ಗೀಗೀಪದ ಗ್ರಾಮೀಣ ಭಾಗದಲ್ಲಿ ಇನ್ನು ಜೀವಂತ

0
27

ಕನ್ನಡಮ್ಮ ಸುದ್ದಿ-ಧಾರವಾಡ: ಸ್ವಾತಂತ್ರ್ಯೋತ್ಸವದ ಬಗ್ಗೆ ಅನ್ಯಾಯದ ವಿರುದ್ಧ ಎತ್ತಿ ಕಟ್ಟುವ ಹಾಡಾಗಿದ್ದು ನಮ್ಮ ಹಳ್ಳಿಯ ಜಾತ್ರೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಗೀಗೀ ಪದ ಕಲಾತಂಡಗಳನ್ನು ಕರೆಸಿ ಹರದೆಸಿ ಮತ್ತು ನಾಗೇಶಿ ಅಂದರೆ ಸವಾಲ ಜವಾಬ್‌ ಎನ್ನುವ ಅರ್ಥದಲ್ಲಿ ರಾತ್ರಿಯಿಡೀಯೆಲ್ಲ ಜನರು ಕುಳಿತು ಮನೋರಂಜನೆ ಮಾಡುತ್ತಿದ್ದರು ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ ಅಭಿಪ್ರಾಯಪಟ್ಟರು.
ರಾ.ಹ.ದೇಶಪಾಂಡೆ ಸಭಾಭವನದಲ್ಲಿ ರಾಜ್ಯಪ್ರಶಸ್ತಿ ವಿಜೇತೆ ಫಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಸ್ಥೆ ವತಿಯಿಂದ ಜರುಗಿದ ಗೀಗೀ ಪದದ ಹಾಡುಗಾರ್ತಿ ಫಕ್ಕೀರವ್ವ ಗುಡಿಸಾಗರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜಾನಪದ ಕಲಾಪ್ರಕಾರಗಳಲ್ಲಿ ಒಂದಾದ ಗೀಗೀಪದ ಇದು ನಮ್ಮ ಗ್ರಾಮೀಣ ಭಾಗದಲ್ಲಿ ತಳಪಾಯ ಹಾಕಿದ್ದು ಈ ಗೀಗೀ ಪದ ಹಾಡುಗಾರಿಕೆ ಲಾವಣಿ ಪದಗಳಾಗಿ ಹೊರಹೊಮ್ಮಿವೆ. ನಮ್ಮ ತಂದೆಯವರೂ ಕೂಡ ಗೀಗೀ ಪದ ಕಲಾವಿದರಾಗಿದ್ದು ಅವರು ಬರೆದ ನೂರಾರು ಹಾಡುಗಳು ಮುದ್ರಣ ಆಗದೇ ಇರುತ್ತವೆ. ಅವಕಾಶ ಸಿಕ್ಕಾಗ ಅವನ್ನೆಲ್ಲ ಮುದ್ರಿಸುವ ಕಾರ್ಯ ಮಾಡುತ್ತೇನೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಕೆ. ರಂಗಣ್ಣವರ ಅಧ್ಯಕ್ಷvವಹಿಸಿ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಪಾಟೀಲ, ಮೋಹನ ನಾಗಮ್ಮನವರ, ಬಿ.ಕೆ.ಹೊಂಗಲ, ಯಕ್ಕೇರಪ್ಪ ನಡುವಿನಮನಿ, ಕೋಟೇಶ ಉಳ್ಳಿ ಇದ್ದರು.

loading...