ಉಡಾನ೩ ರಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸಂಸದ ಅಂಗಡಿ

0
61

ಉಡಾನ೩ ರಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸಂಸದ ಅಂಗಡಿ

ಕನ್ನಡಮ್ಮ ಸುದ್ದಿ- ಬೆಳಗಾವಿ: ಉದ್ಯಮ ದೃಷ್ಟಿಯಿಂದ ಬೆಳಗಾವಿ ವಿಮಾನ ನಿಲ್ದಾಣ ಉಡಾನೆ ೩ ಯೋಜನೆಗೆ ಆಯ್ಕೆಯಾಗಿರುವುದು ಬಹಳ ಸಂತಸ ತಂದಿದೆ ,ಇದು ಬೆಳಗಾವಿ ಜನತೆಗೆ ಕೇಂದ್ರ ಸರಕಾರ ದೀಪಾವಳಿ ಕೊಡುಗೆ ನೀಡಿದೆ ಎಂದು ಸಂಸದ ಸುರೇಶ ಅಂಗಡಿ ಸಂತಸ ವ್ಯಕ್ತಪಡಿಸಿದರು .

ಶನಿವಾರ ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗೊಷ್ಠಿ ನಡೆಸಿ ಅವರು ಮಾತನಾಡಿದರು .

ಉಡಾನ್ ಯೋಜನೆಯಿಂದ ಪ್ರಯಾಣಿಕರ ಕಡಿಮೆ ವೆಚ್ವದಲ್ಲಿ ಪ್ರಯಾಣ ಬೆಳೆಸಬಹುದು ,ಇದು ಸಾಮಾನ್ಯ ಜನತೆಯೂ ಕೂಡ ವಿಮಾನ ಯಾನ ಮಾಡಬಹುದು ಎಂದು ತಿಳಿಸಿದರು .
ಇದು ಸಾಮಾನ್ಯವಾಗಿ ಇಲ್ಲಿನ ಉದ್ಯಮ ವ್ಯವಹಾರಕೆ ಸಹಕಾರಿಯಾಗಲಿದೆ .ನವೆಂಬರ್‌ ೬ ರಂದು ಸಭೆ ನಡೆಯಲಿದೆ ಇಲ್ಲಿ ಬಿಂಡಿಂಗ್ ನಡೆಯಲಿ್ಎ ಇದರಲ್ಲಿ ಸ್ಪೈಸ್ ಜಟ್ ವಿಮಾನಯಾನ ಸಂಸ್ಥೆ ಸೇರಿದಂತೆ ಕೆಲವು ಕಂಪನಿಗಳು ಭಾಗವಹಿಸಲಿವೆ. ನಂತರ ಇದರ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದರು .

ಉಡಾನ ೩ ಗೆ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆಯಾಗಲು ನಮ್ಮ ಶಾಸಕರು ನಾವು ಪ್ರಧಾನಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತವೆ ಎಂದರು .

ಈ ಸಂಧರ್ಭದಲ್ಲಿ ಶಾಸಕರಾದ ಅನಿಲ ಬೆನಕೆ,ಅಭಯ ಪಾಟೀಲ ನಗರ ಬಿಜೆಪಿ ಅಧ್ಯಕ್ಷ ರಾಜೇಂದ್ರ ಹರಕುಣಿ ಸೇರಿದಂತೆ ಇತರರು ಇದ್ದರು .

ಬಾಕ್ಸ್
ಪ್ರಧಾನಿ ಮೋದಿ ಸೂರ್ಯನಿದಂತೆ ರಮ್ಯಾನಂತವರ ಹೇಳಿಕೆ ಪ್ರತಿಕ್ರೀಯೆ ನೀಡುವ ಅವಶ್ಯಕತ ಇಲ್ಲ,ಸಿಎಂ ಇಬ್ರಾಹಿಂ ಒಬ್ಬ ಹಿರಿಯ ರಾಜಕಾರಣಿ ಅವರಿಗೆ ಯಾಕೆ ರಾಮ ಮಂದಿರನ ಮೇಲೆ ಭಕ್ತಿ ಬಂದಿದೆ ಗೊತ್ತಿಲ್ಲ ,ಉಪ ಚುನಾವಣಾಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .

loading...