ರೆಫೆಲ್ ಯುದ್ದ ವಿಮಾನ ಖರೀದಿ ಮಾಹಿತಿ ನೀಡಲು ಬಿಜೆಪಿ ಹಿಂದೇಟು: ಪಾಟೀಲ

0
38

ಕನ್ನಡಮ್ಮ ಸುದ್ದಿ-ರೋಣ: ಭಾರತ ದೇಶವ ಪ್ರಗತಿಯತ್ತ ಸಾಗಿಸುವುದೇ ನನ್ನ ಮೊದಲ ಗುರಿಯಾಗಿದೆ ಎಂದು ಚುನಾವಣೆಯ ಪೂರ್ವದಲ್ಲಿ ಮತದಾರರನ್ನು ಒಲಿಸಿಕೊಳ್ಳುವಲ್ಲಿ ಬೆಣ್ಣೆಯಂತಹ ಮಾತುಗಳಾನ್ನಾಡಿ ಅಧಿಕಾರದ ಚುಕ್ಕಾಣಿ ಹಿಡಿದು ಸುಮಾರು ನಾಲ್ಕುವರೆ ವರ್ಷಗಳು ಗತಿಸಿವೆ. ಇಲ್ಲಿವರೆಗೆ ಯಾವುದೇ ರೀತಿಯ ಪ್ರಯೋಜನ ದೊರೆತ್ತಿಲ್ಲ. ಬರೀ “ಅಚ್ಛೇ ದಿನ್ ಆಯೇಗಾ”ಎಂಬ ಘೋಷಣೆಯನ್ನೇ ಭಾಷಣ ಮಾಡುತ್ತಾ ನಾಲ್ಕುವರೆ ವರ್ಷಗಳನ್ನು ಗಳಿಸಿದ್ದಾರೆ ಎಂದು ಪುರಸಭೆ ಸದಸ್ಯ ಮಿಥುನ್ ಪಾಟೀಲ ಹೇಳಿದರು.
ರೋಣ ಪಟ್ಟಣದ ಯುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಉನ್ನತಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಫೆಲ್ ಯುದ್ಧ ವಿಮಾನದಲ್ಲಿ ಸುಮಾರು 1ಲಕ್ಷದ 30 ಸಾವಿರ ಕೋಟಿ ರೂ.ಗಳ ಹಗರಣ ಎಸಗಿದ್ದಾರೆ. ಈ ಕುರಿತು ಮಾಹಿತಿಯನ್ನು ಒದಗಿಸಲು ಯಾಕೆ ಹಿಂದೇಟು ಹಾಕುತ್ತಲಿದ್ದಾರೆ ಮೋದಿಯವರು ಎಂದು ಮೋದಿಯವರ ನಡೆಯನ್ನು ಪ್ರಶ್ನಿಸಿದರು. ರಫೆಲ್ ಯುದ್ದ ವಿಮಾನ ಹಗರಣ: ದೇಶದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಪ್ರಗತಿಯತ್ತ ಸಾಗಿಸುವೆ ಎಂದು ಹೇಳುತ್ತಾ ಇಂದು ದೇಶವನ್ನೇ ಕೊಳ್ಳೆ ಹೊಡೆಯುತ್ತಲಿದ್ದಾರೆ. ಅಧಿಕಾರ ವಹಿಸಿದ ನಂತರ ಯುದ್ದ ವಿಮಾನಗಳನ್ನು ಖರೀದಿಗಾಗಿ 540 ಕೋಟಿಗಳನ್ನು ವ್ಯಯಿಸುತ್ತಲಿತ್ತು, ಫೆಬ್ರುವರಿ 16-2017ರಲ್ಲಿ ರಫೆಲ್ ಒಂದಕ್ಕೆ ಸುಮಾರು 1660 ಕೋಟಿಯನ್ನು ವ್ಯಯಿಸುತ್ತಲಿದೆ. 2015ರ ವೇಳೆಗೆ 36 ಜೆಟ್ ಯುದ್ಧ ವಿಮಾನಗಳನ್ನು ಬರಲಿವೆ ಎಂದು ಹೇಳಿ ಸರ್ಕಾರಿ ಸ್ವಾಮ್ಯದ ಎಚ್‍ಎಎಲ್ ಕಂಪನಿಯನ್ನು ತೊರೆದು ಎಲೆಕ್ಷನ್‍ಗೆ ದುಡ್ಡು ಕೊಡೋ ರಿಲಾಯನ್ಸ ಕಂಪನಿ ಅಂಬಾನಿಗೆ ನಿಗದಿಗೊಳಿಸಿ ಇನ್ನಷ್ಟು ನಿರುದ್ಯೋಗವನ್ನು ಸೃಷ್ಠಿಸಿದೆ ಎಂದು ರಾಜ್ಯ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ನಾಶಿರ ಖಾನ್ ಪಠಾನ್ ಆರೋಪಿಸಿದರು.
ನಿರುದ್ಯೋಗ ಯುವಕರಿಗೆ ಉದ್ಯೋಗವನ್ನು ಸೃಷ್ಠಿಸಿ ದೇಶವನ್ನು ಮುನ್ನಡೆಸುವೆ ಎಂದು ಹೇಳಿದ ಪ್ರಧಾನಿಯವರ ಮಾತು ಎಲ್ಲಿ ಹೋಯಿತು ಎಂದರು.ತೈಲ ಬೆಲೆಯು ಇಂದು ಗಗನಕ್ಕೆರಿ ಜನಸಾಮಾನ್ಯರನ್ನು ನಿಂದೆಗೆಡಿಸಿದೆ. ಅದರಂತೆ ರೈತರಿಗೆ ಆವದೇ ರೀತಿಯ ಯೋಜನೆಗಳು ದೊರೆಯದ ಹಾಗೇ ನಿರ್ಮಾವಾಗಿದೆ.ಯುಪಿಎ ಸರ್ಕಾರದ ಯೋಜನೆಗಳನ್ನೆ ನಮ್ಮ ಯೋಜನೆಗಳು ಎಂದು ಹೇಳಿಕೊಳ್ಳುತ್ತಲಿದ್ದಾರೆ ಎಂದರು.ಈ ವಿಷಯದ ಕುರಿತು ಅಂದಿನಪ್ರಧಾನಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರ್ಯರೂಪಕ್ಕೆ ತಂದಿದ್ದಾರೆ. ಆದರೆ ಹೆಸರು ಮಾತ್ರ ಬಿಜೆಪಿಯದು ಎಂದರು. ಪುರಸಭೆ ಸದಸ್ಯ ಮಿಥುನ್ ಪಾಟೀಲ, ವ್ಹಿ.ಬಿ.ಸೋಮನಕಟ್ಟಿಮಠ, ಸಂಗು ನವಲಗುಂದ, ಹಾಲೇಶ ಹಳ್ಳಿ, ನಾಶಿರಖಾನ್ ಪಠಾನ, ಅಶೋಕ ಕಬ್ಬಿರಹಳ್ಳಿ, ಪ್ರವೀಣ, ಜಗದೀಶ ಹಿರೇಮಠ, ಶರಣಪ್ಪ ಸಂದಿಗವಾಡ, ವಿಜಯಲಕ್ಷ್ಮೀ ದ್ವಾಸರ ಇದ್ದರು.

loading...