ಮಹರ್ಷಿ ವಾಲ್ಮೀಕಿ ತತ್ವಾದರ್ಶ ಅಳವಡಿಸಿಕೊಳ್ಳಿ: ಶಾಸಕ ಬಂಡಿ

0
34

ಕನ್ನಡಮ್ಮ ಸುದ್ದಿ-ರೋಣ: ವಾಲ್ಮೀಕಿ ಮಹರ್ಷಿಗಳ ತತ್ವಾದರ್ಶವಾದ ಗುಣಗಳು ನಮ್ಮೆಲ್ಲರಿಗೂ ಮಾದರಿ. ಅಂತಹ ಮಹಾನ್ ವ್ಯಕ್ತಿಯನ್ನು ಪಡೆದ ನಮ್ಮ ರಾಷ್ಟ್ರವೇ ಪುಣ್ಯವಾದುದು. ಬಡ ಕುಟುಂಬದಲ್ಲಿ ಜನಿಸಿ ದೇಶವೇ ಹೆಮ್ಮೆ ಪಡುವ ಮಹಾನ್ ದಾರ್ಶನಿಕ ತತ್ವಜ್ಞಾನಿಯನ್ನು ಪಡೆದಿರುವ ರಾಷ್ಟ್ರವೇ ನಮ್ಮದಾಗಿದೆ. ರಾಮಾಯಣ ಎಂಬ ಮಾಹಾನ್ ಕಾವ್ಯವನ್ನು ರಚಿಸಿ ಒಂದೇ ಸಮುದಾಯಕ್ಕೆ ಮೀಸಲಾಗಿರದೇ ಇಡೀ ಮಾನವ ಕುಲಕ್ಕೆ ಆದರ್ಶವಾದವರು ಮಹರ್ಷಿ ವಾಲ್ಮೀಕಿ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ಮಹರ್ಷಿಯ ಮೌಲ್ಯಯುತವಾದ ಗುಣಗಳು ,ಆದರ್ಶವಾದವುಗಳನ್ನು ಅಂದಿನ ದಿನಮಾನಗಳಲ್ಲಿಯೇ ಮನಗಂಡ ಮಹರ್ಷಿ ಮಹಾಕಾವ್ಯವನ್ನು ರಚಸಿ ಇಂದಿಗೂ ಮಾದರಿಯಾದಂತಾಗಿದೆ ಎಂದರು.
ಎಚ್.ಬಿ.ಗುಡಿ ಮಹರ್ಷಿ ವಾಲ್ಮೀಕಿಯವರ ಜೀವನದ ಚರಿತ್ರೆಯನ್ನು ಹಾಗೂ ಪರಿವರ್ತನೆಯ ಮೂಲಕ ಸಮಾಜಕ್ಕೆ ಅಭೂತ ಪೂರ್ವವಾದ ಮಹಾಕಾವ್ಯನ್ನು ನೀಡಿದರ ಬಗೆಗೆ ಉಪನ್ಯಾಸವನ್ನು ನೀಡಿದರು. ವೇದಿಕೆಯ ಮೇಲೆ ಮಂಜುಳಾ ಹುಲ್ಲಣ್ಣವರ, ಮಲ್ಲಮ್ಮ ಬಿಚ್ಚೂರ, ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಇಂದಿರಾ ತೇಲಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಮೋಹನ ಹುಲ್ಲಣ್ಣವರ, ಬಸವಂತಪ್ಪ ತಳವಾರ, ಲಕ್ಷ್ಮಣ ಗೌಡಣ್ಣವರ, ವೈ.ಬಿ.ಚೋಳಣ್ಣವರ, ತಹಸೀಲ್ದಾರ್ ಅಜೀತ ರೈ, ತಾಪಂ ಇಓ ಎಮ್.ವ್ಹಿ.ಚಳಗೇರಿ, ಶರಣ ಕುಲಕರ್ಣಿ ಇದ್ದರು.

loading...