ಯುವಪೀಳಿಗೆ ಧಾರ್ಮಿಕತೆಯಲ್ಲಿ ಭಾಗವಹಿಸಲಿ: ಶಾಸಕ ಬಂಡಿ

0
29

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮದೆಯಾದ ಇತಿಹಾಸ ಹಾಗೂ ಮಹತ್ವವಿದೆ. ಹೀಗಾಗಿ ಆತ್ಮಶಾಂತಿ ಮತ್ತು ಬಾಂಧವ್ಯ ವೃದ್ಧಿಗಾಗಿ ಯುವ ಸಮೂಹವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಸ್ಥಳೀಯ 19ನೇ ವಾರ್ಡ್‍ನ ದೇವರ ದಾಸಿಮಯ್ಯ ಶಿವಾಚಾರ ಹಟಗಾರ ಸಮಾಜದ ವತಿಯಿಂದ ದಸಾರ ಹಿನ್ನಲೆಯಲ್ಲಿ ಶುಕ್ರವಾರ ನಡೆದ ಪುರಾಣ ಮಂಗಲೋತ್ಸವ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳು ವ್ಯಕ್ತಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಸನ್ಮಾರ್ಗದಲ್ಲಿ ಕೊಂಡೊಯ್ಯಲು ಸಹಕಾರಿಯಾಗಿವೆ. ಆದರೆ ಆಧುನಿಕ ತಂತ್ರಜ್ಞಾನವು ಜೀವನ ಕ್ರಮವೇ ಆಗಿರುವದರಿಂದ ಯುವ ಜನತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿಲ್ಲ. ಹೀಗಾಗಿ ಪಾಲಕರು ಮಕ್ಕಳಿಗೆ ಸಂಸ್ಕøತಿ, ಪರಂಪರೆ ಹಾಗೂ ಆಚರಣೆಗಳ ವೈಜ್ಞಾನೀಕ ಹಿನ್ನಲೆಯನ್ನು ತಿಳಿಸಿಕೊಡುವ ಜವಾಬ್ಧಾರಿಯಿದೆ. ಅಲ್ಲದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನಮ್ಮ ಸಂಸ್ಕøತಿ, ಪರಂಪರೆ ಬೆಳೆಯುವುದರ ಜೊತೆಗೆ ಧಾರ್ಮಿಕತೆಯೂ ಎಲ್ಲರಲ್ಲಿ ಮೂಡಲಿದೆ ಎಂದರು. ಸಮಾಜದ ಅಧ್ಯಕ್ಷ ಎಸ್.ಪಿ.ಮಸೂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಶಾಸಕ ಕಳಕಪ್ಪ ಬಂಡಿ, ಅಕ್ಕನ ಬಳಗದ ಅಧ್ಯಕ್ಷೆ ಸಂಯಕ್ತಾ ಬಂಡಿ ಹಾಗೂ ಪುರಸಭೆ ನೂತನ ಸದಸ್ಯ ಸುಭಾಸ ಮ್ಯಾಗೇರಿ ಅವರನ್ನು ದೇವರ ದಾಸಿಮಯ್ಯ ಶಿವಾಚಾರ ಹಟಗಾರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಅಕ್ಕನ ಬಳಗದ ಅಧ್ಯಕ್ಷೆ ಸಂಯಕ್ತಾ ಬಂಡಿ, ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ, ಮಾಜಿ ಪುರಸಭೆ ಸದಸ್ಯ ಚಂದ್ರು ಚಳಗೇರಿ, ಶಂಕ್ರಮ್ಮ ಸಿಂಹಾಸನದ, ಗೌರಾ ಸಿನ್ನೂರ, ಪಿ.ಎಚ್.ಸಿನ್ನೂರ, ಪರಮೇಶ್ವರಪ್ಪ ಜೂಚನಿ, ಪಿ.ಎಚ್.ಸಿನ್ನೂರ, ಲೀಲಾವತಿ ಸಿಂಹಾಸನದ, ಪಿ.ಕೆ.ಯಂಕಚಿ, ಜಯಶ್ರೀ ನಲವತವಾಡ, ಶ್ರೀಧರ ಯಂಕಚಿ, ವಿ.ಎಂ.ಜೂಚನಿ, ಶ್ರೀಧರ ಯಕಂಚಿ, ಬಸವರಾಜ ಜೂಜನಿ, ಬಸವರಾಜ ಯಂಕಚಿ, ಶಂಕರ ಇಂಜನಿ ಇದ್ದರು.

loading...