ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

0
29

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಚಿನ್ನ-ಬೆಳ್ಳಿ ಕೆಲಸಗಾರರ ಹಾಗೂ ವ್ಯಾಪರಸ್ಥರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಭರಣ ತಯಾರಕರು ಮತ್ತು ವರ್ತಕರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ದುರ್ಗದ ಬೈಲ್​ನಿಂದ ತಹಶೀಲ್ದಾರ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆಭರಣ ತಯಾರಕರು ಮತ್ತು ವರ್ತಕರು, ಚಿನ್ನ-ಬೆಳ್ಳಿ ಕೆಲಸಗಾರರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದು, ರೈತರಿಗೆ ನೀಡುವಂತೆ ಶೇ. 3ರ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಆಭರಣ ಕೆಲಸಗಾರರ ಕ್ಷೇಮ ಕಾಯಲು ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಚಿನ್ನ-ಬೆಳ್ಳಿ ವ್ಯಾಪರಸ್ಥರಿಗೆ ಪೊಲೀಸರಿಂದ ತೀವ್ರ ತೊಂದರೆಯಾಗುತ್ತಿದ್ದು, ಕದ್ದ ಮಾಲುಗಳ ರಿಕವರಿ ಹೆಸರಿನಲ್ಲಿ ಆಭರಣ ವರ್ತಕರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನ ಕೂಡಲೇ ನಿಲ್ಲಿಸಬೆಕು ಎಂದು ಆಗ್ರಹಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಆಭರಣ ತಯಾರಕರು ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ ಶಶಿಧರ ಮಾಡ್ಯಾಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

loading...