ವೈದ್ಯಕೀಯ ಲೋಕ ಸಾಕಷ್ಟು ಸುಧಾರಣೆಯಾಗಿದೆ: ಡಾ. ಚಿನಿವಾಲರ

0
10

ಕನ್ನಡಮ್ಮ ಸುದ್ದಿ-ಗದಗ: ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚಿದಂತೆ ವೈದ್ಯಕೀಯ ರಂಗ ಆಧುನಿಕತೆಯ ಇಂದಿನ ದಿನಗಳಲ್ಲಿ ವೈದ್ಯಕೀಯ ಲೋಕ ಸಾಕಷ್ಟು ಸುಧಾರಣೆಗೊಂಡಿದೆ ಎಂದು ಗಂಗಾವತಿಯ ಹಿರಿಯ ವೈದ್ಯರಾದ ಡಾ.ವ್ಹಿ.ವ್ಹಿ.ಚಿನಿವಾಲರ ಅಭಿಪ್ರಾಯಪಟ್ಟರು. ಶನಿವಾರ ಗದಗ ಐಎಂಎ ಸಭಾಂಗಣದಲ್ಲಿ 2018-19 ಅವಧಿಯ ಐಎಂಎ ಶಾಖೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.
ವೈದ್ಯರು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಗಳ ಆರೋಗ್ಯವನ್ನು ಉತ್ತಮಪಡಿಸಲು ಮುಂದಾಗಬೇಕಿದೆ. ವೈದ್ಯರು ತಮ್ಮ ವೃತ್ತಿಯಲ್ಲಿ ಸೇವಾ ಮನೋಭಾವವನ್ನೂ ಬೆಳಸಿಕೊಳ್ಳಬೇಕೆಂದ ಡಾ.ಚಿನಿವಾಲರ ವೈದ್ಯರು ಮತ್ತು ಕುಟುಂಬ ಯೋಜನೆಯಡಿ ರೂಪಿಸಲಾಗಿರುವ ಯೋಜನೆಯ ವಿವರಣೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೋಲಾಪೂರದ ಹಿರಿಯ ವೈದ್ಯರಾದ ಡಾ.ವಿಜಯ ಪಾಟೀಲ ಅವರು ಮಾತನಾಡಿ, ವೈದ್ಯರು ಮತ್ತು ರೋಗಿಯ ಮಧ್ಯೆ ಸ್ನೇಹಪರ ಸಂಬಂಧವಿರಬೇಕು. ಸಾಮಾನ್ಯವಾಗಿ ವೈದ್ಯರು ತಮ್ಮ ವೃತ್ತಿಯಲ್ಲಿ ಎಲ್ಲ ರೋಗಿಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉತ್ತಮ ಸೇವೆ ನೀಡಲು ಮುಂದಾಗುವರು ಹಾಗೆಯೇ ವೈದ್ಯರ ಬಳಿ ಚಿಕಿತ್ಸೆಗೆ ಬರುವ ರೋಗಿಗಳು ತಮಗಿರುವ ಆರೋಗ್ಯದ ಸಮಸ್ಯೆಗಳನ್ನು ಮುಕ್ತಮನಸ್ಸಿನಿಂದ ತೆರೆದಿಟ್ಟಾಗ ಮಾತ್ರ ಉತ್ತಮ ಚಿಕಿತ್ಸೆ ನೀಡಲು ಸಾಧ್ಯ. ಕೆಲವು ಕಾಯಿಲೆಗಳು ರೋಗಿ ಹೇಳಿಕೊಳ್ಳದಿದ್ದರೂ ವೈದ್ಯಕೀಯದ ಹಲವು ಪರೀಕ್ಷೆಗಳಿಂದ ರೋಗಿ ಆರೋಗ್ಯದ ಸ್ಥಿತಿ ಸ್ಪಷ್ಠಗೊಳ್ಳುತ್ತದೆ. ಕಾಯಿಲೆಯ ತೀವ್ರತೆ ಹೆಚ್ಚಿದಾಗ, ತಡವಾಗಿ ವೈದ್ಯರ ಬಳಿ ಚಿಕಿತ್ಸೆಗೆ ಬಂದಾಗ ಪರಿಸ್ಥಿತಿಯನ್ನು ಹತೋಟಿಗೊಳಿಸಲು ವೈದ್ಯರು ಸಾಕಷ್ಟು ಶ್ರಮಿಸಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ಚಿಕಿತ್ಸೆಗೆ ಬಂದವರು ಹಾಗೂ ಸಂಬಂಧಿಕರು ವೈದ್ಯರೊಂದಿಗೆ ಸಮಾಧಾನದಿಂದ ವರ್ತಿಸುವದು ಅವಶ್ಯವಿದೆ ಎಂದರು.
