ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಮಹತ್ವದ್ದು: ರೇವಡಿ

0
131

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಗ್ರಾಮ ಸ್ವಚ್ಛತೆ, ಆರೋಗ್ಯ ಸಂರಕ್ಷಣೆ ಮತ್ತು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ಮಂಜುಳಾ ರೇವಡಿ ಹೇಳಿದರು.ಸಮೀಪದ ನೆಲ್ಲೂರ ಗ್ರಾಮದಲ್ಲಿ ಎಸ್.ಎಂ ಭೂಮರೆಡ್ಡಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಪ್ರಸ್ತುತ ಮಹಿಳೆ ದುಡಿಯುವ ಸಾಮಥ್ರ್ಯ ಬೆಳೆಸಿಕೊಂಡಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಇನ್ನೂ ಹಲವು ಜವಬ್ದಾರಿಗಳನ್ನು ನಿಭಾಯಿಸುತ್ತಿದ್ದಾಳೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಉತ್ತಮ ಸಾಧನೆಗೈಯುತ್ತಿದ್ದು ಸ್ತ್ರೀ ಸಮಾಜದ ಬದುಕಿನಲ್ಲಿ ಪುರುಷರಿಗೆ ಸರಿಸಮಾನವಾಗಿ ನಿಲ್ಲುವ ಮೂಲಕ ಶಿಕ್ಷ ಣ, ನಾಗರಿಕತೆ ಹಾಗೂ ತನ್ನ ಸಮಾನ ಹಕ್ಕುಗಳನ್ನು ಒದಗಿಸುವ ಕೆಲಸವಾಗಬೇಕು ಎಂದರು. ಜಿ.ಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿ, ಮಹಿಳೆಯರು ರಾಜಕೀಯ ಪ್ರಜ್ಞೇಯಂತ ತಮ್ಮ ಸ್ಥಾನಮಾನ ವನ್ನು ತಿಳಿದು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗ ಬೇಕು. ನೊಂದ ಮಹಿಳೆಯರು ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಸೇವೆಯನ್ನು ಪಡೆಯುವಂತಾಗ ಬೇಕು. ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣಬೇಕು. ಜತೆಗೆ ಗೌರವಿಸಬೇಕು. ಹಾಗಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಶಂಕ್ರಮ್ಮಾ ನರಗುಂದ, ಅಪ್ಸರಾ ಒಂಟಿ, ಗ್ರಾಯತ್ರಿ ಹೊಸಳ್ಳಿ, ಶಶಿಕಲಾ ಕುಲಕರ್ಣೀ, ಗೀತಾ ಬೇವಿನಗಿಡದ, ರಾಮವ್ವ ಚವ್ಹಾಣ, ಮರಿಯವ್ವ ಮಾದರ, ಶರಣಮ್ಮಾ ಜುಕ್ತಿಹಿರೇಮಠ, ಅರವಿಂದ ವಡ್ಡರ, ಸಂತೋಷ ವಾಲಿಕಾರ, ಜ್ಯೋತಿ ಗದಗ, ಸಾವಿತ್ರಿ ತಳವಾರ, ವಿಜಯಲಕ್ಷ್ಮಿ ಚಳಗೇರಿ ಇದ್ದರು.

loading...