ಸಾರ್ವಜನಿಕರು ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಿ: ಡಾ.ಮಹಾಂತಶೆಟ್ಟಿ

0
15

ಕನ್ನಡಮ್ಮ ಸುದ್ದಿ-ಬೆಳಗಾವಿ: ಆರೋಗ್ಯವೆನ್ನುವದು ದೇವರು ನೀಡಿದ ವರದಾನ. ಅದನ್ನು ಕಾಪಾಡಿಕೊಳ್ಳಲು ಸರಳ ಜೀವನ ಪದ್ದತಿಯೇ ಮೂಲ ಅಂಶವಾಗಿದೆ. ಆದ್ದರಿಂದ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಿರಿ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಗುರುವಾರ ಯಳ್ಳೂರ ಗ್ರಾಮದ ಪರಮೇಶ್ವರ ನಗರದಲ್ಲಿನ ಸಾರ್ವಜನಿಕ ಬಾಲವಿಕಾಸ ಗಣೇಶೋತ್ಸವ ಮಂಡಳದ ಸಂಯೋಗದಲ್ಲಿ ಪರಮೇಶ್ವರ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ, ಡಾ. ಪಾರ್ವತಿ ನರಗುಂದ, ದಂತ ತಜ್ಞೆ ಡಾ. ಪ್ರಜ್ಞಾ ಸಿಂಗ ಹಾಗೂ ನೇತ್ರ ತಜ್ಞೆ ದಿನಾರ ದಲಾಯತ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಇತಾಪೆ, ಯಳ್ಳೂರಿನ ಸಾರ್ವಜನಿಕ ಬಾಲವಿಕಾಸ ಗಣೇಶೋತ್ಸವ ಮಂಡಳದ ಅಧ್ಯಕ್ಷ ಶ್ರಿÃ ಆನಂದ ಉಟಕೇಕರ ಹಾಗೂ ಉಪಾಧ್ಯಕ್ಷ, ಇನ್ನಿತರೆ ಸದಸ್ಯರು ಹಾಗೂ ಗ್ರಾಮಸ್ತರು ಭಾಗವಹಿಸಿದ್ದರು.

loading...