ಹಿಂದುಸ್ಥಾನ ಪುನರ್ ನಿರ್ಮಾಣಕ್ಕೆ ಮೋದಿ ಪಣ: ಪಂಪಣ್ಣನಾಯಕ

0
12

ಕನ್ನಡಮ್ಮ ಸುದ್ದಿ-ಗಂಗಾವತಿ: ನಮ್ಮ ದೇಶ ಸನಾತನ ಸಂಸ್ಕøತಿಯನ್ನು ಹೊಂದಿದೆ. ಭಾರತವನ್ನು ಪುನರ್ ಹಿಂದು ರಾಷ್ಟ್ರ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಯುಗ ಪುರುಷನಂತೆ ಜನ್ಮ ತಾಳಿ ಬಂದಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಅಧ್ಯಕ್ಷ ಕೆ.ಪಂಪಣ್ಣನಾಯಕ ತಿಳಿಸಿದರು.
ಗುಂಡಮ್ಮಕ್ಯಾಂಪ್(ಲಕ್ಷ್ಮಿಕ್ಯಾಂಪ್)ನಲ್ಲಿ ಪುನರ್ ನಿರ್ಮಾಣಗೊಂಡಿರುವ ತಾಯಮ್ಮದೇವಿ ದೇವಸ್ಥಾನದಲ್ಲಿ ದಂಪತಿ ಸಮೇತ ಹೋಮ ಹವನಾದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಸ್ಲಿಂರ ದಾಳಿಯಿಂದಾಗಿ ಭಾರತ ಪರಕೀಯವಾಗಿತ್ತು. ಪಕ್ಕದಲ್ಲಿರುವ ವಿಶ್ವವಿಖ್ಯಾತ ಹಂಪಿಯನ್ನು ಮುಸ್ಲಿಂ ದಾಳಿಕೋರರು ಧ್ವಂಸಗೊಳಿಸಿದರು. ಇದನ್ನು ಮಾಡಿದ್ದಲ್ಲದೆ ದರೋಡೆಯನ್ನು ಸಹ ಮಾಡಿದರು. ಸನಾತನ ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
ನಮ್ಮ ಪ್ರದೇಶ ಹನುಮ ಜನಿಸಿದ ನಾಡಾಗಿದೆ. ಕುಮ್ಮಟ ದುರ್ಗದ ಗಂಡುಗಲಿ ಕುಮಾರರಾಮ ನಡೆದಾಡಿದ ಕ್ಷೇತ್ರವಾಗಿದೆ. ಕನಕಗಿರಿ ಸಂಸ್ಥಾನವನ್ನು ವಾಲ್ಮೀಕಿ ನಾಯಕ ಜನಾಂಗದವರು ಪಾಳೆಗಾರರಾಗಿರುವದು ಇತಿಹಾಸದಲ್ಲಿದೆ ಎಂದು ತಿಳಿಸಿದರು. ಹಿಂದು ಧರ್ಮ ಯಾರಿಗೂ ಕೇಡನ್ನು ಬಯಸುವುದಿಲ್ಲ. ಎಲ್ಲ ವರ್ಗಗಳ ಜನರನ್ನು ಅಪ್ಪಿಕೊಳ್ಳುವ ಧರ್ಮವಾಗಿದೆ. ಮುಸ್ಲಿಂ ಭಯೋತ್ಪಾದಕರು ಇಡೀ ಜಗತ್ತಿಗೆ ತಲೆ ನೋವಾಗಿದ್ದಾರೆ. ಇವರನ್ನು ಕಾಂಗ್ರೆಸ್ ಮುಖಂಡರು ಪೋಷಿಸುತ್ತಿದ್ದಾರೆ ಎಂದು ಟೀಕಿಸಿದರು.
ತಾಯಮ್ಮ ದೇವಿ ಶಕ್ತಿ ಸ್ವರೂಪಳಾಗಿದ್ದಾಳೆ. ಈ ದೇವಿಯನ್ನು ನಂಬಿದವರು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಾರೆ ಎಂದು ತಿಳಿಸಿದರು. ಸಂಘ ಪರಿವಾರದ ಹಿರಿಯ ಮುಖಂಡ ದುರ್ಗಾದಾಸ್ ಭಂಡಾರಕರ್, ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ, ಉಪ್ಪಾರ ಸಮಾಜದ ಮುಖಂಡ ಯಂಕಪ್ಪ ಕಟ್ಟಿಮನಿ ಪಾಲ್ಗೊಂಡಿದ್ದರು.

loading...