ಮಕ್ಕಳಲ್ಲಿಯ ಪ್ರತಿಭೆ ಹೊರಹಾಕಲು ಕಲಾಶ್ರೀ ಉತ್ತಮ ವೇದಿಕೆ : ಬಳಿಗಾರ

0
18

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ಪ್ರತಿಯೊಂದು ವಿದ್ಯಾರ್ಥಿಯಲ್ಲಿಯೂ ಸಹ ತನ್ನದೇ ಆದಂತಹ ಪ್ರತಿಭೆ ಇರುವುದು ಸಾಮಾನ್ಯ. ಅದನ್ನು ಹೊರಹಾಕುವುದಕ್ಕಾಗಿಯೇ ಸರಕಾರ ಹಲವಾರು ವೇದಿಕೆಗಳನ್ನು ಕಲ್ಪಿಸಿದ್ದು, ಇದರಲ್ಲಿ ಕಲಾಶ್ರೀ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ ಹೇಳಿದರು.
ಅವರು ಶನಿವಾರ ಪಟ್ಟಣದ ಸಿ.ಸಿ.ನೂರಶೆಟ್ಟರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ತಾಲೂಕ ಮಟ್ಟದ ಕಲಾಶ್ರೀ ಸ್ಪರ್ಧೆ – 2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ವೇದಿಕೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಕರು ಸಹ ಮಕ್ಕಳಲ್ಲಿ ಅಡಗಿರುವಂತಹ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಮಕ್ಕಳ ಕಲ್ಯಾಣಕ್ಕಾಗಿ ಸರಕಾರ ಕೊಡಮಾಡುವಂತಹ ಎಲ್ಲ ಸೌಲಭ್ಯಗಳನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಮುಂದಾಗಬೇಕೆಂದು ಹೇಳಿದರು.
ತಾಪಂ ಅಧ್ಯಕ್ಷೆ ಸುಶಿಲವ್ವ ಲಮಾಣಿ, ತಿಪ್ಪಣ್ಣ ಕೊಂಚಿಗೇರಿ, ಸಮನ್ವಯಾಧಿಕಾರಿ ಎಚ್.ವೈ.ನದಾಫ್ ,ಸಿಡಿಪಿಓ ಗೋಡಖಿಂಡಿ ಇದ್ದರು.

loading...