ಉಚಿತ ಸೈಕಲ್ ವಿತರಣೆ

0
49

ಕನ್ನಡಮ್ಮ ಸುದ್ದಿ-ಕಲಘಟಗಿ: ಬಡ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ವ್ಯಾಸಂಗ ಮಾಡಬೇಕೆಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ತಾಲೂಕಿನ ಮಿಶ್ರೀಕೋಟಿ ಗ್ರಾಮದ ಶಿವಪ್ಪಣ್ಣ ಜಿಗಳೂರ ಪ.ಪೂ.ಕಾಲೇಜ್‍ನ ಪ್ರೌಢ ಶಾಲಾ ವಿಭಾಗದ 8ನೆಯ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದ ಅವರು, ಸೈಕಲ್ ಬಳಕೆಯಿಂದ ಶರೀರ ಸದೃಢವಾಗುತ್ತದೆ. ಅತಿಯಾದ ವಾಯು ಮಾಲಿನ್ಯದಿಂದ ಅನೇಕ ರೋಗಗಳು ಬರುತ್ತಿದ್ದು, ವಿದ್ಯಾರ್ಥಿಗಳು ಸೈಕಲ್ ಬಳಕೆಯನ್ನು ಹಚ್ಚು ಮಾಡಬೇಕು ಎಂದರು. ಉಚಿತ ಪುಸ್ತಕ, ಹಾಲು ಪೂರ್ಯಕೆ, ವಿದ್ಯಾರ್ಥಿ ವೇತನ, ಉಚಿತ ಆರೋಗ್ಯ ತಪಾಸಣೆ ಮುಂತಾದ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ತವನಪ್ಪ ಮನಸಾಲಿ, ಸದಾನಂದ ಚಿಂತಾಮಣಿ, ಪ್ರಾಚಾರ್ಯ ಐ.ಎಸ್.ಕಲಘಟಗಿ, ಮುಖ್ಯೋಪಾಧ್ಯಾಯ ಸಿ.ಬಿ.ಗುಡಿಮನಿ, ನಿಂಗಪ್ಪ ಸುತಗಟ್ಟಿ, ಶಿವಾನಂದ ಹುರಕಡ್ಲಿ, ಯಲ್ಲಪ್ಪ ಕುಂದಗೋಳ, ದ್ರುವಾ ಗಾಮನಗಟ್ಟಿ, ನಾಗಪ್ಪ ಕುರುಬರ, ಮಹದೇವಪ್ಪ ಕೆಳಗಿನಮನಿ, ಬಾಬು ತಮಾಟಿ, ಅಕ್ಬರ ಮೂಲಿಮನಿ, ವಿಠ್ಠಲ ಜಾಧವ, ರೂಪಾ ಗಂಜೀಗಟ್ಟಿ, ಗಿರಿಜಾ ಗೌಳಿ, ರಿಯಾನಾ ಬಾಣಿವಾಲೆ, ಮುಮತಾಜ ಗೂಡುಬಾಯಿ, ಶಾಂತವ್ವ ಚಲವಾದಿ, ಲಕ್ಷ್ಮೀ ಸುಣಗಾರ ಹಾಗೂ ಸಿಬ್ಬಂದಿ ಇದ್ದರು.

loading...