ಅಪರೂಪದ ವೈದ್ಯ; ಡಾ.ಭುವನೇಶ್ ಆರಾಧ್ಯ

0
49

ಒಬ್ಬ ರೋಗಿ ತೀರಾ ತೊಂದರೆಯಲ್ಲಿರುವಾಗ ವೈದ್ಯರನ್ನು ಪಕ್ಕಾ ದೇವರೆಂದೇ ಪರಿಗಣಿಸಿ ‘ವೈದ್ಯೊÃ ನಾರಾಯಣ ಹರಿ’ ಎನ್ನುವದು ಸಾಮಾನ್ಯ. ಅದೇ ರೋಗಿ ಒಂದೊಮ್ಮೆ ಕಾಯಿಲೆಯಿಂದ ಗುಣಮುಖನಾದರೆ ವೈದ್ಯರು ನಮ್ಮ ಹಾಗೆಯೇ ಮನುಷ್ಯರು ಅವರು ದೇವರಲ್ಲ ಎನ್ನುವ ಭಾವ ತಾಳಬಹುದು. ಆಸ್ಪತ್ರೆಯ ಬಿಲ್ ಕೈಗೆ ಬಂದಾಗ ವೈದ್ಯರನ್ನು ಪರಿಗಣಿಸುವ ರೀತಿಯೇ ಇನ್ನೂ ಬೇರೆಯಾಗಿರಬಹುದು. ಈ ಎಲ್ಲ ಸಂದರ್ಭಗಳನ್ನು ಮೀರಿಯೂ ಆ ರೋಗಿ ವೈದ್ಯರನ್ನು ನಿಜವಾಗಿಯೂ ಗೌರವಿಸುವವನಾಗಿದ್ದರೆ, ಆ ವೈದ್ಯರು ನಿಜವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ, ರೋಗಿಗಳ ಪ್ರಿÃತಿಗೆ ಭಾಜನರಾಗಿದ್ದಾರೆ ನಿಜವಾಗಿಯೂ ಅವರೊಬ್ಬ ಉತ್ತಮ ವೈದ್ಯ ಎಂದರ್ಥ. ಸಾಮಾನ್ಯವಾಗಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಹೆಸರಿಡಿದು ಕರೆಯುವುದು ವಾಡಿಕೆ. ಅದು ಪರೋಕ್ಷವಾಗಿ ಶಿಕ್ಷಕ-ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಆತ್ಮಿಯತೆಯನ್ನು ಬೆಳೆಸುವದಿದೆ. ಈ ವೈದ್ಯರು ತನ್ನ ಬಳಿ ಬರುವ ಬಹುತೇಕ ರೋಗಿಗಳ ಹೆ¸ರಿಡಿದು ಕರೆಯುವುದನ್ನು ಕೇಳಿ ನನಗೆ ತೀರಾ ಅಪರೂಪ ಎನಿಸಿರುವದಿತ್ತು. ಈಚೆಗೆ ಒಂದು ಕಾಯಿಲೆಯ ನಿಮಿತ್ತ ನಾನು ಎಸ್.ಡಿ.ಎಮ್.ಆಸ್ಪತ್ರೆಗೆ ದಾಖಲಾಗಿದ್ದೆ. ಡಾ.ಭುವನೇಶ್ ಆರಾಧ್ಯ ಎನ್ನುವ ಮೂತ್ರಶಾಸ್ತç [ಯುರೋಲಾಜಿಸ್ಟ್] ವಿಭಾಗದ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಭುವನೇಶ್ ಅವರನ್ನು ಸಂಪರ್ಕಿಸುವ ಪ್ರಸಂಗ ಎದುರಾಯಿತು. ಅವರ ಬಳಿಯೇ ನಾನು ಚಿಕಿತ್ಸೆ ಪಡೆದೆ. ಅವರು ತಮ್ಮ ಬಹುತೇಕ ರೋಗಿಗಳನ್ನು ಹೆಸರಿಡಿದು ಕರೆಯುತ್ತಾ ‘ಏನು ಚನಬಸಪ್ಪ ಹ್ಯಾಂಗಿದ್ದಿÃರಿ..?’ ‘ಏನು ಕರೆಪ್ಪ ಈಗ ಹ್ಯಾಂಗೈತಿ..?’ ಎಂದೆಲ್ಲಾ ಕೇಳುವ ಜೊತೆಗೆ ತಮ್ಮ ಕಾರ್ಯದೊತ್ತಡದ ನಡುವೆಯೂ ಲವಲವಿಕೆಯಿಂದಿರುವ ಡಾ.ಭುವನೇಶ್ ನಿಜವಾಗಿಯೂ ಎಸ್.ಡಿ.ಎಮ್ ನಂಥಾ ಸಂಸ್ಥೆಗೆ ಒಂದು ಆಸ್ತಿಯೆಂದೇ ಹೇಳಬೇಕು. ತಾವು ಮಾಡುತ್ತಿರುವ ಕೆಲಸವನ್ನು ಅತ್ಯಂತ ಪ್ರಿÃತಿಯಿಂದ ಮಾಡುವ ಕೆಲವೇ ಕೆಲವು ವೈದ್ಯರಲ್ಲಿ ಡಾ.ಭುವನೇಶ್ ಆರಾಧ್ಯ ಕೂಡಾ ಒಬ್ಬರು.

