ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ

0
68

ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಕನ್ನಡಮ್ಮ ಸುದ್ದಿ-ಬೆಳಗಾವಿ:ಸಾಲ ಭಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ಲ ಗ್ರಾಮದಲ್ಲಿ ನಡೆದಿದೆ.

ಬೋರಗಲ್ಲ ಗ್ರಾಮದ ಸಂಜಯ ದುಂಡಪ್ಪ ಮಗದುಮ್ಮ (೩೩)ಮೃತ ದುರ್ದೈವಿ,
ಪಿಕೆಪಿಎಸ್ ಎಂಜಿ ಬ್ಯಾಂಕ್ ಗಳಲ್ಲಿ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಸುಮಾರು ೨ ಲಕ್ಷ ೩೦ ಸಾವಿರ,ಮತ್ತು ೧ ಲಕ್ಷ ಕೈ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ.

ಸಾಲ ಭಾದೆ ತಾಳಲಾರದೆ ಇಂದು ಮುಂಜಾನೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

loading...