ಸಿ.ವಿ ರಾಮನ್ ವಿದ್ಯಾರ್ಥಿಗಳಿಗೆ ಮಾದರಿ:ಪ್ರೊ.ಆಯಾಚಿತ್

0
20

ಕನ್ನಡಮ್ಮ ಸುದ್ದಿ-ಬೆಳಗಾವಿ: ಇಂದಿನ ಜಗತ್ತು ವಿಜ್ಞಾನದ ಮೇಲೆಯೇ ನಿಂತಿದೆ. ವಿಜ್ಞಾನದ ಬೆಳವಣಿಗೆ ಜಗತ್ತಿನ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಸಿದ್ಧರಾಗಬೇಕೆಂದು ಭೌತಶಾಸ್ತç ವಿಭಾಗದ ಪ್ರಾಧ್ಯಾಪಕ ಪ್ರೊ.ಹೆಚ್. ಎನ್. ಆಯಾಚಿತ್ ಅಭಿಪ್ರಾಯ ತಿಳಿಸಿದರು.
ಅವರು ನಗರದಲ್ಲಿ ಗುರುವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜ್ ನಲ್ಲಿ ವಿಜ್ಞಾನ ವಿಭಾಗದÀ ಭೌತಶಾಸ್ತçದ ವಿದ್ಯಾರ್ಥಿಗಳಿಗೊಸ್ಕರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತು ವಿಜ್ಞಾನದ ಮೇಲೆಯೇ ನಿಂತಿದೆ. ವಿಜ್ಞಾನದ ಬೆಳವಣಿಗೆ ಜಗತ್ತಿನ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಸಿದ್ಧರಾಗಬೇಕು. ನಮ್ಮ ವಿದ್ವಾರ್ಥಿಗಳು ಸಮಾನವಾದ ಸ್ಪರ್ಧೆಯನ್ನು ಮಾಡಲು ಅಣಿಯಾಗಬೇಕು. ಆದರೆ ಇಂದಿನ ವಿದ್ಯಾರ್ಥಿಗಳು ಪ್ರತಿಯೊಂದಕ್ಕೂ ಸಮಸ್ಯೆಯನ್ನು ಮುಂದಿಟ್ಟುಕೊಂಡು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಾರೆ. ಸ್ವತಂತ್ರ ಪೂರ್ವದಲ್ಲಿ ಭಾರತಕ್ಕೆ ವಿಜ್ಞಾನ ಕ್ಷೆÃತ್ರಕ್ಕೆ ಸಿ.ವಿ ರಾಮನ್ ಮೊದಲ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
ಆದ್ದರಿಂದ ಅವರು ಸಾರ್ವಕಾಲಿಕವಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುತ್ತಾರೆ. ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಯಾವಾಗಲೂ ಕೌತುಕತೆ ಮತ್ತು ಸೂಕ್ಷö್ಮವಾಗಿ ಗಮನಿಸುವ ಮನೋಭಾವನೆ ಬೆಳಸಿಕೊಳ್ಳಬೇಕು. ಆಗ ವಿದ್ಯಾರ್ಥಿಗಳು ತಮ್ಮ ಕ್ಷೆÃತ್ರದಲ್ಲಿ ವಿಶಿಷ್ಟವಾದ ಸಾಧನೆ ಮಾಡಲು ಸಾಧ್ಯವೆಂದರು.
ಪ್ರೊ.ಸಿ.ಎಂ.ತ್ಯಾಗರಾಜರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿವೇಕದಿಂದ ವಿಮೋಚನೆಯೆಡೆಗೆ ಸಾಗಲು ಸಮಯ ಪಾ¯ನೆ ಮತ್ತು ಶಿಸ್ತು ಬಹಳ ಮುಖ್ಯವಾದುದು. ಆಗ ವಿದ್ಯಾರ್ಥಿ ಬದುಕು ಹಸನಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭೌತಶಾಸ್ತçದ ಪ್ರಾಧ್ಯಾಪಕರಾದ ಬಾಲಾಜಿ ಡಿ. ಆಳಂದೆ ಮತ್ತು ಆಧಿನಾಥ ಉಪಾಧ್ಯೆ, ಉಪನ್ಯಾಸಕ ಡಾ. ಪ್ರವೀಣ, ಅಫ್ರಿÃನ್, ವೀಣಾ, ರಾಜಕುಮಾರ ಪಾಟೀಲ, ಕಿರಣ, ಶ್ರಿÃದೇವಿ ಚೌಗುಲೆ, ನಾರಾಯಣ ನಾಯ್ಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಿರಣ ನಿರೂಪಿಸಿದರು, ಮೋಹನ್ ಪ್ರಾರ್ಥಿಸಿದರು, ಪುಷ್ಪಾ ಸ್ವಾಗತಿಸಿದರು, ರೂಪಾ ವಂದಿಸಿದರು.

loading...