ಐಎಂಎ ಗದಗ ಶಾಖೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.ಧನೇಶ ದೇಸಾಯಿ ಅವರು ಸ್ವಾಗತಿಸಿ ತಮ್ಮ ಅಧಿಕಾರದ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಯೋಜನೆಗಳನ್ನು ವಿವರಿಸಿ ಸರ್ವರ ಸಹಕಾರ ಕೋರಿದರು ಕೊನೆಗೆ ಕಾರ್ಯದರ್ಶಿ ಡಾ.ಶರಣು ಆಲೂರ ವಂದಿಸಿದರು. ಪದಾಧಿಕಾರಿಗಳು ಐಎಂಎ ಗದಗ ಶಾಖೆಯ ನೂತನ ಅಧ್ಯಕ್ಷರಾಗಿ ಡಾ.ಧನೇಶ ದೇಸಾಯಿ, ಗೌರವ ಕಾರ್ಯದರ್ಶಿಯಾಗಿ ಡಾ.ಶರಣು ಆಲೂರ, ಸಹ ಕಾರ್ಯದರ್ಶಿಯಾಗಿ ಡಾ.ಸುನಿತಾ ಕುರಡಗಿ, ಖಜಾಂಚಿಯಾಗಿ ಡಾ.ಸಂತೋಷ ಹುಯಿಲಗೋಳ, ನಿಯೋಜಿತ ಅಧ್ಯಕ್ಷರಾಗಿ ಡಾ.ರಾಧಿಕಾ ಕುಲಕರ್ಣಿ ಉಪಾಧ್ಯಕ್ಷರಾಗಿ ಡಾ.ಪ್ರಕಾಶ ಧರಣಾ ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಡಾ.ಆರ್.ಎನ್.ಗೋಡಬೋಲೆ, ಡಾ.ಎನ್.ಎಸ್.ಬಿರಾದಾರ, ಡಾ.ವ್ಹಿ.ಎಸ್.ಹೊಸಮಠ, ಡಾ.ಎಸ್.ವ್ಹಿ.ರೇಶ್ಮೆ, ಡಾ.ಪಿ.ವ್ಹಿ.ಮಾರಗಿ, ಡಾ.ಪ್ರಕಾಶ ಕೋಲೋಳಗಿ, ಡಾ.ವಿಜಯ ಸಜ್ಜನರ, ಡಾ.ಹೆಚ್.ಐ.ಮಾಲಿ, ಡಾ.ಪ್ರಶಾಂತ ಪಾಟೀಲ, ಡಾ.ಅಜಯ ರಾಜು, ಡಾ.ಶ್ರೀಧರ ಕುರಡಗಿ ಅಕಾಡೆಮಿಕ್ ಕೌನ್ಸಿಲ್ ಸಮಿತಿಗೆ ಡಾ.ಕೆ.ಡಿ.ಗೋಡಖಿಂಡಿ, ಡಾ.ಸಂಜೀವ ಜೋಷಿ, ಡಾ.ಲಿಂಗರಾಜ ಬಾಳಿಹಳ್ಳಿಮಠ, ಡಾ.ರಾಜಶೇಖರ ಪಾಟೀಲ, ಡಾ.ಸಿ.ಆರ್.ಬಳ್ಳಾರಿ, ಡಾ.ಬಸವರಾಜ ಬೊಮ್ಮನಹಳ್ಳಿ, ಡಾ.ಶ್ವೇತಾ ಸಂಕನೂರ, ಡಾ.ವಿಜಯ ಅಂಗಡಿ, ಡಾ.ಜಯರಾಜ ಪಾಟೀಲ, ಡಾ.ಶಿವರಡ್ಡಿ ಬಂಡಿ, ಸಾಂಸ್ಕøತಿಕ ಸಮಿತಿಗೆ ಡಾ.ಎಸ್.ಎ.ಜಮಾದಾರ, ಡಾ.ಜಿ.ಎಸ್.ಪಲ್ಲೇದ, ಡಾ.ತುಕಾರಾಮ ಸೂರಿ, ಡಾ.ವಿಶ್ವನಾಥ ಕುಲಕರ್ಣಿ, ಡಾ.ಭರತ ಬಿಡಿನಹಾಳ. ಕ್ರೀಡಾ ಸಮಿತಿಗೆ ಡಾ.ಗುರುಪ್ರಸಾದ, ಡಾ.ಎಸ್.ಎಸ್.ನೀಲಗುಂದ, ಡಾ.ಬಸವರಾಜ ಪಡಾರ, ಡಾ.ರಾಹುಲ ಶಿರೋಳ, ಡಾ.ಕುನಾಲ ಅಳ್ಳೊಳ್ಳಿ. ರಾಜ್ಯ ಸಮಿತಿಗೆ ಡಾ.ಬಿ.ಆರ್.ಬಸವರೆಡ್ಡಿ, ಡಾ.ಮೋಹನ ಕುರಡಗಿ, ಡಾ.ಉದಯ ಕುಲಕರ್ಣಿ, ಡಾ.ದತ್ತಮೂರ್ತಿ ಕುಲಕರ್ಣಿ, ಡಾ.ಪವನಕುಮಾರ ಪಾಟೀಲ ಆಯ್ಕೆಗೊಂಡಿದ್ದಾರೆ.

loading...