ಯುವಪೀಳಿಗೆ ಸಮಾಜ ಸೇವೆ ಮೈಗೂಡಿಸಿಕೊಳ್ಳಲಿ: ಮಂಜುಳಾ

0
45

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ದೇಶದ ಆಸ್ತಿಯಾಗಿರುವ ಯುವ ಸಮೂಹವು ಸಮಾಜ ಸೇವೆ ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ಸಹಕಾರಿಯಾಗಿದೆ. ಅಲ್ಲದೆ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳಾ ಹುಲ್ಲಣ್ಣವರ ಹೇಳಿದರು.
ಸಮೀಪದ ಬೇವಿನಕಟ್ಟಿ ಗ್ರಾಮದಲ್ಲಿ ಕೆಎಸ್‍ಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಮುದಾಯದ ಸೇವೆಗಾಗಿ ಜನಿಸಿರುವ ಈ ವಿಧ್ಯಾರ್ಥಿ ಸಂಘಟನೆಯು ಯುವ ಸಮೂಹದಲ್ಲಿ ನಾಯಕತ್ವ ಗುಣ ಬೆಳೆಸುವುದರ ಜೊತೆಗೆ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶ್ರಮದಾನ, ಪ್ರಗತಿಪರ ಚಿಂತನೆ ಹಾಗೂ ಮಕ್ಕಳು ಮತ್ತು ಮಹಿಳಾ ಜಾಗೃತಿ ಕುರಿತು ನೀಡುವ ಉಪನ್ಯಾಸಗಳ ಮಹತ್ವವನ್ನು ಜೊತೆಗೆ ಗ್ರಾಮೀಣ ಭಾಗದ ಬದುಕನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ. ಹೀಗಾಗಿ ಶಿಬಿರದಲ್ಲಿನ ಮಾಹಿತಿ ಹಾಗೂ ಅನುಭವನ್ನು ಜೀವನದಲ್ಲಿ ಉಪಯುಕ್ತವಾಗಸಿಕೊಳ್ಳಲು ಮುಂದಾಗಬೇಕು ಎಂದರು.
ಗಜೇಂದ್ರಗಡ ಪುರಸಭೆ ಸದಸ್ಯ ರೂಪ್ಲೇಶ ರಾಠೋಡ ಮಾತನಾಡಿ, ಸಮಾಜ ಸೇವೆಯಿಂದ ನಮಗೇನು ಲಾಭ ಎನ್ನುವ ಪ್ರಶ್ನೆ ಸಹಜವಾಗಿ ವಿದ್ಯಾರ್ಥಿಗಳಲ್ಲಿ ಮೂಡಿರುತ್ತದೆ. ಆದರೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಸಹಬಾಳ್ವೆ ಹಾಗೂ ಪ್ರತಿಭಾ ಪ್ರದರ್ಶನದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟೀಯ ಸೇವಾ ಯೋಜನೆಯ ಶಿಬಿರವು ಸಹಕಾರಿಯಾಗಿದೆ ಎಂದರು. ಎನ್.ಎಸ್.ಎಸ್ ಯೋಜನಾಧಿಕಾರಿ ಉಮೇಶ ಮಲ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಎಚ್.ಎನ್.ಗೌಡರ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದರು.
ಗ್ರಾ.ಪಂ ಸದಸ್ಯರಾದ ಬಸಯ್ಯ ಕಾರಡಗಿ, ಪರಮೇಶಪ್ಪ ಸಂಗಳದ, ಮಕ್ತುಂಬಿ ಕಂದಗಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖಪ್ಪ ನಂದಿಹಾಳ, ಅನ್ನಪ್ಪ ಹೊಸಳ್ಳಿ, ಸಂಗಪ್ಪ ರೋಣದ, ಬಸವರಾಜ ಹೊಸಳ್ಳಿ, ರವಿ ರಾಠೋಡ ಉಪನ್ಯಾಸಕರಾದ ವಿ.ಸಿ.ಯಲಿಗಾರ, ಎಸ್.ಬಿಕೊಪ್ಪದ, ಎಚ್.ಕೆ.ನರೇಗಲ್, ಪಿ.ಎಸ್.ಹುಲ್ಲೂರ, ಎಸ್.ಎಸ್.ಗೋಗಿ, ವಿ.ಎಸ್.ಹೊಸಗಂಡಿ ಇದ್ದರು.

loading...