ಮಹಿಳೆಯರು ಸ್ವಾವಲಂಭಿಯಾಗಿ: ಶಾಸಕ ಬೆನಕೆ

0
23

ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹಿಳೆಯರು ಕರಕುಶಲ ವಸ್ತುಗಳ ತಯಾರಿಸುವುದಕ್ಕೆ ನಮ್ಮಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುತ್ತದೆ ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ಅವರು ಶನಿವಾರ ದೀಪಾವಳಿ ಹಬ್ಬದ ಪ್ರಯುಕ್ತ ದೇಶಪಾಂಡೆ ಪೌಂಡೇಶನ್ ವತಿಯಿಂದ ತಿಲಕವಾಡಿಯ ವರೇರ್ಕರ್ ನಾಟ್ಯ ಸಂಘ ಸಭಾಗಂಣದಲ್ಲಿ ಹಮ್ಮಿಕೊಂಡಿದ್ದ ನವೋದ್ಯಮಿ ಸಂತೆ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಸ್ವಾವಲಂಭಿ ಜೀವನ ಸಾಗಿಸಬೇಕು, ಮನೆಯಲ್ಲಿಯೇ ಕುಳಿತು ವಿವಿಧ ರೀತಿಯ ಕರಕುಶಲ ಗೃಹ ಬಳಕೆ ವಸ್ತುಗಳನ್ನು ತಯಾರಿ ಮೂಲಕ ಇಂತಹ ವೇದಿಕೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ದೇಶಪಾಂಡೆ ಪೌಂಡೇಷನ್ ಮಹಿಳೆಯರಿಗೆ ಉತ್ತಮ ವೇದಿಕೆ ಮಾಡಿಕೊಟ್ಟಿದ್ದು, ಇದೆ ರೀತಿ ಪ್ರತಿವರ್ಷ ಕೈಗೊಳ್ಳಲಿ ನನ್ನ ಸಹಾಯ ಸಹಕಾರ ಎಂದಿಗೂ ಇರುತ್ತದೆ ಎಂದು ಭರವಸೆ ನೀಡಿದರು.

ಕರಕುಶಲ ಪ್ರದರ್ಶನದಲ್ಲಿ ೩೬ ಜನ ಪಾಲ್ಗೊಂಡಿದ್ದು, ಗೃಹ ಅಲಂಕಾರಿಕಗೆ ವಸ್ತುಗಳು, ಆಹಾರ ಪದಾರ್ಥಗಳು, ಬಟ್ಟೆ , ಮಹಿಳೆ ಸೀರೆ ಮಾರಾಟಕ್ಕೆ ಇಡಲಾಗಿತ್ತು. ಈ ವೇಳೆ ವಿಜಯ ಮೋರೆ,ಪರಸ್ಪರ ಏಜೆಂನ್ಸಿಯ ಅಮಿತ್ ಕಾಲಕುಂದ್ರಿ, ಪರಮೇಶ್ವರ ಗಡಾದ, ವೀರಯ್ಯ ಹಿರೇಮಠ, ಪ್ರಿÃಯಾ ಪುರಾಣಿಕರ ಸೇರಿದಂತೆ ಇತರರು ಇದ್ದರು.

loading...