ವೈದ್ಯ ಡಾ.ಭುವನೇಶ್ ಆರಾಧ್ಯ
೨೦೦೧ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ವೈದ್ಯ ಪದವಿಯನ್ನು ಪಡೆದು, ಉನ್ನತ ಶಿಕ್ಷಣಕ್ಕಾಗಿ ಚಂಡಿಗಡ ಗೆ ತೆರಳಿ ಅಲ್ಲಿ ಉನ್ನತ ವ್ಯಾಸಂಗ ಆರಂಭಿಸಿ ಎಮ್.ಎಸ್. ಪದವಿಯ ಜೊತೆಗೆ ಯುರೋಲಾಜಿ ವಿಷಯದಲ್ಲಿ ಎಮ್.ಸಿ.ಎಚ್.ಪದವಿಯನ್ನು ಗಳಿಸಿದರು. ಮೂರು ವರ್ಷಗಳ ಕಾಲ ಅಲ್ಲಿ ರೆನಲ್ ಟ್ರಾನ್ಸ್ ಪ್ಲಾಂಟ್ ಸರ್ಜರಿಯ ವಿಭಾಗದಲ್ಲಿ ರಿಜಿಸ್ಟಾçರ್ ಆಗಿ ಕೆಲಸ ಮಾಡುವ ಮೂಲಕÉ ಒಳ್ಳೆಯ ಹೆಸರನ್ನು ಗಳಿಸಿದರು. ನಂತರ ಸಾಕಷ್ಟು ಶಸ್ತçಚಿಕಿತ್ಸೆಗಳನ್ನು ಮಾಡುವ ಮೂಲಕ ಉತ್ತಮ ಕೈಗುಣ ಉಳ್ಳವರು ಎಂದು ಹೊಗಳಿಕೆಗೆ ಪಾತ್ರರಾದರು. ಡಾ. ಭುವನೇಶ ಸದ್ಯ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಮೂತ್ರಶಾಸ್ತç [ಯುರಾಲಾಜಿ] ವಿಭಾಗದ ಮುಖ್ಯಸ್ಥರಾಗಿ ಮತ್ತು ಜನಾನುರಾಗಿ ವೈದ್ಯರಾಗಿ ಗುರುತಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ರೋಗಿಗಳೊಂದಿಗೆ ಆಪ್ತವಾಗಿ ವ್ಯವÀಹರಿಸುವ ಡಾ.ಭುವನೇಶ ಒಬ್ಬ ಅಪರೂಪದ ವೈದ್ಯರು. ಅವರು ಎಂಡೊಯುರೋಲಾಜಿ, ಲ್ಯಾಪೆÇ್ರÃಸ್ಕಾಪಿಕ್ ಯುರೋಲಾಜಿ, ಮತ್ತು ರೆನಾಲ್ ಟ್ರಾನ್ಸ್ ಪ್ಲಾಂಟ್ಸ ಶಸ್ತçಚಿಕಿತ್ಸೆಯಲ್ಲಿ ವಿಶೇಷ ಹೆಸರು ಮತ್ತು ಸಾಧನೆ ಮಾಡಿದವರು. ಇಲ್ಲಿಯವರೆಗೆ ಅವರು ಸುಮಾರು ೫೦೦೦ ದಷ್ಟು ಯಶಸ್ವಿ ಶಸ್ತç ಚಿಕಿತ್ಸೆ ಮಾಡಿ ಸೈ ಅನಿಸಿಕೊಂಡಿರುವದಿದೆ. ಉತ್ತಮ ಸೇವೆಯನ್ನೆà ಗುರಿಯಾಗಿಸಿಕೊಂಡಿರುವ ಡಾ.