ಮಹರ್ಷಿ ವಾಲ್ಮಿÃಕಿ ಜಯಂತಿ ಅದ್ಧೂರಿ ಆಚರಣೆ: ಅಮರಾವದಗಿ

0
19

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ಅ.೨೪ರಂದು ನಡೆಯಲಿರುವಂತಹ ಮಹರ್ಷಿ ವಾಲ್ಮಿÃಕಿ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ಧೂರಿಯಿಂದ ಆಚರಿಸಬೇಕೆಂದು ತಹಸೀಲ್ದಾರ್ ಎ.ಡಿ.ಅಮರಾವದಗಿ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಜರುಗಿದ ಮಹರ್ಷಿ ವಾಲ್ಮಿÃಕಿ ಜಯಂತಿ ಅಂಗವಾಗಿ ನಡೆದಂತಹ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಹಿಂದಿನ ವರ್ಷದಲ್ಲಿ ವಿವಿಧ ಇಲಾಖೆಗಳಿಗೆ ನೀಡಿದಂತಹ ಜವಾಬ್ದಾರಿಯನ್ನೆÃ ಈ ವರ್ಷವೂ ಸಹ ಮುಂದುವರೆಸಿದ್ದು, ತಮಗೆ ವಹಿಸಿದಂತಹ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಜಯಂತಿಯನ್ನು ಯಶಸ್ವಿಗೊಳಿಸಬೇಕು. ಹಾಗೂ ಸಭೆಗೆ ಗೈರು ಹಾಜರಿ ಇದ್ದಂತಹ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದರು.
ಸಮಾಜದ ಮುಖಂಡ ಶಿವನಗೌಡ ಪಾಟೀಲ ಮಾತನಾಡಿ, ವಿವಿಧ ಇಲಾಖೆಗಳಿಗೆ ವಹಿಸಿದಂತಹ ಜವಾಬ್ದಾರಿ ಹಾಗೂ ಆರ್ಥಿಕ ಸಹಾಯಧನವನ್ನು ಅ.೨೦ರೊಳಗೆ ತಲುಪಿಸುವ ವ್ಯವಸ್ಥೆ ಆಗಬೇಕು. ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಸಹ ಸಮಯಕ್ಕೆ ಸರಿಯಾಗಿ ಹಾಜರಿದ್ದು ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಇಓ ಆರ್.ವೈ.ಗುರಿಕಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಎಸ್.ಬಿ.ಹರ್ತಿ, ಆರ್‌ಡಬ್ಲುö್ಯಎಸ್ ಎಇಇ ಬಾಬುರಾವ್ ಜ್ಯೊÃತಿ, ಬಿಇಓ ವಿ.ವಿ.ಸಾಲಿಮಠ, ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ನಾಗರಾಜ ಪೋತರಾಜ, ದೇವಪ್ಪ ತಳವಾರ, ಥಾವರೆಪ್ಪ ಲಮಾಣಿ, ಮಂಜುನಾಥ ಶಂಕಿನದಾಸರ, ಹುಮಾಯೂನ್ ಮಾಗಡಿ, ಹೊನ್ನಪ್ಪ ಶಿರಹಟ್ಟಿ, ಮಂಜುನಾಥ ಘಂಟಿ, ಬಸವರಾಜ ನಾಯ್ಕರ, ಪಕ್ಕಣ್ಣ ಕುಸ್ತಿ, ಯಲ್ಲಪ್ಪ ಬಂಗಾರಿ, ಕಿರಣ ಹಾದಿಮನಿ ಇದ್ದರು.

loading...