ ಪೂಜಾರಿ, ಶಂಕರ ನಾಯ್ಕ, ನಾಗರಾಜ ಮೊಗೇರ ಹಾಗೂ ನಾಸೀರ ಹುಸೇನ್ ಮುಂತಾದವರು ಈ ಸಂದರ್ಬದಲ್ಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...