ಭುವನೇಶ್À ಆರಾಧ್ಯ ಅವರು ತಮ್ಮ ಕ್ಷೆÃತ್ರದಲ್ಲಿ÷್ಲ ಉಂಟಾಗುತ್ತಿರುವ ಬೆಳವಣಿಗೆ ಮತ್ತು ಬದಲಾವಣೆಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುವವರು. ಆ ಬಗೆಯ ಅಕಾಡೆಮಿಕ್ ಆಸಕ್ತಿಯೇ ಅವರು ತಮ್ಮ ರೋಗಿಗಳಿಗೆ ನ್ಯಾಯ ಒದಗಿಸುವಲ್ಲಿ ನೆರವಾಗುತ್ತಿದೆ. ಈಗಾಗಲೇ ಅವರು ಅಂತರರಾಷ್ಟಿçÃಯ ಮಟ್ಟದ ಜರ್ನಲ್ ಗಳಲ್ಲಿ ಸುಮಾರು ೨೦ ರಷ್ಟು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಶಸ್ತç ಚಿಕಿತ್ಸಕರ ಭಂಗಿಯಲ್ಲಿ ಡಾ.ಭುವನೇಶ್ ಆರಾಧ್ಯ
ವೈದ್ಯ ವೃತ್ತಿ ಅಥವಾ ಸಂಬಂಧಿಸಿದ ಕ್ಷೆÃತ್ರದಲ್ಲಿ ಉನ್ನತ ಪದವಿಯನ್ನು ಪಡೆಯುವುದಷ್ಟೆÃ ಮುಖ್ಯವಲ್ಲ, ಹಾಗೆ ಪಡೆದ ವಿದ್ಯೆಯನ್ನು ಜನ ಮೆಚ್ಚುವಂತೆ ಸೇವೆ ಮಾಡುವಲ್ಲಿಯೇ ಸಾರ್ಥಕತೆಯಿದೆ. ನಾವು ಕೋಟಿಗಟ್ಟಲೆ ಹಣಕೊಟ್ಟು ಪದವಿ ಪಡೆದಿದ್ದೆÃವೆ. ಅದನ್ನು ಗಳಿಸುವದು ಬೇಡವೇ..? ಎನ್ನುವ ಪ್ರಶ್ನೆಯನ್ನು ಮೆದುಳಿಗಿಳಿಸಿಕೊಂಡು ಕೆಲಸ ಮಾಡುವದಕ್ಕೂ ಜನಸೇವೆಯ ಸುಖವೇ ಅಮೂಲ್ಯವೆಂಬ ಭಾವನೆಯನ್ನು ಹೃದಯಕ್ಕಿಳಿಸಿ ಕೆಲಸ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ನೂರಕ್ಕೆ ನೂರು ಪ್ರತಿಶತ ಪ್ರಾಮಾಣಿಕತೆ ಇರುವವರನ್ನು ಈ ಸಮಾಜವೇ ಸಹಿಸುವದಿಲ್ಲ ಎನ್ನುವ ಸತ್ಯ ನನಗೂ ತಿಳಿದಿದೆ. ಕೊನೆಯ ಪಕ್ಷ ನಮ್ಮ ಕೈಲಾದಷ್ಟಾದರೂ ಒಳ್ಳೆಯ ಸೇವೆಯನ್ನು ನೀಡುವ ಮನಸಿದ್ದರೂ ಆತ ಪಡೆದ ಶಿಕ್ಷಣ ಮತ್ತು ಒದಗಿಸುವ ಸೇವೆ ಸಾರ್ಥಕವೇ ಹೌದು. ಹಣ ಗಳಿಸುವುದು ಬಹಳ ಸುಲಭ ಆದರೆ ಹೆಸರು ಗಳಿಸುವುದು ಅಷ್ಟು ಸುಲಭವಲ್ಲ. ನಮ್ಮ ಬದುಕಿನಲ್ಲಿ ಕೊನೆಯವರೆಗೂ ನೆನಪÅಳಿಯುವ ಕೆಲವೇ ಕೆಲವರ ಸಾಲಲ್ಲಿ ಒಳ್ಳೆಯ ವೈದ್ಯರೂ ಇರುತ್ತಾರೆ. ಡಾ.ಭುವನೇಶ್ ಆರಾಧ್ಯ ನಿಜವಾಗಿಯೂ ಒಳ್ಳೆಯ ವೈದ್ಯರು, ಸಹೃದಯಿ ಮನುಷ್ಯ, ರೋಗಿಗಳ ಮನ:ಸ್ಥಿತಿಯನ್ನು ಗ್ರಹಿಸುವ ಕೌಶಲ್ಯವಿರುವವರು. ಇಂಥಾ ವೈದ್ಯರ ಸಂಖ್ಯೆ ಹೆಚ್ಚಾಗಬೇಕಿದೆಯೇ ಹೊರತು ಬರೀ ಡಿಗ್ರಿ ಪಡೆದು ಹೊರಬರುವವರ ಸಂಖ್ಯೆಯಲ್ಲ. ಪ್ರತಿಯೊಬ್ಬ ರೋಗಿಯನ್ನು ಸಮಾನ ಮನೋಭಾವದಿಂದ ಪರಿಗಣಿಸಿ, ಅವನ ಮನ:ಸ್ಥಿತಿಗೆ ತಕ್ಕಂತೆ ಸ್ಪಂದಿಸಿ ಅವನ ಕಾಯಿಲೆಯನ್ನು ಸಕಾರಾತ್ಮಕವಾಗಿ ಗುಣಪಡಿಸುವ ಅಪರೂಪದ ವೈದ್ಯ ಡಾ.ಭುವನೇಶ್À ಆರಾಧ್ಯ. ಅನೇಕ ಸಂದರ್ಭಗಳಲ್ಲಿ ಭುವನೇಶ್ ಅವರ ನೆರವಿಗೆ ಯಾರೂ ಒದಗದಿದ್ದಾಗ ನರ್ಸ್ ಗಳು ಮಾಡುವ ಕೆಲಸವನ್ನು ಕೂಡಾ ತಾವೇ ಮಾಡುವ ಮೂಲಕ ಸ್ವಾವಲಂಬನೆಯನ್ನು ಮೆರೆಯುವ ಬಗ್ಗೆ ಖುದ್ದಾಗಿ ಕೆಲ ನರ್ಸ್ ಗಳು ಮಾತಾಡುವುದನ್ನು ನಾನೇ ಕೇಳಿರುವೆ. ‘ಮಾರಾಯ್ತಿ ಭುವನೇಶ್ ಸರ್ ಯಾರೂ ಇಲ್ಲಾಂದ್ರೆ ತಾವೇ ಸ್ಟೆçಚರ್ ಎಳೆಯುವುದು, ಕರ್ಟನ್ ಹಾಕುವುದು ಮಾಡುತ್ತಾರೆ ನಮಗೇ ಮುಜುಗರವಾಗುತ್ತದೆ.’ ಎನ್ನುವ ಮಾತು ನನ್ನ ಕಿವಿಗೆ ಬಿದ್ದಿದೆ. ಡಾ.ಭುವನೇಶ ಅವರು ಹೊತ್ತಿಗೆ ಯಾರೂ ಒದಗದಿದ್ದರೆ ಯಾರನ್ನೂ ದೂರುತ್ತಾ ನಿಲ್ಲುವವರಲ್ಲ. ತಾವೇ ಆ ಕೆಲಸವನ್ನು ಮಾಡಿ ಮುಗಿಸುವವರು. ತಾನೊಬ್ಬ ಎಮ್.ಎಸ್.ಡಿಗ್ರಿ ಪಡೆದ ವೈದ್ಯ ಎನ್ನುವ ಹಮ್ಮು ಬಿಮ್ಮು ಬಿಟ್ಟು ಜನಸೇವೆ ಗಿರುವ ಸೇವಕ ಎನ್ನುವಂತೆ ಕೆಲಸ ಮಾಡುವ ಈ ವೈದ್ಯರು ಎಲ್ಲ ರೋಗಿಗಳಿಗೂ ಬಹುತೇಕವಾಗಿ ಆಪ್ತರು. ರೋಗಿಗಳು ಗುಣಮುಖರಾದ ಮೇಲೂ ಆಸ್ಪತ್ರೆಯಿಂದ ನಿರ್ಗಮಿಸಿದ ಮೇಲೂ ಒಬ್ಬ ವೈದ್ಯರನ್ನು ಹೊಗಳುತ್ತಾರೆ, ಗೌರವಿಸುತ್ತಾರೆ ಎನ್ನುವಲ್ಲಿಯೇ ಆ ವೈದ್ಯರ ಯಶಸ್ಸು ಅಡಕವಾಗಿರುತ್ತದೆ.
-ಡಾ.ಎಸ್.ಬಿ.ಜೋಗುರ

loading...